*ಗೋಣಿಕೊಪ್ಪ, ಜು. ೫: ಕೀರೆಹೊಳೆಗೆ ಕಿರುಸೇತುವೆ ನಿರ್ಮಿಸಿ ಗೋಣಿಕೊಪ್ಪದ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕೊಡಗು ಮೈಸೂರು ಲೋಕಸಭಾ ಕ್ಷೇತ್ರ ಸಂಸದ ಯದುವೀರ್ ಕೃಷ್ಣದತ್ತ ಜಯಚಾಮರಾಜ್ ಒಡೆಯರ್ ಸ್ಥಳ ಪರಿಶೀಲಿಸಿದರು.

ಪೊನ್ನಂಪೇಟೆ ತಿರುವಿನ ಜಮಾಅತ್ ಮಸೀದಿಯಿಂದ ಎಂ.ಎA. ಬಡಾವಣೆವರೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಿಸುವಂತೆ ಗೋಣಿಕೊಪ್ಪ ಪಟ್ಟಣದ ಬಿಜೆಪಿ ಪ್ರಮುಖರು ಸಂಸದರಿಗೆ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿ ಸ್ಥಳ ಪರಿಶೀಲನೆ ನಡೆಸಿದ ಸಂಸದರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ರಾಜೇಶ್ ಕೆ, ಬಿ.ಎನ್. ಪ್ರಕಾಶ್, ಶಕ್ತಿ ಕೇಂದ್ರದ ಪ್ರಮುಖ್ ಮಂಜುರೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟೀರ ಕಿಲನ್ ಗಣಪತಿ, ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್, ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಮುದ್ದಿಯಂಡ ಮಂಜುಗಣಪತಿ, ಮಾದ್ಯಮ ವಕ್ತಾರ ಚೆಪುö್ಪಡೀರ ರಾಕೇಶ್, ಅಕ್ಷಯ್, ಸುಬ್ರಮಣಿ, ದೀಪು ಇದ್ದರು.