ಸಿದ್ದಾಪುರ, ಜು. ೫ : ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಚೇಲವಾರ, ಹರಪಟ್ಟು. ಕಡಂಗ ಮರೂರು. ಪುದುಕೋಟೆ ಗುಹ್ಯ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳ ಹಿಂಡನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಯಿತು. ಆದರೆ ಕಾಡಾನೆಗಳು ಕಾಫಿ ತೋಟಗಳಿಂದ ಕಾಡಿನತ್ತ ತೆರಳಲು ಹಿಂದೇಟು ಹಾಕಿದವು. ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ, ಕೆ.ವಿ. ಶಿವರಾಂ. ನೇತೃತ್ವದಲ್ಲಿ ಕಳೆದೆರಡು ದಿನಗಳಿಂದ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಕಾಡಾನೆಗಳು ಕಾಫಿ ತೋಟದಿಂದ ಕಾಡಿನತ್ತ ತೆರಳಲು ಹಿಂದೇಟು ಹಾಕುತ್ತಿವೆ. ಧಾರಾಕಾರ ಮಳೆ ಹಾಗೂ ಕೆಸರಿನ ನಡುವೆ ಕಾರ್ಯಾಚರಣೆ ತಂಡವು ಶ್ರಮವಹಿಸುತ್ತ ಕಾಡಾನೆಗಳನ್ನು ಓಡಿಸಲು ಯತ್ನಿಸಿದರು ಕೂಡ ಕೆಲವು ಕಾಡಾನೆಗಳು ಗುಂಪಿನಿAದ ಬೇರ್ಪಟ್ಟು ಕಾಫಿ ತೋಟದಲ್ಲಿ ಉಳಿದುಕೊಂಡವು. ಕಾರ್ಯಾಚರಣೆ ಸಂದರ್ಭದಲ್ಲಿ ೪ ಮರಿಯಾನೆಗಳು ಕಂಡುಬAದವು ಎಂದು ವಲಯ ಅರಣ್ಯ ಅಧಿಕಾರಿ ಶಿವರಾಂ ಮಾಹಿತಿ ನೀಡಿದರು. ಕಾರ್ಯಾಚರಣೆ ಸಂದರ್ಭದಲ್ಲಿ ಕಡಂಗಮರೂರು ಗ್ರಾಮದಲ್ಲಿ ೫ ಮತ್ತು ಪುದುಕೋಟೆಯಲ್ಲಿ ೨ ಕಾಡಾನೆಗಳು ಮತ್ತು ಸಲಗಗಳು ಕೂಡ ಕಂಡುಬAದಿತು. ಗುಹ್ಯ ಗ್ರಾಮದಲ್ಲಿ ೧೩ಕ್ಕೂ ಅಧಿಕ ಕಾಡಾನೆಗಳು ಗೋಚರಿಸಿವೆ.

ಕಾರ್ಯಾಚರಣೆಯ ಸಂದರ್ಭದಲ್ಲಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಗುಂಪು ಗುಂಪಾಗಿ ಸಂಚರಿಸುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ, ಉಪವಲಯ ಅರಣ್ಯ ಅಧಿಕಾರಿಗಳಾದ ಶ್ರೀನಿವಾಸ್, ಲೋಕೇಶ್ ಪಿ.ಸಿ. ರಾಘವ, ಸಂಜೀತ್ ಸೋಮಯ್ಯ,

(ಮೊದಲ ಪುಟದಿಂದ) ಉಪವಲಯ ಅರಣ್ಯಅಧಿಕಾರಿ ದೇವರಾಜ್ ಹಾಗೂ ಅರಣ್ಯ ಸಿಬ್ಬಂದಿಗಳು, ಆನೆ ಕಾರ್ಯ ಪಡೆ ಮತ್ತು ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು -ವಾಸು