ಮಡಿಕೇರಿ ಜು.೪ : ಬೆಂಗಳೂರಿನ ಮೀನುಗಾರಿಕೆ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿ ಕೊಡಗು ಜಿಲ್ಲೆಯ ನಾಪೋಕ್ಲು ಮೂಲದ ಬಬಿನ್ ಬೋಪಣ್ಣ ಕಲ್ಲೇಂಗಡ ಅವರು ಅಧಿಕಾರ ವಹಿಸಿಕೊಂಡರು. ಇವರು ಈ ಹಿಂದೆ ಕಾರವಾರದಲ್ಲಿ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಬೆಂಗಳೂರಿನ ಪ್ರಧಾನ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ. ಬಬಿನ್ ಅವರು ನಾಪೋಕ್ಲುವಿನ ಕಲ್ಲೇಂಗಡ ಬೋಪಣ್ಣ (ಬೋಪಿ) ಹಾಗೂ ಕಾಮಿನಿ ದಂಪತಿ ಪುತ್ರ.