ಮಡಿಕೇರಿ, ಜು.೪ : ಇತ್ತೀಚೆಗೆ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭ ವಿಸಿದ್ದ ಅಪ ಘಾತದಲ್ಲಿ ತೀವ್ರವಾಗಿ ಗಾಯ ಗೊಂಡಿದ್ದ ಕಲ್ಲುಗುಂಡಿಯ ಯುವ ವೈದ್ಯ ಡಾ. ಶಮಂತ್ ಭಟ್ (೨೫) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಡಾ. ಶಮಂತ್ ಭಟ್ ಅವರು ಕೆಲವು ದಿನಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಸುಳ್ಯ- ಬೆಳ್ಳಾರೆ ನಡುವಿನ ಸೋಣಂಗೇರಿ ಎಂಬಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರಿಗೆ ಚಿಕಿತ್ಸೆ

ಚಿಕಿತ್ಸೆ ಫಲಿಸದೆ ವೈದ್ಯ ಸಾವು

(ಮೊದಲ ಪುಟದಿಂದ) ನೀಡಲಾಗುತ್ತಿತ್ತಾದರೂ ಚೇತರಿಸಿ ಕೊಳ್ಳದೆ ನಿಧನ ಹೊಂದಿದ್ದಾರೆ. ಡಾ. ಶಮಂತ್ ಭಟ್ ಅವರು ಕಲ್ಲುಗುಂಡಿಯ ಖ್ಯಾತ ವೈದ್ಯ ಡಾ. ಶ್ಯಾಂ ಪ್ರಸಾದ್ ಭಟ್ ಅವರ ಪುತ್ರ. ಯುವ ವೈದ್ಯನ ನಿಧನಕ್ಕೆ ಕಲ್ಲುಗುಂಡಿ, ಸಂಪಾಜೆ ಹಾಗೂ ಸುಳ್ಯ ಭಾಗದ ಜನ ಸಂತಾಪ ಸೂಚಿಸಿದ್ದಾರೆ.