ಸೋಮವಾರಪೇಟೆ, ಜು.೪: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಬೆಳ್ಳಾರೆಯಲ್ಲಿ ಕಳೆದ ೨೦೨೨ರ ಜುಲೈ ೨೬ರಂದು ನಡೆದಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯ ಭಾಗವಾಗಿ ಸೋಮವಾರಪೇಟೆಯ ಯುವಕನನ್ನು ರಾಷ್ಟಿçÃಯ ತನಿಖಾ ಸಂಸ್ಥೆಯ ಅಧಿಕಾರಿಗಳು ಬಂದಿಸಿದ್ದಾರೆ.
ಸೋಮವಾರಪೇಟೆ ಪಟ್ಟಣ ಸಮೀಪದ ಕಲ್ಕಂದೂರು ಗ್ರಾಮ ನಿವಾಸಿ ಅಬ್ದುಲ್ ರೆಹಮಾನ್ ಬಂದಿತ ಆರೋಪಿ.ಘಟನೆ ನಂತರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಈತ ಇಂದು ಕೇರಳದ ಕಣ್ಣೂರು ಅಂತರರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ರಾಷ್ಟಿçÃಯ ತನಿಖಾ ಸಂಸ್ಥೆಯ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
೨೦೨೨ ರಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸದಸ್ಯನ ಹತ್ಯೆ ಪ್ರಕರಣದ ತನಿಖೆಯಲ್ಲಿ ಈ ಬಂಧನವು ಮಹತ್ವದ ಹೆಜ್ಜೆಯಾಗಿದೆ. ಎನ್ಐಎ ತನಿಖೆ ಆರಂಭಿಸಿದ ನಂತರ ಪ್ರಮುಖ ಆರೋಪಿಗಳ ಬಂಧನವಾಗುತ್ತಿದ್ದAತೆ ಕತಾರ್ಗೆ ಪರಾರಿಯಾಗಿದ್ದ ಅಬ್ದುಲ್ ರೆಹಮಾನ್ ಬಂಧನದಿAದ ತಪ್ಪಿಸಿಕೊಳ್ಳುತ್ತಿದ್ದ. ಇಂದು ಕತಾರ್ನಿಂದ ಕೇರಳದ ಕಣ್ಣೂರು
(ಮೊದಲ ಪುಟದಿಂದ) ಏರ್ಪೋರ್ಟ್ಗೆ ಬಂದಿಳಿಯುತ್ತಿದ್ದAತೆ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಕೈಗೊಂಡ ಎನ್ಐಎ ನಗದು ಬಹುಮಾನ ಘೋಷಿಸಿದ್ದ ಆರು ಮಂದಿಯಲ್ಲಿ ಈತನೂ ಒಬ್ಬನಾಗಿದ್ದ. ಈತನ ಬಗ್ಗೆ ಮಾಹಿತಿ ನೀಡಿದರೆ ೪ ಲಕ್ಷ ರೂ. ಬಹುಮಾನವನ್ನು ಎನ್ಐಎ ಘೋಷಿಸಿತ್ತು.
ಅಬ್ದುಲ್ ರೆಹಮಾನ್ ಬಂಧನದೊAದಿಗೆ ಈ ಪ್ರಕರಣದಲ್ಲಿ ಒಟ್ಟು ಬಂಧಿತರಾದ ಆರೋಪಿಗಳ ಸಂಖ್ಯೆ ೨೮ ಕ್ಕೆ ಏರಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಾಯಕತ್ವದ ಸೂಚನೆಗಳ ಮೇರೆಗೆ, ಅಬ್ದುಲ್ ರೆಹಮಾನ್, ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳು ಹಾಗೂ ಪಿತೂರಿದಾರರಿಗೆ ಆಶ್ರಯ ನೀಡಿರುವುದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.
ಕೋಮು ಉದ್ವಿಗ್ನತೆಯನ್ನು ಹರಡುವ ಉದ್ದೇಶದಿಂದ ಪ್ರವೀಣ್ ನೆಟ್ಟಾರು ಅವರ ಕ್ರೂರ ಹತ್ಯೆ ನಡೆಸಲಾಗಿದೆ. ನೆಟ್ಟಾರು ಅವರ ಮೇಲೆ ಪಿಎಫ್ಐ ಸದಸ್ಯರು ಹರಿತವಾದ ಆಯುಧಗಳಿಂದ ಧಾಳಿ ಮಾಡಿದ್ದಾರೆ. ಈ ಕೃತ್ಯವು ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸುವ ಮತ್ತು ಕೋಮು ಅಶಾಂತಿಯನ್ನು ಪ್ರಚೋದಿಸುವ ವಿಶಾಲ ಪಿತೂರಿಯ ಭಾಗವಾಗಿದೆ ಎಂದು ಎನ್ಐಎ ಅಭಿಪ್ರಾಯಿಸಿ, ತನಿಖೆಯನ್ನು ಚುರುಕುಗೊಳಿಸಿತ್ತು.
೨೦೨೨ರ ಜುಲೈ ೨೬ರಂದು ಘಟನೆ ನಡೆದ ನಂತರ ದಕ್ಷಿಣ ಕನ್ನಡದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು. ಜುಲೈ ೨೭ರಂದು ಬೆಳ್ಳಾರೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಈ ಘಟನೆಯ ಬಗ್ಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಮಾತ್ರವಲ್ಲದೆ, ಅಂದಿನ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲು, ಸುಳ್ಯದ ಶಾಸಕ ಅಂಗಾರ ಸೇರಿದಂತೆ ಮುಖಂಡರುಗಳ ವಿರುದ್ಧ ಬಿಜೆಪಿ ಕಾರ್ಯಕರ್ತರೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ನಂತರ ೨೦೨೨ರ ಆಗಸ್ಟ್ ೪ರಂದು ಪ್ರಕರಣವನ್ನು ಅಂದಿನ ರಾಜ್ಯ ಸರ್ಕಾರ ಎನ್ಐಎಗೆ ವಹಿಸಿದ್ದು, ತನಿಖೆ ಆರಂಭಿಸಿದ ಅಧಿಕಾರಿಗಳು ಪ್ರಕರಣದಲ್ಲಿ ಈವರೆಗೆ ಒಟ್ಟು ೨೮ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯದ ಮಾಸ್ಟರ್ ಮೈಂಡ್ ಎನ್ನಲಾದ ತುಫೈಲ್ನನ್ನು ಬೆಂಗಳೂರಿನಲ್ಲಿ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಸೋಮವಾರಪೇಟೆಗೆ ಬಂದಿದ್ದ ಅಧಿಕಾರಿಗಳು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ವಹಿಸಿಕೊಂಡ ನಂತರ ಎನ್ಐಎ ಅಧಿಕಾರಿಗಳು ಸೋಮವಾರಪೇಟೆಗೆ ನಾಲ್ಕೆöÊದು ಬಾರಿ ಭೇಟಿ ನೀಡಿದ್ದರು. ಕಳೆದ ೨೦೨೩ರ ಜೂನ್ ೨೭ರಂದು ರಾಷ್ಟಿçÃಯ ತನಿಖಾ ದಳದ ಅಧಿಕಾರಿಗಳು ಸೋಮವಾರಪೇಟೆಗೆ ಆಗಮಿಸಿ, ಕಾನ್ವೆಂಟ್ ಬಾಣೆಯ ಅಬ್ದುಲ್ ನಾಸೀರ್, ಕಲ್ಕಂದೂರಿನ ಅಬ್ದುಲ್ ರೆಹಮಾನ್ ಅವರುಗಳ ಮನೆ ಮೇಲೆ ಧಾಳಿ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ಇದಾದ ನಂತರ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಈರ್ವರ ಪತ್ತೆಗೆ ಎನ್ಐಎ ವತಿಯಿಂದ ನಗದು ಬಹುಮಾನ ಘೋಷಿಸಿದ ಪೋಸ್ಟರ್ಗಳನ್ನೂ ಅಂಟಿಸಲಾಗಿತ್ತು.
ಕಳೆದ ೨೦೨೪ರ ಡಿಸೆಂಬರ್ ೫ ರಂದು ಕೊಡಗಿನ ಮಡಿಕೇರಿ, ಸುಂಟಿಕೊಪ್ಪ, ಸೋಮವಾರಪೇಟೆಯ ಒಟ್ಟು ೬ ಕಡೆಗಳಲ್ಲಿ ವ್ಯಾಪಕ ಶೋಧ ನಡೆಸಲಾಗಿತ್ತು. ನಿಷೇಧಿತ ಪಿಎಫ್ಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪಾಲುದಾರಿಕೆ ಇರಬಹುದಾದ ಸಂಶಯದ ಮೇರೆ ನಾಲ್ಕೆöÊದು ಮಂದಿಯ ಮನೆಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿತ್ತು.
ಯುಎಪಿಎ ಕಾಯ್ದೆಯಡಿ ಒಟ್ಟು ಈ ಪ್ರಕರಣದಲ್ಲಿ ೨೮ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಎನ್ಐಎ ಕಳೆದ ವರ್ಷದ ಜನವರಿ ೨೦ರಂದು ಸಲ್ಲಿಸಿದ್ದ ವರದಿಯಲ್ಲಿ ಪಿಎಫ್ಐ ತನ್ನ ವೈರಿಗಳ ಹತ್ಯೆ ಮಾಡಲು ‘ಹಿಟ್ ಸ್ಕಾ÷್ವಡ್’ ರಚಿಸಿ ಅದರ ಮೂಲಕ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ಬಹಿರಂಗಪಡಿಸಿತ್ತು.