ವೀರಾಜಪೇಟೆ, ಜು. ೪: ಒಕ್ಕಲಿಗರ ಯುವ ವೇದಿಕೆ ದಕ್ಷಿಣ ಕೊಡಗು ಮತ್ತು ಕಣ್ಣಂಗಾಲ ಗ್ರಾಮದ ಒಕ್ಕಲಿಗ ಸಮಾಜದ ಸಹಯೋಗದಲ್ಲಿ ಕೆಂಪೇಗೌಡ ಜಯಂತಿಯ ಪ್ರಯುಕ್ತ ಸಮಾಜ ಬಾಂಧವರಿಗೆ ಕೆಸರು ಗದ್ದೆ ಕ್ರೀಡಾಕೂಟವನ್ನು ತಾ. ೧೩ ರಂದು ಕಣ್ಣಂಗಾಲ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಪಿ. ಡಾಲು, ಬೈರಂಬಾಡ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಲ್. ಆನಂದ್, ಕಣ್ಣಂಗಾಲದ ಕಾಫಿ ಬೆಳೆಗಾರ ವಿ.ಕೆ. ನಾಗರಾಜ್, ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ಸಿ. ತಮ್ಮಯ್ಯ, ಕಣ್ಣಂಗಾಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಶ್ರೀ, ಹಾರಂಗಿ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸದಸ್ಯ ಕೆ.ಎಸ್. ಗೋಪಾಲಕೃಷ್ಣ ಇವರು ಪಾಲ್ಗೊಳ್ಳಲಿದ್ದಾರೆ.
ಸಮಾರೋಪ ಸಮಾರಂಭವು ಅದೇ ದಿನ ಸಂಜೆ ಐದು ಗÀಂಟೆಗೆ ಜರುಗಲಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಲೋಕಾಯುಕ್ತ ಉಪ ಅಧೀಕ್ಷಕÀ ಹೆಚ್.ಪಿ. ಸುನಿಲ್ ಕುಮಾರ್, ಚಾಮರಾಜನಗರದಲ್ಲಿ ಪ್ರಾಂಶುಪಾಲರಾಗಿರುವ ಎನ್.ಎಂ. ಶಿವಪ್ರಕಾಶ್, ಟಾಟಾ ಕಾಫಿ ಎಸ್ಟೇಟ್‌ನ ಹಿರಿಯ ವ್ಯವಸ್ಥಾಪಕ ವಿನಯ್, ಕಣ್ಣಂಗಾಲ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿ.ಆರ್. ಗ್ರೀಷ್ಮ ರಂಜು, ಪತ್ರಕರ್ತೆ ಹಾಗೂ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕಿ ಉಷಾ ಪ್ರೀತಂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಪುರುಷರ ವಾಲಿಬಾಲ್ ೬+೨ ಆಟಗಾರರು, ಹಗ್ಗಜಗ್ಗಾಟ ೭+೨ ಆಟಗಾರರು, ಮಡಿಕೆ ಒಡೆಯುವ ಸ್ಪರ್ಧೆ= ೪೫ ವರ್ಷ ಮೇಲ್ಪಟ್ಟ ಮಹಿಳೆಯರಿಗೆ, ಥ್ರೋಬಾಲ್ ೭+೨ ಆಟಗಾರರು, ಹಗ್ಗಜಗ್ಗಾಟ ೭+೨ ಆಟಗಾರರು, ಕಪಲ್ ರೇಸ್. ಬಾಲಕ ಬಾಲಕಿಯರಿಗೆ ೪ ರಿಂದ ೮ ವರ್ಷದವರಿಗೆ ಪಾಸಿಂಗ್ ದಿ ಬಾಲ್, ೯ ರಿಂದ ೧೩ ವರ್ಷದವರಿಗೆ ಓಟದ ಸ್ಪರ್ಧೆ, ೧೪ ರಿಂದ ೧೮ ವರ್ಷದವರಿಗೆ ಓಟದ ಸ್ಪರ್ಧೆ ಜರುಗಲಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ನಗದು ಹಾಗೂ ಪಾರಿತೋಷಕವನ್ನು ನೀಡಲಾಗುತ್ತದೆ. ಕಣ್ಣಂಗಾಲದ ಮರಟಿಗೇರಿಯಲ್ಲಿ ಕ್ರೀಡಾಕೂಟವು ಜರುಗಲಿದ್ದು ಹೆಚ್ಚಿನ ಮಾಹಿತಿಗಾಗಿ ಕಿಲನ್: ೮೭೬೨೨೩೭೬೦೫, ಕಿರಣ್: ೯೪೮೨೮೭೮೨೪೧ಸಂಪರ್ಕಿಸಲು ಆಯೋಜಕರು ಕೋರಿದ್ದಾರೆ.