*ಗೋಣಿಕೊಪ್ಪ, ಜು. ೪: ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ಹೆಚ್ಚಾಗಿದ್ದು, ಕಾಫಿ ತೋಟಗಳನ್ನು ನಾಶ ಮಾಡುತ್ತಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಡೇಮಾಡ ಗಿರೀಶ್ ಗಣಪತಿ ಅವರ ತೋಟದಲ್ಲಿ ಕಾಡಾನೆಗಳ ಬೀಡು ಬಿಟ್ಟಿದ್ದು, ಕಾಫಿ, ಕಾಳು ಮೆಣಸು ಗಿಡಗಳನ್ನು ತುಳಿದು, ಕಿತ್ತುಹಾಕಿ ದಾಂಧÀಲೆ ನಡೆಸುತ್ತಿದೆ. ತೋಟದೊಳಗಿಂದ ಆನೆಗಳು ನುಸುಳಿ ಹೋಗುತ್ತಿರುವುದರಿಂದ ಗಿಡಮರಗಳಿಗೆ ಹಾನಿಯಾಗುತ್ತಿದೆ.

ಆನೆಗಳ ಪ್ರವೇಶದಿಂದ ಸುಮಾರು ೩೦ ಕಾಫಿ ಗಿಡ, ೨೨ ಅಡಿಕೆ ಗಿಡಗಳು ನಾಶವಾಗಿವೆ. ಸುಮಾರು ಮೂರು ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಗಿರೀಶ್ ಗಣಪತಿ ಮಾಹಿತಿ ನೀಡಿದ್ದಾರೆ. ಆನೆಗಳನ್ನು ಕಾಡಿಗಟ್ಟುವ ಕಾರ್ಯ ಅರಣ್ಯ ಇಲಾಖೆ ಶೀಘ್ರಗತಿ ನಡೆಸಬೇಕಾಗಿದೆ ಇಲ್ಲವಾದರೆ ಗ್ರಾಮಸ್ಥರು ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.