ನಾಪೋಕ್ಲು, ಜು. ೩: ಬಲ್ಲಮಾವಟಿ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ಕೃಷಿ ಫಸಲು ಧ್ವಂಸಗೊAಡಿದೆ.
ಕಳೆದ ೧೫ ದಿನಗಳಿಂದ ಪೇರೂರು, ಪುಲಿಕೋಟು, ನೆಲಜಿ, ಪಂದೇಟು ಭಾಗದ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸುತ್ತಿದೆ. ಅಪಾರ ಪ್ರಮಾಣದಲ್ಲಿ ಕಾಫಿ, ಬಾಳೆ, ಅಡಿಕೆ ಸೇರಿದಂತೆ ಕೃಷಿ ಗಿಡಗಳು ಹಾನಿಗೊಳಗಾಗಿವೆ. ಕಾಡಾನೆಗಳನ್ನು ಒಂದು ಭಾಗದಿಂದ ಕಾಡಿಗೆ ಅಟ್ಟಿದರೆ ಮತ್ತೊಂದು ಭಾಗದಿಂದ ನುಸುಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡು ಅಟ್ಟಿದರೂ ರಾತ್ರಿ ವೇಳೆ ಹಿಂತಿರುಗುವ ಕಾಡಾನೆಗಳು ತನ್ನ ಆಟೋಟೋಪ ಮೆರೆಯುತ್ತಿದೆ ಎಂದು ಮಣವಟ್ಟೀರ ದಯಾ ಚಿಣ್ಣಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.