ಮಡಿಕೇರಿ, ಜು. ೨: ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ನಗರದ ಸಂತ ಮೈಕಲರ ಶಾಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ನಿಸರ್ಗ ರೈ (೬೧೯ ಅಂಕ), ಶೋಭಿತ ಎಂ.ಎಸ್. (೬೦೯), ಅಭಿನಂದನಾ ಕೆ. (೬೦೮), ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಪಡೆದ ಸುಮನ್ ಎಸ್. (೫೭೪) ಆಲಿನ ಜೀನಿಯಾ ಡಿಸೋಜ (೫೬೮), ಶ್ರೀಲಕ್ಷಿö್ಮ (೫೬೬), ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಶಿಫಾ ಕೆ.ಎಸ್. (೫೮೬), ಯೋಗ್ ಕುಟ್ಟಪ್ಪ (೫೭೯), ಪ್ರತ್ಯುಷ ಭಟ್ ಕೆ.ಎ. (೫೭೮) ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ವಿದ್ಯಾಸಂಸ್ಥೆಯ ಸಂಚಾಲಕ ಗುರು ಸಂಜಯ್ ಕುಮಾರ್, ಶ್ರಮವಹಿಸಿದರೆ ಮಾತ್ರ ಗುರಿ ಸಾಧನೆ ಸಾಧ್ಯವಾಗುತ್ತದೆ. ಅಡೆತಡೆಗಳಿಗೆ ಎದೆಗುಂದದೆ ಮುನ್ನಡೆಯುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪಂಕಜ ಎಂ.ಎ., ಪ್ರೌಢಶಾಲಾ ಮುಖ್ಯ ಶಿಕ್ಷಕ ಜಾನ್ಸನ್ ಕೆ., ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಮೇರಿ ಸಿಸಿಲಿಯ ಹಾಗೂ ಮಾರ್ಥ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಗಾನವಿ ಪಿ.ಡಿ. ಹಾಗೂ ಶಿಕ್ಷಕ್ಷಿ ಭವ್ಯ ಎಂ.ಆರ್. ನಿರೂಪಿಸಿದರು. ಉಪನ್ಯಾಸಕಿ ಸರಿತಾ ಎಸ್.ಡಬ್ಲ್ಯೂ. ವಂದಿಸಿದರು.