ಮಡಿಕೇರಿ, ಜು. ೨: ಇಕ್ರಾ ಪಬ್ಲಿಕ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಯೋಗ ಶಿಬಿರದಲ್ಲಿ ಪಾಲ್ಗೊಂಡು ಯೋಗದ ಮಹತ್ವವನ್ನು ತಿಳಿದುಕೊಂಡರು.
ಯೋಗ ತರಬೇತುದಾರರಾದ ಎನ್.ಎ. ವಿದ್ಯಾ ಮಾತನಾಡಿ, ದೇಶದಲ್ಲಿ ಅಂತರÀರಾಷ್ಟಿçÃಯ ಯೋಗ ದಿನವನ್ನು ಎಲ್ಲಾ ಕಡೆ ಆಚರಿಸಲಾಗುತ್ತಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯವಶ್ಯಕವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಕಲಿಕಾ ಶಿಬಿರಗಳಲ್ಲಿ ಪಾಲ್ಗೊಂಡು ಯೋಗಾಭ್ಯಾಸದ ಮಹತ್ವವನ್ನು ತಿಳಿದುಕೊಳ್ಳಬೇಕೆಂದರು.
ಇಕ್ರಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಕೆ.ಯು. ಅಬ್ದುಲ್ ರಜಾಕ್ ಮಾತನಾಡಿ, ಮಾನಸಿಕ, ದೈಹಿಕ ಆರೋಗ್ಯದ ಸಮತೋಲನಕ್ಕೆ ಯೋಗ ಸಹಕಾರಿ. ಎಲ್ಲರೂ ಸಹ ತಮ್ಮ ಜೀವನದುದ್ದಕ್ಕೂ ಯೋಗವನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭ ವಿದ್ಯಾರ್ಥಿಗಳು ಯೋಗಭ್ಯಾಸದಲ್ಲಿ ಪಾಲ್ಗೊಂಡರು.