ಮಡಿಕೇರಿ, ಜು. ೨ : ಜಿಲ್ಲೆಯ ರೈತರ ಪರವಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಸ್ಪಷ್ಟ ಪಡಿಸಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನ ಸ್ವಂತ ಬಂಡವಾಳದಿAದ ರೂ ೩೬೩.೫೮ ಕೋಟಿ ಮೊತ್ತವನ್ನು ಡಿಸಿಸಿ ಬ್ಯಾಂಕ್ ಸಾಲವಾಗಿ ಪಡೆದು ರೈತರಿಗೆ ಶೂನ್ಯ ಬಡ್ಡಿ ದರದ ಕೃಷಿ ಸಾಲವನ್ನು ವಿತರಿಸಲಾಗಿದೆ. ಸಾಲ ಸೌಲ ಸೌಲಭ್ಯದ ವಿಚಾರದಲ್ಲಿ ಬ್ಯಾಂಕ್ ವಿರುದ್ಧ ಆರೋಪ ಸತ್ಯಕ್ಕೆ ದೂರವಾಗಿದೆ ಎಂದ ಬಾಂಡ್ ಗಣಪತಿ ಈ ಸಂಬAಧ ಬಹಿರಂಗ ಮಡಿಕೇರಿ, ಜು. ೨ : ಜಿಲ್ಲೆಯ ರೈತರ ಪರವಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಸ್ಪಷ್ಟ ಪಡಿಸಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನ ಸ್ವಂತ ಬಂಡವಾಳದಿAದ ರೂ ೩೬೩.೫೮ ಕೋಟಿ ಮೊತ್ತವನ್ನು ಡಿಸಿಸಿ ಬ್ಯಾಂಕ್ ಸಾಲವಾಗಿ ಪಡೆದು ರೈತರಿಗೆ ಶೂನ್ಯ ಬಡ್ಡಿ ದರದ ಕೃಷಿ ಸಾಲವನ್ನು ವಿತರಿಸಲಾಗಿದೆ. ಸಾಲ ಸೌಲ ಸೌಲಭ್ಯದ ವಿಚಾರದಲ್ಲಿ ಬ್ಯಾಂಕ್ ವಿರುದ್ಧ ಆರೋಪ ಸತ್ಯಕ್ಕೆ ದೂರವಾಗಿದೆ ಎಂದ ಬಾಂಡ್ ಗಣಪತಿ ಈ ಸಂಬAಧ ಬಹಿರಂಗ ಒದಗಿಸಿಕೊಂಡು ಬರಲಾಗುತ್ತಿದೆ. ಕಳೆದ ೨೦೨೪-೨೫ನೇ ಸಾಲಿನಲ್ಲಿ ಕೆಡಿಸಿಸಿ ಬ್ಯಾಂಕ್ ಮೂಲಕ ೩೯,೩೯೦ ರೈತರಿಗೆ ೧೦೬೬.೪೭ ಕೋಟಿ ಎನ್.ಸಿ.ಎಲ್ ಮಂಜೂರಾತಿ ಯಾಗಿದ್ದು, ಇದರಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ೩೬,೭೫೬ ರೈತರಿಗೆ ೮೩೦.೩೨ ಕೋಟಿ ಅಲ್ಪಾವಧಿ ಬೆಳೆ ಸಾಲವನ್ನು ವಿತರಿಸಲಾಗಿದೆ ಎಂದರು.
ಶೂನ್ಯ ಬಡ್ಡಿ ದರದ ಸಾಲ ವಿತರಣೆಗೆ ಸಂಬAಧಿಸಿದAತೆ ಕಳೆದ ೨೦೨೪-೨೫ನೇ ಸಾಲಿನಲ್ಲಿ ನಬಾರ್ಡ್ ನಿಂದ ೧೦೫.೩೯ಕೋಟಿ ಮಾತ್ರ ಪುನರ್ಧನ ಬಿಡುಗಡೆಯಾಗಿದೆ. ಸಹಕಾರ ಸಂಘಗಳಿಗೆ ನೀಡುವ ಅಲ್ಪಾವಧಿ ಕೃಷಿ ಸಾಲಕ್ಕೆ ನಬಾರ್ಡ್ನಿಂದ ಈ ಹಿಂದೆ ಶೇ.೬೦ ರಷ್ಟು ರಿಯಾಯಿತಿ ಬಡ್ಡಿದರದಲ್ಲಿ ಪುನರ್ಧನ ನೀಡುತ್ತಿದ್ದು, ಇದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕಳೆದ ಸಾಲಿಗೆ ಹೋಲಿಸಿದರೆ ಒಟ್ಟು ಕೃಷಿಸಾಲದ ಪೈಕಿ ಶೇ.೧೨.೬೯ ರಷ್ಟು ಮಾತ್ರ ಪುನರ್ಧನ ಬಿಡುಗಡೆಯಾಗಿದೆ.ಪ್ರಸ್ತುತ ರೈತರಿಗೆ ಎದುರಾಗಿರುವ ಸಮಸ್ಯೆಗಳಿಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಾರಣವಲ್ಲ. ಸ್ಥಳೀಯ ರೈತರು ಎದುರಿಸುತ್ತಿರುವ ಜಂಟಿ ಖಾತೆ, ಪೌತಿ ಖಾತೆ, ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು. ಕೊಡಗಿನಲ್ಲಿ ಕಂಡು ಬರುತ್ತಿರುವ ಈ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಅಧಿಕಾರಿಯನ್ನು ನೇಮಿಸಬೇಕು ಎಂದು ಬಾಂಡ್ ಗಣಪತಿ ಹೇಳಿದರು.
ಫ್ರೂಟ್ ಐಡಿಯನ್ನು ಪಡೆಯುವುದರೊಂದಿಗೆ, ಎಲ್ಲಾ ದಾಖಲೆಗಳ ನೋಂದಣಿಗೆ ಸರ್ಕಾರ ‘ಕಾವೇರಿ-೨' ತಂತ್ರಾAಶವನ್ನು ಒದಗಿಸಿತ್ತು. ಆದರೆ, ಈ ತಂತ್ರಾAಶದಲ್ಲಿ ವಾಣಿಜ್ಯ ಬೆಳೆ ಎನ್ನುವ ಕಾರಣಗಳ ಹಿನ್ನೆಲೆಯಲ್ಲಿ ‘ಕಾಫಿ' ಬೆಳೆ ದಾಖಲಾಗುತ್ತಿಲ್ಲ.
(ಮೊದಲ ಪುಟದಿಂದ) ಈ ಸಮಸ್ಯೆಗಳ ಪರಿಹಾರಕ್ಕೆ ಬ್ಯಾಂಕ್ ಸರ್ಕಾರದೊಂದಿಗೆ ಅಗತ್ಯ ಪ್ರಯತ್ನಗಳನ್ನು ನಡೆಸಿರುವುದಾಗಿ ತಿಳಿಸಿದ ಅವರು ಕೇಂದ್ರ ಸರ್ಕಾರ ಪ್ರತ್ಯೇಕವಾದ ಸಹಕಾರ ಸಚಿವಾಲಯವನ್ನು ರಚಿಸಿದೆ. ಈ ಸಚಿವಾಲಯವು ರಾಷ್ಟçದ ವಿವಿಧ ರಾಜ್ಯಗಳಲ್ಲಿನ ಸಹಕಾರ ಸಂಘಗಳಲ್ಲಿ ನೀಡಲಾಗುತ್ತಿರುವ ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ‘ಏಕ ರೂಪದ ತಂತ್ರಜ್ಞಾನ' ಅಳವಡಿಸಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಕರ್ನಾಟಕ ಹಾಗೂ ಮತ್ತೆರಡು ರಾಜ್ಯಗಳನ್ನು ಒಳಗೊಂಡAತೆ ಪೈಲಟ್ ಪ್ರಾಜೆಕ್ಟ್ ರೂಪಿಸಿ, ಇದರ ಅಳವಡಿಕೆಗೆ ಇದೇ ೨೦೨೫ರ ಡಿ.೩೧ ನ್ನು ಅಂತಿಮ ದಿನಾಂಕವೆAದು ಸೂಚಿಸಿದೆ ಎಂದು ಅವರು ಮಾಹಿತಿಯಿತ್ತರು.
ಒಮ್ಮೆ ಈ ಏಕ ರೂಪದ ತಂತ್ರಜ್ಞಾನ ಅಳವಡಿಕೆಯಾದಲ್ಲಿ ಸಾಲ ಸೌಲಭ್ಯದ ವಿತರಣೆ, ಸಹಕಾರ ಸಂಘಗಳ ಆಡಿಟ್ ಎಲ್ಲವೂ ಆನ್ ಲೈನ್ನಲ್ಲಿ ನಡೆಯುತ್ತದೆ. ಆ ಸಂದರ್ಭ ಸಾಲ ಸೌಲಭ್ಯ ಹೊಂದಲು ಫ್ರೂಟ್ ತಂತ್ರಾAಶ ಕಡ್ಡಾಯವಾಗುವುದಲ್ಲದೆ, ಸಿಂಗಲ್ ಆರ್ಟಿಸಿ, ಆಧಾರ್ ಸೇರಿದಂತೆ ಬೆಳೆಗಾರರು ಅಗತ್ಯ ದಾಖಲೆಗಳನ್ನು ಒದಗಿಸಿ ಅದನ್ನು ತಂತ್ರಾAಶದಲ್ಲಿ ಅಳವಡಿಸಿದರಷ್ಟೆ ಕೆಲಸ ಕಾರ್ಯ ನಡೆಯುತ್ತದೆ. ಆದರೆ, ಈ ಸಾಲಿನಲ್ಲಿ ಜಿಲ್ಲೆಯ ಬೆಳೆಗಾರರಿಗೆ ಸಾಲ ಸೌಲಭ್ಯ ವಿತರಿಸಲು ಯಾವುದೇ ಸಮಸ್ಯೆಗಳು ಇಲ್ಲವೆಂದು ಬಾಂಡ್ ಗಣಪತಿ ತಿಳಿಸಿದರು.
ಗೋಷ್ಠಿಯಲ್ಲಿ ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಶರವಣ, ಗುಮ್ಮಟ್ಟಿರ ಕಿಲನ್ ಗಣಪತಿ, ಹೆಚ್.ಕೆ.ಮಾದಪ್ಪ ಹಾಗೂ ಹೊಸೂರು ಸತೀಶ್ ಕುಮಾರ್ ಉಪಸ್ಥಿತರಿದ್ದರು.