ಶ್ರೀಮಂಗಲ, ಜು. ೧: ಪೊನ್ನಂಪೇಟೆ ತಾಲೂಕಿನ ಹರಿಹರ ಬೆಳ್ಳೂರು ಮತ್ತು ಹುದಿಕೇರಿ ಗ್ರಾಮದಲ್ಲಿ ೨೫ ಕೆವಿ ಸಾಮರ್ಥ್ಯದ ೩ ವಿದ್ಯುತ್ ಪರಿವರ್ತಕಗಳನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟನೆ ಮಾಡಿದರು.

ಕ್ಷೇತ್ರಕ್ಕೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಕಾರ್ಯಕ್ರಮದ ಭಾಗವಾಗಿ, ಮಾಡುವ ಮಹತ್ವಕಾಂಕ್ಷೆಯಿAದ ವಿದ್ಯುತ್ ಮಾರ್ಗ ಸಾಮರ್ಥ್ಯ ಹೆಚ್ಚಿಸಿ, ಉನ್ನತ್ತೀಕರಣಗೊಳಿಸಲು ಯೋಜನೆ ರೂಪಿಸಲಾಗಿದೆ. ಪೊನ್ನಂಪೇಟೆ ತಾಲೂಕಿನ ಹರಿಹರ, ಬೆಳ್ಳೂರು ಹಾಗೂ ಹುದಿಕೇರಿ ಭಾಗದಲ್ಲಿ ಮೂರು ೨೫ ಕೆವಿ ವಿದ್ಯುತ್ ಪರಿವರ್ತಕಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಪೊನ್ನಣ್ಣ ಹೇಳಿದರು.

ಚುನಾವಣೆಗೆ ಮೊದಲು ಆಶ್ವಾಸನೆ ನೀಡಿದಂತೆ, ಕ್ಷೇತ್ರಾದ್ಯಂತ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಸರಬರಾಜಿಗೆ ಬೇಕಾದ ಹೆಚ್ಚುವರಿ ಅನುದಾನದಲ್ಲಿ ಈ ಕಾರ್ಯಕ್ರಮವನ್ನು ಮಾಡುತ್ತಿರುವುದಾಗಿ ಹೇಳಿದರು. ಈ

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಪ್ರಾಧಿಕಾರ ಅಧ್ಯಕ್ಷ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯ ಮೀದೇರಿರ ನವೀನ್, ಡಿಸಿಸಿ ಸದಸ್ಯ ಮುಕ್ಕಾಟಿರ ಸಂದೀಪ್, ಕಳ್ಳೇಂಗಡ ಸಚಿನ್, ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು, ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಚಂಗುಲAಡ ಸೂರಜ್, ಪಕ್ಷದ ಹಿರಿಯ -ಕಿರಿಯ ಮುಖಂಡರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.