ವೀರಾಜಪೇಟೆ, ಜು. ೧: ಮುಸ್ಲಿಂ ಯೂತ್ ಲೀಗ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಕೊಡಗು ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಸಮಿತಿ ರೂಪೀಕರಣ ಸಭೆ ಆರ್ಜಿ ಗ್ರಾಮದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಘದ ಅಧ್ಯಕ್ಷ ಹಂಸಹಾಜಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಸಂಘದ ಸದಸ್ಯ ಮುಸ್ತಫಾ ಮಾತನಾಡಿ, ನಮ್ಮ ಸಂಸ್ಥೆಯು ೧೯೪೮ ಚೆನೈನ ರಾಜಾಜಿ ಸಭಾಂಗಣದಲ್ಲಿ ಆರಂಭವಾಯಿತು. ಅಂದಿನಿAದ ಇಂದಿನವರೆಗೂ ಪಕ್ಷದ ಸದಸ್ಯರು ಅಭ್ಯರ್ಥಿಗಳಾಗಿ ರಾಜ್ಯದ ವಿವಿಧ ಕಡೆ ಗುರುತಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಕೊಡಗಿನಲ್ಲಿ ಪಕ್ಷದ ಸಂಘಟನೆ ಕುಸಿತ ಕಂಡಿತು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನೂತನ ಆಡಳಿತ ಮಂಡಳಿ ರಚನೆ ಮಾಡಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆಯ ರಫೀಕ್, ಬೆಂಗಳೂರಿನ ದಸ್ತಗೀರ್ ಬೇಗ್, ಶಬೀರ್ ಎಡೆಯನ್ನುರ್, ಅಲ್ತಾಫ್ ಸೇರಿದಂತೆ ಅನೇಕ ಸದಸ್ಯರು ಹಾಜರಿದ್ದರು.