ಚೆಯ್ಯಂಡಾಣೆ, ಜು. ೧: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ೧೦೦ನೇ ಸ್ಥಾಪನಾ ದಿನವನ್ನು ನಜುಮುಲ್ ಹುದಾ ಮದ್ರಸ ಎಡಪಾಲದಲ್ಲಿ ಆಚರಿಸಲಾಯಿತು.
ಎಡಪಾಲ ಮದರಸ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಎನ್‌ಎಚ್‌ಎಂ ಪ್ರಾಂಶುಪಾಲರಾದ ಹಮೀದ್ ಫೈಝಿ ಪ್ರಸ್ತಾವಿಕವಾಗಿ ಮಾತನಾಡಿ, ಸಮಸ್ತವು ೧೯೨೬ ಜೂನ್ ೨೬ ರಂದು ಸ್ಥಾಪನೆಯಾಯಿತು.ಸಮಸ್ತದ ಅಧೀನದಲ್ಲಿ ಸುಮಾರು ೧೧ ಸಾವಿರದಷ್ಟು ಮದ್ರಸಗಳು ಕಾರ್ಯಾಚರಿಸುತ್ತಿದ್ದು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ. ಸಾಮಾಜಿಕ ಶೈಕ್ಷಣಿಕ ರಂಗದಲ್ಲಿ ಕಳೆದ ನೂರು ವರ್ಷಗಳ ಸಾಧನೆ ಅಪಾರವಾಗಿದೆ. ನಾವೆಲ್ಲರೂ ಸಮಸ್ತದ ನೂರನೇ ವಾರ್ಷಿಕೋತ್ಸವವನ್ನು ವಿಜಯಗೊಳಿಸಬೇಕೆಂದು ಕರೆನೀಡಿದರು.
ರಿಯಾಜ್ ನಿಝಾಮಿ ಉಸ್ತಾದ್ ಮಾತನಾಡಿ, ಸಂಘಟನೆ ಆರಂಭದ ದಿನಗಳಲ್ಲಿ ಅಂದಿನ ನೇತಾರರು ಪಟ್ಟಶ್ರಮವನ್ನು ನೆನಪಿಸಿಕೊಂಡರು. ಬಳಿಕ ವಿಶೇಷ ಪ್ರಾಥನೆಯನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರುಗಳಾದ ಮಜೀದ್ ಮುಸ್ಲಿಯಾರ್, ಅಬ್ದುಲ್ಲ ಸಹದಿ, ರಶೀದ್ ಮುಸ್ಲಿಯಾರ್, ಎಸ್‌ಕೆಎಸ್‌ಎಸ್‌ಎಫ್ ಕಾರ್ಯದರ್ಶಿ ಜಲೀಲ್ ಕುರಿಕಡೆ, ಹಾರಿಸ್ ಬಾಖವಿ, ಝಇನ್, ಶಫಿರ್ ಹಾಗೂ ಎಸ್‌ಎಸ್‌ಕೆಬಿವಿ ಸೈಫುದ್ದೀನ್ ಅಮೀನ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.