ಮಡಿಕೇರಿ, ಜೂ. ೩೦: ಕೇಂದ್ರ ಸರ್ಕಾರದಿಂದ ‘ಮಿಷನ್ ಶಕ್ತಿ’ ಯೋಜನೆಯಡಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೊಡಗು ಜಿಲ್ಲೆ ಇವರ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ “ಜಿಲ್ಲಾ ಮಹಿಳಾ ಸಬಲೀಕರಣ ಘಟಕ” ಹಾಗೂ “ಸಖಿ ಒನ್ ಸ್ಟಾಫ್ ಸೆಂಟರ್” ನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಖಾಲಿ ಇರುವ ಹುದ್ದೆಗಳಿಗೆ ವಿದ್ಯಾರ್ಹತೆ ನಿಗದಿಪಡಿಸಿ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ. ಡಿಇಒ ಮತ್ತು ಪ್ರೋಗ್ರಾಮ್ ಅಸಿಸ್ಟೆಂಟ್ ಫಾರ್ ಪಿಎಂಎAವಿವೈ (೧ ಹುದ್ದೆ), ಐಟಿ/ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ೩ ವರ್ಷದ ಡಾಟಾ ಮ್ಯಾನೇಜ್‌ಮೆಂಟ್, ಟೈಪಿಂಗ್ ತಿಳಿದಿರಬೇಕು.

ಸ್ವೀಪರ್/ಗಾರ್ಡ್ ಫಾರ್ ಸಖಿ ಒನ್ ಸ್ಟಾಪ್ ಸೆಂಟರ್ (೧ ಹುದ್ದೆ) ಮಡಿಕೇರಿ ೨೪/೭ (ಹಗಲು ಮತ್ತು ರಾತ್ರಿ ಪಾಳಿ), ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರಬೇಕು. ೨ ವರ್ಷದ ಅನುಭವ ಹೊಂದಿರಬೇಕು.

ಪಾರಾಲೀಗಲ್ ಪರ್ಸನಲ್/ಲಾಯರ್(೧ ಹುದ್ದೆ) ಕಾನೂನು ಪದವಿ ಪಡೆದಿರಬೇಕು(೨-೩ ವರ್ಷದ ಅನುಭವ). ಅರ್ಜಿ ಸಲ್ಲಿಸಲು ಜುಲೈ, ೦೭ ಕೊನೆಯ ದಿನವಾಗಿದೆ. ಪ್ರತ್ಯೇಕ ಹುದ್ದೆಗೆ ಪ್ರತ್ಯೇಕ ಅರ್ಜಿ ಸಲ್ಲಿಸುವುದು. ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಮುಚ್ಚಿದ ಲಕೋಟೆಯಲ್ಲಿ “ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಚೈನ್ ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ-೫೭೧೨೦೧” ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಅವಧಿ ಮೀರಿ ಸಲ್ಲಿಸಿದ ಅರ್ಜಿ ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೦೮೨೭೨-೨೨೮೦೧೦ ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರು ತಿಳಿಸಿದ್ದಾರೆ.