ಕುಶಾಲನಗರ, ಜೂ. ೩೦: ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೊಲೆ ಪ್ರಕರಣ ದಾಖಲಿಸಿ ಬಸವನಹಳ್ಳಿಯ ಅಮಾಯಕನನ್ನು ಜೈಲಿಗೆ ಕಳುಹಿಸಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಅಂದಿನ ತನಿಖಾಧಿಕಾರಿ ಹಾಗೂ ಕುಶಾಲನಗರದ ಪೊಲೀಸ್ ಇನ್ಸ್ಪೆಕ್ಟರ್ ಆಗಿರುವ ಬಿ.ಜಿ. ಪ್ರಕಾಶ್ ಸೇರಿದಂತೆ ಮೈಸೂರು ಜಿಲ್ಲೆಯ ಇಬ್ಬರು ಸಬ್‌ಇನ್ಸ್ಪೆಕ್ಟರ್‌ಗಳನ್ನು ಅಮಾನತು ಗೊಳಿಸಿ ಸರಕಾರ ಆದೇಶ ನೀಡಿದೆ.
೨೦೨೦ರಲ್ಲಿ ಕುಶಾಲನಗರ ಸಮೀಪದ ಬಸವನಹಳ್ಳಿಯ ಸುರೇಶ್ ಅವರನ್ನು ನಾಪತ್ತೆಯಾಗಿದ್ದ ಆತನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಬಲವಂತವಾಗಿ ಒಪ್ಪಿಸಿ ಸುಳ್ಳು ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಇತ್ತೀಚಿಗೆ ಸುರೇಶ್ ಪತ್ನಿ ಮಲ್ಲಿಗೆ ಮಡಿಕೇರಿಯಲ್ಲಿ ಕಂಡುಬAದಿದ್ದರು. ಇದರಿಂದ ಪ್ರಕರಣದ ಸತ್ಯಾಂಶ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಗೊಳಿಸಲಾಗಿದೆ.