ಐಗೂರು, ಜೂ.೩೦ : ಮೈಸೂರಿನಲ್ಲಿ ನಡೆದ ಐದನೇ ರಾಜ್ಯಮಟ್ಟದ ಸೀನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲಾ ಮಿಕ್ಸ್÷್ಡ ಬಾಕ್ಸಿಂಗ್ನ ಕ್ರೀಡಾಪಟುಗಳು ಭಾಗವಹಿಸಿದ್ದು ಎರಡು ಬೆಳ್ಳಿಯ ಪದಕಕ್ಕೆ ಭಾಜನರಾಗಿದ್ದಾರೆ.
ಪೊನ್ನಂಪೇಟೆ ಸಿಐಟಿ ಕಾಲೇಜಿನ ವಿದ್ಯಾರ್ಥಿ, ಸಿದ್ದಾಪುರದ ಸುರೇಶ ಮತ್ತು ರೇಖಾ ದಂಪತಿಯ ಪುತ್ರ ಅಜಯ್ಗೆ ಬೆಳ್ಳಿಯ ಪದಕ, ಮಂಗಳೂರಿನ ಎ.ಜೆ. ಕಾಲೇಜಿನ ವಿದ್ಯಾರ್ಥಿ, ಸಿದ್ದಾಪುರದ ಅನಿಶ್ ಕುಮಾರ್ ಮತ್ತು ರತ್ನ ದಂಪತಿಯ ಪುತ್ರ ಆಯಿಸ್ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ. ಇವರಿಗೆ ರಾಜ್ಯ ಮಿಕ್ಸ್ ಬಾಕ್ಸಿಂಗ್ ಸಂಸ್ಥೆಯ ಅಧ್ಯಕ್ಷರು ಹಾಗೂ ತರಬೇತುದಾರರಾದ ಎನ್.ಸಿ. ಸುದರ್ಶನ್ ತರಬೇತಿ ನೀಡಿರುತ್ತಾರೆ.