ವೀರಾಜಪೇಟೆ, ಜೂ. ೩೦: ಯೋಗ ಮಾಡುವುದರಿಂದಲೇ ಜೀವನದಲ್ಲಿ ಉತ್ತಮ ಆರೋಗ್ಯವನ್ನು ಕಾಣಬಹುದು. ಆದರಿಂದ ಮಕ್ಕಳಿಗೆ ಶಿಕ್ಷಣದ ಮೂಲಕ ಯೋಗವನ್ನು ಕಲಿಸುವಂತಾಗಬೇಕು ಎಂದು ವೀರಾಜಪೇಟೆ ಶ್ರೀ ಕಾವೇರಿ ಯೋಗ ಕೇಂದ್ರದ ಗುರು ಸೀತಾರಾಮ ರೈ ಹೇಳಿದರು.

ಸಮೀಪದ ಅರಮೇರಿ ಕಳಂಚೇರಿ ಶ್ರೀ ಮಠದ ಲಿಂಗರಾಜೇAದ್ರ ಭವನದಲ್ಲಿ ನಡೆದ ಹೊಂಬೆಳಕು ಕಿರಣ ೨೩೨ ಮಾಸಿಕ ತತ್ತ÷್ವ ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ವಿಶ್ವ ಯೋಗ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದ ಅವರು, ಯೋಗ ಎಂಬುದು ಒಂದು ವಿದ್ಯೆ ಸಮಾಜದ ಏಳಿಗೆಯಿಂದ ಮನುಷ್ಯನ ಬೆಳವಣಿಗೆಗೆ ಉತ್ತಮ ಭಾವನೆ ಯೋಗದಿಂದ ಸಾಧ್ಯ. ಮನುಷ್ಯನ ದೇಹ ಜೀವನ ಉತ್ತಮವಾಗಿರಲು ಯೋಗ ಸಹಕಾರಿ, ಪೋಷಕರು ಮಕ್ಕಳಿಗೆ ಯೋಗ ಮಾಡುವುದರ ಪ್ರಯೋಜನ ಮತ್ತು ಅದರ ಮಹತ್ವವನ್ನು ತಿಳಿಸಿಕೊಡುವಂತಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪಿರಿಯಾಪಟ್ಟಣ ಕರ್ನಾಟಕ ಬ್ಯಾಂಕ್ ಉದ್ಯೋಗಿ ಗುರುಬಲ್ಲಾಳ್ ಅವರು ಮಾತನಾಡಿ ದೇಶದಲ್ಲಿ ಯೋಗ ಅಂದರೆ ನಮ್ಮ ಭಾರತ. ಪ್ರತಿಯೊಬ್ಬರು ಯೋಗ ಮಾಡುವಂತಾಗಬೇಕು ಎಂದ ಅವರು ವಿದ್ಯಾರ್ಥಿಗಳಿಗೆ ಯೋಗಭ್ಯಾಸ ಮಾಡುವ ವಿಧಾನವನ್ನು ತೋರಿಸಿಕೊಟ್ಟರು.

ಹೊಂಬೆಳಕು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಾತನಾಡಿ ಭಾರತ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಯೋಗಭ್ಯಾಸ ಮಾಡುವ ಕಾರ್ಯ ಅಂದಿನಿAದಲೂ ನಡೆದುಕೊಂಡು ಬರುತ್ತಿದ್ದು ಸಮಾಜದ ಏಳಿಗೆಗೆ ಮನುಷ್ಯ ಒಳ್ಳೆಯ ಭಾವನೆ, ಉತ್ತಮ ಆರೋಗ್ಯದ ಬೆಳವಣಿಗೆಗೆ ಸದಾ ಯೋಗಭ್ಯಾಸ ಮಾಡುವುದು ಉತ್ತಮ ಹಾಗೂ ಕಲಿತಿರುವುದನ್ನು ಮತ್ತೊಬ್ಬರಿಗೂ ಹೇಳಿಕೊಡುವ ಮೂಲಕ ಪ್ರತಿಯೊಬ್ಬರು ಯೋಗ ಕಲಿತು ಆರೋಗ್ಯವಂತರಾಗುವAತೆ ಸಲಹೆ ನೀಡಿದರು. ಅಂತರರಾಷ್ಟಿçÃಯ ಕರಾಟೆ ಪಟು ಗೋಣಿಕೊಪ್ಪಲು ಜಮ್ಮಡ ಜಯ ಜೋಯಪ್ಪ ಅವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಬಗ್ಗೆ ತಿಳಿಸಿದರು.

ಹೊಂಬೆಳಕು ಕಾರ್ಯಕ್ರಮದಲ್ಲಿ ನಿವೃತ್ತ ಯೋಗ ಶಿಕ್ಷಕರಾದ ಪಿ.ಎ. ಲಕ್ಷಿö್ಮನಾರಾಯಣ, ವೈದ್ಯರುಗಳಾದ ಡಾ, ಎಸ್.ವಿ. ನರಸಿಂಹನ್, ಕಾಳಿಮಾಡ ಡಾ. ಶಿವಪ್ಪ, ಡಾ. ಶಿವಕುಮಾರ್, ಹೆಚ್.ಎಸ್. ತಿಮ್ಮಪ್ಪಯ್ಯ, ಎಸ್.ಎಂ. ಸುಧಾಕರ್ ಹಾಗೂ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.