ಮಡಿಕೇರಿ, ಜೂ. ೩೦: ಕೊಡವ ಜನಾಂಗದ ಆಟಗಾರರನ್ನೇ ಒಳಗೊಂಡAತೆ ಕೊಡಗಿನಲ್ಲಿ ವಾರ್ಷಿಕವಾಗಿ ಕೊಡವ ಕೌಟುಂಬಿಕ ಹಾಕಿ ಹಬ್ಬ ವಿಶೇಷವಾಗಿ ಜರುಗುತ್ತದೆ. ಇದು ಕುಟುಂಬಗಳ ನಡುವಿನ ಪಂದ್ಯಾಟವಾದರೆ ಇದಕ್ಕೆ ಮತ್ತೊಂದು ಹೊಸ ಸ್ವರೂಪ ನೀಡಿ ಐ.ಪಿ.ಎಲ್ ಕ್ರಿಕೆಟ್‌ನ ಮಾದರಿಯಲ್ಲಿ ಹತ್ತು ಫ್ರಾಂಚೈಸಿಗಳ ಪಾಲ್ಗೊಳ್ಳುವಿಕೆ ಯೊಂದಿಗೆ ಮೈಸೂರಿನಲ್ಲಿ ಮೈಸೂರು ಕೊಡವ ಸಮಾಜ ಯೂತ್‌ವಿಂಗ್‌ನ ಮೂಲಕ ಪ್ರಥಮ ಪ್ರಯತ್ನವಾಗಿ ಆಯೋಜಿಸಿದ್ದ ಕೊಡವ ಹಾಕಿ ಪ್ರೀಮಿಯರ್ ಲೀಗ್ - ೨೦೨೫ (ಕೆ.ಎಚ್.ಪಿ.ಎಲ್) ಯಶಸ್ವಿ ಮುಕ್ತಾಯ ಕಂಡಿತು.

ಮೈಸೂರಿನ ಚಾಮುಂಡಿ ವಿಹಾರ್ ಟರ್ಫ್ ಮೈದಾನದಲ್ಲಿ ಮೂರು ದಿನಗಳ ಕಾಲ ಕೊಡವರ ಕಲರವ ಹಾಕಿ ಪಂದ್ಯಾವಳಿಯ ಮೂಲಕ ವರ್ಣರಂಜಿತವಾಗಿ ನಡೆಯಿತು.

ಪ್ರಥಮ ಬಾರಿ ಜರುಗಿದ ಈ ಪಂದ್ಯಾವಳಿಯಲ್ಲಿ ಪಳೆ ತಾಲೂಕ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವುದರೊಂದಿಗೆ ರೂ. ೧.೫೦ ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ಪಡೆದರೆ ಕೂರ್ಗ್ ಟೈಟಾನ್ಸ್ ತಂಡ ರನ್ನರ್ಸ್ ತಂಡವಾಗಿ ರೂ. ೧ ಲಕ್ಷ ನಗದು ಹಾಗೂ ಟ್ರೋಫಿ ಗಳಿಸಿತು.

ಭಾನುವಾರದಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾಟ ಜರುಗಿದ್ದು, ಮೈಸೂರಿನಲ್ಲಿ ಕೊಡವ ಜನಾಂಗದವರು, ವಿಶೇಷವಾಗಿ ಕೊಡಗಿನಿಂದ

ವಿಹಾರ್ ಟರ್ಫ್ ಮೈದಾನದಲ್ಲಿ ಮೂರು ದಿನಗಳ ಕಾಲ ಕೊಡವರ ಕಲರವ ಹಾಕಿ ಪಂದ್ಯಾವಳಿಯ ಮೂಲಕ ವರ್ಣರಂಜಿತವಾಗಿ ನಡೆಯಿತು.

ಪ್ರಥಮ ಬಾರಿ ಜರುಗಿದ ಈ ಪಂದ್ಯಾವಳಿಯಲ್ಲಿ ಪಳೆ ತಾಲೂಕ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವುದರೊಂದಿಗೆ ರೂ. ೧.೫೦ ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ಪಡೆದರೆ ಕೂರ್ಗ್ ಟೈಟಾನ್ಸ್ ತಂಡ ರನ್ನರ್ಸ್ ತಂಡವಾಗಿ ರೂ. ೧ ಲಕ್ಷ ನಗದು ಹಾಗೂ ಟ್ರೋಫಿ ಗಳಿಸಿತು.

ಭಾನುವಾರದಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾಟ ಜರುಗಿದ್ದು, ಮೈಸೂರಿನಲ್ಲಿ ಕೊಡವ ಜನಾಂಗದವರು, ವಿಶೇಷವಾಗಿ ಕೊಡಗಿನಿಂದ

(ಮೊದಲ ಪುಟದಿಂದ) ತೆರಳಿದ್ದ ಹಾಕಿ ಪ್ರಿಯರೊಂದಿಗೆ ಇನ್ನಿತರ ಕ್ರೀಡಾಭಿಮಾನಿಗಳು ಸೇರಿದಂತೆ ಸುಮಾರು ಮೂರು ಸಾವಿರದಷ್ಟು ಮಂದಿ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

೧೦ ಫ್ರಾಂಚೈಸಿಗಳ ನಡುವೆ ಪಂದ್ಯಾಟ ಜರುಗಿದ್ದು, ಫೈನಲ್ ಹಂತಕ್ಕೆ ಪಳೆ ತಾಲೂಕ್ ಹಾಗೂ ಕೂರ್ಗ್ ಟೈಟಾನ್ಸ್ ಪ್ರವೇಶಿಸಿತ್ತು. ಈ ಪಂದ್ಯದಲ್ಲಿ ಪಳೆ ತಾಲೂಕ್ ೩-೧ ಗೋಲಿನಿಂದ ಜಯಗಳಿಸಿತು. ಕೂರ್ಗ್ ಟೈಟಾನ್ಸ್ ರನ್ನರ್ಸ್ ಅಪ್ ಆದರೆ ಕೊಡವು ವಾರಿಯರ್ಸ್ ತೃತೀಯ ಸ್ಥಾನದೊಂದಿಗೆ ರೂ. ೫೦ ಸಾವಿರ ನಗದು ಗಳಿಸಿತು. ಅಂಜಿಗೇರಿ ನಾಡ್ ನಾಲ್ಕನೇ ಸ್ಥಾನ ಗಳಿಸಿತು.

ಪೊನ್ನಣ್ಣ ಶ್ಲಾಘನೆ

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ಮಾತನಾಡಿ, ಮೈಸೂರಿನಂತಹ ಪ್ರದೇಶದಲ್ಲಿ ಕೊಡವರನ್ನು ಒಂದೆಡೆ ಕಲೆ ಹಾಕಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ. ಕ್ರೀಡೆಯ ಕೊಡವ ಸಂಸ್ಕೃತಿಯ ಭಾಗವಾಗಿದ್ದು, ಸರಕಾರವೂ ನೆರವು ನೀಡುತ್ತಿದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಆರ್. ಚೇತನ್ ಅವರು ಮಾತನಾಡಿ, ವಿಶೇಷ ರೀತಿಯಲ್ಲಿ ಆಯೋಜಿಸಿದ ಈ ಹಾಕಿ ಪಂದ್ಯಾವಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಸ್ತುತ ಭಾರತ ತಂಡದಲ್ಲಿ ಕೊಡಗಿನ ಹಾಕಿ ಆಟಗಾರರ ಕೊರತೆ ಕಾಣುತ್ತಿದೆ. ಹಾಕಿ ಪಟುಗಳಿಗೆ ಇಲಾಖೆ ಸಹಕಾರ ನೀಡಲು ಸಿದ್ಧವಿದೆ ಎಂದರು.

ಪಂದ್ಯಾವಳಿ ಸಂದರ್ಭ ಭಾರತ ಹಾಕಿ ಶಿಬಿರದಲ್ಲಿರುವ ಆಟಗಾರ ಚಂದುರ ಬಿ. ಪೂವಣ್ಣ ಅವರನ್ನು ಸನ್ಮಾನಿಸಲಾಯಿತು. ಚಿತ್ರನಟಿ ಐಮುಡಿಯಂಡ ಶ್ವೇತಾ ಚಂಗಪ್ಪ ಇಂಟರ್‌ನ್ಯಾಷನಲ್ ಟೆಕ್ನಿಕಲ್ ಅಫೀಷಿಯಲ್ ಪುಳ್ಳಂಗಡ ರೋಹಿಣಿ ಬೋಪಣ್ಣ, ಡಾ. ಅಪ್ಪನೆರವಂಡ ಸೋನಿಯಾ ಮಂದಪ್ಪ, ವಕೀಲೆ ಪುಲಿಯಂಡ ಸ್ಮಿತಾ ದೇವಯ್ಯ, ಹಾಕಿ ಮೈಸೂರು ಅಧ್ಯಕ್ಷ ಕೊಂಗAಡ ದಿಲೀಪ್, ಕೊಡವ ಸಮಾಜದ ಅಧ್ಯಕ್ಷ ಪೊಂಜಾAಡ ಗಣಪತಿ, ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಯೂತ್‌ವಿಂಗ್‌ನ ವೇದಿತ್ ಉತ್ತಯ್ಯ, ಮತ್ತಿತರರು ಪಾಲ್ಗೊಂಡಿದ್ದರು.

ಮೂರು ದಿನಗಳ ಕಾಲ ಚಾಮುಂಡಿ ವಿಹಾರ್ ಟರ್ಫ್ ಮೈದಾನದಲ್ಲಿ ಕೊಡವರ ಹಾಕಿ ಕಲರವ ಮೈಸೂರು ಜನತೆಯನ್ನು ಆಕರ್ಷಿಸಿತು. ಮೂರು ದಿನಗಳ ಕಾಲವೂ ಕೊಡವ ವಾಲಗವೂ ಜನಮನ ರಂಜಿಸಿತು. ಕಾರ್ಯಕ್ರಮದಲ್ಲಿ ಕೊಡವ ಸಂಸ್ಕೃತಿಗೆ ಪೂರಕವಾಗಿ ಶ್ರಮಿಸುತ್ತಿರುವ ಮೈಸೂರಿನ ಹಲವರನ್ನು ಸನ್ಮಾನಿಸಲಾಯಿತು. ಚೆಪ್ಪುಡೀರ ಕಾರ್ಯಪ್ಪ, ಅಜ್ಜೇಟಿರ ವಿಕ್ರಂ ಉತ್ತಪ್ಪ ಹಾಗೂ ಚೋಕಿರ ಅನಿತಾ ವೀಕ್ಷಕ ವಿವರಣೆ ನೀಡಿದರು.