ಮಡಿಕೇರಿ, ಜೂ. ೩೦: ವೀರಾಜಪೇಟೆ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರರಾಷ್ಟಿçÃಯ ಮಾದಕ ವ್ಯಸನ ಮುಕ್ತ ದಿನವನ್ನು ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಆಚರಿಸಲಾಯಿತು.

ಪ್ರಾಂಶುಪಾಲೆ ಡಾ. ವಾಣಿ .ಎಂ. ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಡಿವೈಎಸ್‌ಪಿ ಮಹೇಶ್ ಕುಮಾರ್ ಮಾದಕ ವ್ಯಸನದ ದುಷ್ಪರಿಣಾಮಗಳನ್ನು ವಿವರಿಸಿದರು.

ಕೇವಲ ಮಾದಕ ವ್ಯಸನದ ಚಟದಿಂದ ದೂರವಿರುವುದು ಮಾತ್ರವಲ್ಲ, ಮಾದಕ ವ್ಯಸನಕ್ಕೆ ಒಳಗಾದವರನ್ನು, ಆ ಚಟದಿಂದ ಹೊರಗೆ ತರುವುದು ಶಿಕ್ಷಕರ ಕರ್ತವ್ಯವೆಂದು ಹೇಳಿದರು. ಮಡಿಕೇರಿ ವಿಧಿವಿಜ್ಞಾನ ವಿಭಾಗದ ಸಚಿನ್ ಮಾದಕ ವಸ್ತುಗಳು ಹಾಗೂ ಅದರ ದುಷ್ಪರಿಣಾಮಗಳನ್ನು ವಿವರಿಸಿದರು. ವೀರಾಜಪೇಟೆ ನಗರ ಸಬ್‌ಇನ್ಸ್ಪೆಕ್ಟರ್ ಪ್ರಮೋದ್ ಹೆಚ್.ಎಸ್ ಮಾತನಾಡಿ, ಜೀವನದಲ್ಲಿ ಉತ್ತಮ ಗುರಿ, ಉದ್ದೇಶ ಇಟ್ಟುಕೊಂಡು ಸಾಧನೆಯೊಂದಿಗೆ ಮುಂದುವರಿದರೆ ಅದ್ಭುತ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ವಿಧಿವಿಜ್ಞಾನ ಅಧಿಕಾರಿ ಶ್ರೀನಿವಾಸ್, ಎಎಸ್‌ಐ ಅನಿಲ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಹಾಗೂ ಎಲ್ಲ ವಿದ್ಯಾರ್ಥಿ-ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.