ಮಡಿಕೇರಿ ಜೂ.೩೦: ಕೊಡಗು ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಯ್ದೆಯಡಿ ಸುಮಾರು ೧೨,೬೨೯ ಮಂದಿ(೯೯೭೧ ಪುರುಷ ಮತ್ತು ೨,೬೫೮ ಮಹಿಳೆಯರು) ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಟಿ.ಕಾವೇರಿ ತಿಳಿಸಿದ್ದಾರೆ.

ಮಡಿಕೇರಿ ತಾಲೂಕಿನಲ್ಲಿ ೩೦೬೯(೨೪೨೪ ಪುರುಷ ಮತ್ತು ೬೪೫ ಮಹಿಳೆ), ಸೋಮವಾರಪೇಟೆ ತಾಲೂಕಿನಲ್ಲಿ ೪೧೪೬ ಮಂದಿ ಹೆಸರು ನೋಂದಾಯಿಸಿದ್ದು(೩೭೫೯ ಪುರುಷ ಮತ್ತು ೩೮೭ ಮಹಿಳೆಯರು), ವೀರಾಜಪೇಟೆ ತಾಲೂಕಿನಲ್ಲಿ ೫೪೧೪ ಮಂದಿ (೩೭೮೮ ಪುರುಷ ಮತ್ತು ೧೬೨೬ ಮಹಿಳೆಯರು) ಹೆಸರು ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಲು ಸಹಾಯವಾಣಿ ೧೫೫೨೧೪ ಕರೆ ಮಾಡಬಹುದಾಗಿದೆ. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಪಿಂಚಣಿ ಸೌಲಭ್ಯದಡಿ ಮೂರು ವರ್ಷ ಸದಸ್ಯತ್ವದೊಂದಿಗೆ ೬೦ ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ಪಿಂಚಣಿ ಸೌಲಭ್ಯ ದೊರೆಯಲಿದೆ. ಕುಟುಂಬ ಪಿಂಚಣಿ ಸೌಲಭ್ಯದಡಿ ಮೃತ ಪಿಂಚಣಿದಾರರ ಪತಿ/ ಪತ್ನಿಗೆ ಮಾಸಿಕ ಪಿಂಚಣಿ ನೀಡಲಾಗುತ್ತದೆ ಎಂದು ಟಿ.ಕಾವೇರಿ ಅವರು ಹೇಳಿದ್ದಾರೆ.

ದುರ್ಬಲತೆ ಪಿಂಚಣಿ ಯೋಜನೆಯಡಿ ನೋಂದಾಯಿತ ಫಲಾನುಭವಿಯು ಕಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ, ಭಾಗಶಃ ಅಂಗವೈಕಲ್ಯತೆ ಹೊಂದಿದ್ದರೆ ಮಾಸಿಕ ಪಿಂಚಣಿ ಸೌಲಭ್ಯ ಹಾಗೂ ಶೇಕಡಾವಾರು ದುರ್ಬಲತೆಯನ್ನಾಧರಿಸಿ ಸಹಾಯಧನ ನೀಡಲಾಗುತ್ತದೆ.

ಟೂಲ್‌ಕಿಟ್ ಸೌಲಭ್ಯದಡಿ ನೋಂದಾಯಿತ ಫಲಾನುಭವಿಗೆ ವೃತ್ತಿಯಾಧಾರಿತ ಟೂಲ್‌ಕಿಟ್ ಸೌಲಭ್ಯ ಕಲ್ಪಿಸಲಾಗುತ್ತದೆ. ಹೆರಿಗೆ ಸೌಲಭ್ಯದಡಿ ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಸಹಾಯಧನ ನೀಡಲಾಗುತ್ತದೆ. ಹಾಗೆಯೇ ಅಂತ್ಯಕ್ರಿಯೆ ವೆಚ್ಚದಡಿ ನೋಂದಾಯಿತ ಫಲಾನುಭವಿಯು ಮರಣ ಹೊಂದಿದ್ದಲ್ಲಿ ಅಂತ್ಯಕ್ರಿಯೆ ವೆಚ್ಚ ಹಾಗೂ ಅನುಗ್ರಹ ರಾಶಿ ಸಹಾಯಧನ ನೀಡುವ ಯೋಜನೆ ಇದೆ ಎಂದು ವಿವರಿಸಿದ್ದಾರೆ.

ಶೈಕ್ಷಣಿಕ ಸಹಾಯಧನದಡಿ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮೊದಲ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನರ್ಸರಿಯಿಂದ ಸ್ನಾತಕೋತ್ತರ ಪದವಿಯವರೆಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಇದೆ. ಹಾಗೆಯೇ ವೈದ್ಯಕೀಯ ಸಹಾಯಧನ ದೊರೆಯಲಿದೆ. ಅಪಘಾತ ಪರಿಹಾರದಡಿ ನೋಂದಾಯಿತ ಫಲಾನುಭವಿಯು ಅಪಘಾತದಿಂದ ಮರಣ ಹೊಂದಿದ್ದಲ್ಲಿ, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ಅಥವಾ ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ಸಹಾಯಧನ ನೀಡಲಾಗುತ್ತದೆ.

ಚಿಕಿತ್ಸೆಗಳಿಗೆ ಸಹಾಯಧನ ಸೌಲಭ್ಯ

ಪ್ರಮುಖ ವೈದ್ಯಕೀಯ ಸಹಾಯಧನದಡಿ ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತçಚಿಕಿತ್ಸೆ, ಕಣ್ಣಿನ ಶಸ್ತçಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತçಚಿಕಿತ್ಸೆ, ಗರ್ಭಕೋಶ ಶಸ್ತçಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬAಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತçಚಿಕಿತ್ಸೆ, ಇಎನ್‌ಟಿ ಚಿಕಿತ್ಸೆ ಮತ್ತು ಶಸ್ತçಚಿಕಿತ್ಸೆ, ನರರೋಗ ಶಸ್ತçಚಿಕಿತ್ಸೆ, ವ್ಯಾಸ್ಕೂö್ಯಲರ್ ಶಸ್ತçಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಕರುಳಿನ ಶಸ್ತçಚಿಕಿತ್ಸೆ, ಸ್ತನ ಸಂಬAಧಿತ ಚಿಕಿತ್ಸೆ ಮತ್ತು ಶಸ್ತçಚಿಕಿತ್ಸೆ, ಹರ್ನಿಯ ಶಸ್ತçಚಿಕಿತ್ಸೆ, ಅಪೆಂಡಿಕ್ಸ್ ಶಸ್ತçಚಿಕಿತ್ಸೆ, ಮೂಳೆ ಮುರಿತ, ಡಿಸ್‌ಲೊಕೇಶನ್ ಚಿಕಿತ್ಸೆ, ಇತರೆ ಔದ್ಯೋಗಿಕ ಕಾಯಿಲೆಗಳಿಗೆ ನೋಂದಾಯಿತ ಫಲಾನುಭವಿ ಅಥವಾ ಅವರ ಅವಲಂಬಿತರು ಒಳಗಾದಲ್ಲಿ ವೈದ್ಯಕೀಯ ಚಿಕಿತ್ಸೆಗಳಿಗೆ ಸಹಾಯಧನ ನೀಡುವ ಯೋಜನೆ ಇದೆ ಎಂದು ಕಾವೇರಿ ವಿವರಿಸಿದ್ದಾರೆ.

ಮದುವೆ ಸಹಾಯಧನದಡಿ ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ಸಹಾಯಧನ ನೀಡಲಾಗುತ್ತದೆ. ಹಾಗೆಯೇ ತಾಯಿ ಮಗು ಸಹಾಯಹಸ್ತದಡಿ ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ಸಹಾಯಧನ ನೀಡುವ ಯೋಜನೆ ಇದೆ ಎಂದು ಮಾಹಿತಿ ನೀಡಿದ್ದಾರೆ.