ಮಲೇಷಿಯಾ, ಜೂ. ೩೦: ಮಲೇಶಿಯಾದಲ್ಲಿ ನಡೆದ ಏಷ್ಯನ್ ಡಬಲ್ಸ್ ಸ್ಕಾ÷್ವಷ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾಗವಹಿಸಿ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ತಮ್ಮ ಜೊತೆ ಆಟಗಾರ್ತಿ ಅನಾಹತ್ ಸಿಂಗ್ ಅವರೊಂದಿಗೆ ಕೂಡಿ ಮಲೇಷ್ಯಾ ತಂಡದ ಅಮಾನಿ ಹಾಗೂ ಕ್ಸಿನ್ ಜೋಡಿಯ ವಿರುದ್ಧ ಫೈನಲ್ಸ್ನಲ್ಲಿ ೮-೧೧, ೧೧-೯, ೧೧-೧೦ ಅಂಕಗಳೊAದಿಗೆ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪುರುಷರ ತಂಡವನ್ನು ಪ್ರತಿನಿಧಿಸಿದ್ದ ಅಭಯ್ ಸಿಂಗ್ ಹಾಗೂ ಸೆಂತಿಲ್ ಕುಮಾರ್ ಜೋಡಿ ಪಾಕಿಸ್ತಾನದ ನೂರು ಝಮನ್ ಹಾಗೂ ನಾಸಿರ್ ಇಕ್ಬಾಲ್ ಜೋಡಿಯನ್ನು ಫೈನಲ್‌ನಲ್ಲಿ ಸೋಲಿಸಿತು.

ಮಿಕ್ಸ್÷್ಡಡಬಲ್ಸ್ ವಿಭಾಗದಲ್ಲಿ ಅಭಯ್ ಸಿಂಗ್ ಹಾಗೂ ಅನಾಹತ್ ಸಿಂಗ್ ಜೋಡಿ ಮಲೇಷ್ಯಾದ ಅಮೀರ್ ಹಾಗೂ ರೇಚಲ್ ಅರ್ನಾಲ್ಡ್ ಅವರ ವಿರುದ್ಧ ಗೆಲ್ಲುವ ಮೂಲಕ ಮೂರು ಪದಕಗಳು ಭಾರತಕ್ಕೆ ಬಂದAತಾಗಿದೆ. ಈ ಮೂಲಕ ಎರಡನೇ ಆವೃತ್ತಿಯ ಏಷ್ಯನ್ ಸ್ಕಾ÷್ವಷ್ ಡಬಲ್ ಚಾಂಪಿಯನ್‌ಶಿಪ್ ನಲ್ಲಿ ಭಾರತವು ಎಲ್ಲಾ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದೆ.

ಮೂಲತಃ ಕೊಡಗಿನವರಾದ ಕುಟ್ಟಂಡ ಅಂಜನ್ ಚಿಣ್ಣಪ್ಪ ಹಾಗೂ ಸುನಿತಾ ದಂಪತಿಯ ಪುತ್ರಿ ಜೋಶ್ನಾ ಭಾರತದ ಖ್ಯಾತ ಸ್ಕಾ÷್ವಷ್ ಕ್ರೀಡಾತಾರೆಯಾಗಿದ್ದು, ಈ ಹಿಂದೆಯೂ ಭಾರತದ ಪರ ಹಲವಷ್ಟು ಪದಕಗಳ ಸಾಧನೆ ಮಾಡಿದ್ದಾರೆ.