ಮಡಿಕೇರಿ: ಅರುವತ್ತೊಕ್ಲುವಿನ ಸರ್ವದೈವತಾ ವಿದ್ಯಾಸಂಸ್ಥೆಯಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕಿ ಪೋಡಮಾಡ ಭವಾನಿ ನಾಣಯ್ಯ ಅವರು ಮಾತನಾಡಿ, ಯೋಗ ಪ್ರಾಚೀನ ಕಲೆ ಆಗಿದ್ದು ಜೂ. ೨೧ರಂದು ಅಂತರರಾಷ್ಟಿçÃಯ ಯೋಗ ದಿನವನ್ನಾಗಿ ಆಚರಿಸುತ್ತಿರುವುದು ಯೋಗ ಕಲೆಗೆ ಸಂದ ಗೌರವ ಆಗಿದೆ. ಆರೋಗ್ಯಕರವಾದ ಸಂತೋಷಕರವಾದ ಸಹಜವಾದ ಜೀವನ ಶೈಲಿಯೇ ಯೋಗ ಎಂದು ಯೋಗದ ಮಹತ್ವವನ್ನು ವಿವರಿಸಿದರು. ಮತ್ತೋರ್ವ ಅತಿಥಿ ಶಾಂತೆಯAಡ ಮಧು ಮಾಚಯ್ಯ ಮಾತನಾಡಿ, ಯೋಗವು ಜೂ. ೨೧ಕ್ಕೆ ಮಾತ್ರ ಸೀಮಿತ ಆಗಬಾರದು.

ಮನೆ ಮನೆಗಳಲ್ಲೂ ಯೋಗ ಮಾಡಬೇಕು. ಅದರಲ್ಲೂ ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗ ಮಾಡಬೇಕೆಂದು ಕರೆಕೊಟ್ಟರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಸ್ಥಾಪಕ ಕಾಡ್ಯಮಾಡ ಲಲಿತಾ ಮೊಣ್ಣಪ್ಪ, ಪ್ರಾಂಶುಪಾಲ ಪೊನ್ನಿಮಾಡ ಪ್ರದೀಪ್ ಮಾಚಯ್ಯ, ಮುಖ್ಯೋಪಾಧ್ಯಾಯರಾದ ಮನೆಯಪಂಡ ಶೀಲಾ ಬೋಪಣ್ಣ ಉಪಸ್ಥಿತರಿದ್ದರು. ರೋಮಿ ಸುಬ್ಬಯ್ಯ ನಿರೂಪಣೆ, ಧರಣಿ ಸ್ವಾಗತ, ಚಟ್ಟಂಗಡ ನಂದಿತಾ ಸೋಮಣ್ಣ ವಂದಿಸಿದರು.*ಗೋಣಿಕೊಪ್ಪ: ಗೋಣಿಕೊಪ್ಪ ಅಕ್ಷಯ ಚಾರಿಟೆಬಲ್ ಟ್ರಸ್ಟ್ ವತಿಯಿಂದ ೧೧ನೇ ವರ್ಷದ ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲೆಯ ೧೦೦ ವಿದ್ಯಾರ್ಥಿಗಳಿಗೆ ಯೋಗ ಮುದ್ರೆ ಹೊಂದಿರುವ ಟಿ-ಶರ್ಟ್ಗಳನ್ನು ವಿತರಿಸಲಾಯಿತು.

ಪೊನ್ನಂಪೇಟೆ ರಾಮಕೃಷ್ಣ ಶಾರದಾ ಆಶ್ರಮದ ಸ್ವಾಮಿ ಸಂಭವಾನAದ ಸಭಾಂಗಣದಲ್ಲಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಪರಹಿತ ನಂದಾ ಮಹಾರಾಜ್ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಟಿ-ಶರ್ಟ್ಗಳನ್ನು ಅಕ್ಷಯ ಚಾರಿಟೆಬಲ್ ಟ್ರಸ್ಟ್ನ ಸಂಚಾಲಕ ಕುದುಕುಳಿ ಕೆ. ಸೋಮಯ್ಯ ವಿತರಿಸಿದರು. ನಂತರ ವಿದ್ಯಾರ್ಥಿಗಳಿಗೆ ವಿವಿಧ ಯೋಗಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಉಪನ್ಯಾಸ ನೀಡಿದರು. ವಿವಿಧ ಬಗೆಯ ಯೋಗಗಳನ್ನು ವಿದ್ಯಾರ್ಥಿಗಳು ಈ ಸಂದರ್ಭ ಪ್ರದರ್ಶಿಸಿದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಕಲ್ಲುಮಠದ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿ.ಯು. ಕಾಲೇಜು ಸಹಭಾಗಿತ್ವದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಅಂತರರಾಷ್ಟಿçÃಯ ಯೋಗ ದಿನವನ್ನು ಸಂಭ್ರಮದಿAದ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಮಹಾಂತ ಸ್ವಾಮೀಜಿ ವಿದ್ಯಾರ್ಥಿಗಳೊಂದಿಗೆ ಯೋಗದ ವಿವಿಧ ಆಸನಗಳನ್ನು ಮಾಡಿದರು. ನಂತರ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ಕಲಿಕೆಯಿಂದ ದೈಹಿಕ - ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಸಂದೇಶ ನೀಡುತ್ತಾ ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಮುಖ್ಯಶಿಕ್ಷಕ ಅಭಿಲಾಷ್, ಸಹಶಿಕ್ಷಕರು, ಸಿಬ್ಬಂದಿ ಪಾಲ್ಗೊಂಡಿದ್ದರು.ಮಡಿಕೇರಿ: ಕೆ.ವಿ.ಜಿ. ಇಂಜಿನಿಯರಿAಗ್ ಕಾಲೇಜು, ಸುಳ್ಯ ಎನ್.ಎಸ್.ಎಸ್. ಘಟಕದ ವತಿಯಿಂದ ಅಂತರರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಿ.ಇ.ಓ. ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ. ಉಜ್ವಲ್ ಯು.ಜೆ., ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ., ಯೋಗಗುರು ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಾನಂದ ಎ. ಹಾಗೂ ಎನ್.ಎಸ್.ಎಸ್. ಘಟಕಾಧಿಕಾರಿ ಪ್ರೊ. ಸತ್ಯಜಿತ್ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಸಿ.ಇ.ಓ. ಡಾ. ಉಜ್ವಲ್ ಯು.ಜೆ. ಅವರು ಮಾತನಾಡಿ, ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಮೇಲೆ ಯೋಗದ ಪ್ರಯೋಜನ ಮತ್ತು ದೈನಂದಿನ ಜೀವನದಲ್ಲಿ ಯೋಗದ ಪ್ರಾಮುಖ್ಯತೆಯನ್ನು ವಿವರಿಸಿದರು. ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಯೋಗದ ವೈಜ್ಞಾನಿಕ ಹಾಗೂ ಜೀವನಮುಖಿ ಅಂಶಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ವಕ್ತಾರ, ಯೋಗಗುರು ಪ್ರೊ. ಕೃಷ್ಣಾನಂದ ಎ. ಹಲವು ಯೋಗಾಸನಗಳು, ಚಕ್ರಧ್ಯಾನ ಮತ್ತು ಪ್ರಾಣಾಯಾಮಗಳ ಪ್ರಾತ್ಯಕ್ಷಿತೆ ನೀಡಿ, ತಾತ್ವಿಕ ವಿವರಗಳೊಂದಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಘಟಕಾಧಿಕಾರಿ ಪ್ರೊ. ಸತ್ಯಜಿತ್ ಎಂ. ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿAಗ್ ವಿಭಾಗದ ಎನ್.ಎಸ್.ಎಸ್. ಸಂಯೋಜಕಿ ಪ್ರೊ. ನಸೀಮಾ ಸಿ.ಎ. ಅವರು ನಿರ್ವಹಿಸಿದರು. ಸಿವಿಲ್ ಇಂಜಿನಿಯರಿAಗ್ ವಿಭಾಗದ ಎನ್.ಎಸ್.ಎಸ್. ಸಂಯೋಜಕರಾದ ಪ್ರೊ. ಲಕ್ಷಿ÷್ಮÃನಾರಾಯಣ ಎನ್. ಹಾಗೂ ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ ಅವರು ಕಾರ್ಯಕ್ರಮ ನಡೆಯಲು ಸಹಕರಿಸಿದರು. ಯೋಗ ಕಾರ್ಯಕ್ರಮದಲ್ಲಿ ವಿಭಾಗದ ಡೀನ್‌ಗಳು, ವಿಭಾಗ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿ ಯೋಗ ಅಭ್ಯಾಸ ಮಾಡಿದರು.ಚೆಯ್ಯಂಡಾಣೆ: ಕಕ್ಕಬ್ಬೆಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ವಸತಿ ಶಾಲಾ ಮುಖ್ಯ ಶಿಕ್ಷಕಿ ರಝೀನ ಯೋಗದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭ ಶಿಕ್ಷಕ ವೃಂದದವರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ಯೋಗಭ್ಯಾಸ ಮಾಡಿದರು.ಕಡಂಗ: ಸ್ಥಳೀಯ ವಿಜಯ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲಾಯಿತು.

ವಿದ್ಯಾರ್ಥಿಗಳು ಶಿಕ್ಷಕರು ಯೋಗ ಮಾಡುವುದರ ಮೂಲಕ ಯೋಗ ದಿನವನ್ನು ಆಚರಿಸಿದರು. ಯೋಗ ತರಬೇತುದಾರರಾದ ಸಿಂಧು ಅವರ ಮಾರ್ಗದರ್ಶನದಲ್ಲಿ ವಿವಿಧ ಬಗೆಯ ಯೋಗಾಸನಗಳನ್ನು ಶಾಲೆಯ ಆವರಣದಲ್ಲಿ ನಡೆಸಲಾಯಿತು.ವೀರಾಜಪೇಟೆ: ವೀರಾಜಪೇಟೆ ಸರ್ವೋದಯ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಪ್ರಾಚಾರ್ಯರಾದ ಡಾ. ವಾಣಿ ಎಂ. ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಡಾ. ರವಿಕುಮಾರ್ ಕೆ.ಟಿ. ಭಾಗವಹಿಸಿ ಮಾತನಾಡಿ, ದೇಹ ಮತ್ತು ಮನಸ್ಸನ್ನು ನಿಗ್ರಹಿಸಿಕೊಂಡು ಒತ್ತಡರಹಿತ ಜೀವನ ನಡೆಸುವಲ್ಲಿ ಯೋಗದ ಮಹತ್ವವನ್ನು ವಿವರಿಸಿದರು.

ಮತ್ತೋರ್ವ ಅತಿಥಿಗಳಾಗಿ ವಾಸಂತಿ ಕೆ. ಪಾಲ್ಗೊಂಡಿದ್ದರು. ಯೋಗ ಶಿಕ್ಷಣದ ಉಪ ಸಂಯೋಜಕರಾದ ರಾಜಶೇಖರ್ ಕೆ.ಎಸ್. ಅವರ ನಿರ್ದೇಶನದಲ್ಲಿ ವಿದ್ಯಾರ್ಥಿ, ಶಿಕ್ಷಕರಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು.

ಸಮಾರಂಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಮಿನಿ ಕೆ.ಜೆ., ಪದ್ಮಲತ ಡಿ., ಸುಜಾತ ಆರ್. ಹಾಗೂ ಎಲ್ಲಾ ಶಿಕ್ಷಕೇತರ ವೃಂದದವರು ಹಾಗೂ ಎಲ್ಲಾ ಮೊದಲನೆಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಪ್ರಶಿಕ್ಷಣಾರ್ಥಿ ಅನುಷ ಅವರ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭಗೊAಡಿತು. ಆದಯ್ಯ ಅವರು ಸ್ವಾಗತಿಸಿದರು. ಆದಿತ್ಯರೆÀಡ್ಡಿ ಅವರು ವಂದನಾರ್ಪಣೆಗೈದರು. ಪ್ರಶಿಕ್ಷಣಾರ್ಥಿಗಳಾದ ಸರಸ್ವತಿ ಹಾಗೂ ಲೊಯೊಲ ಕಾರ್ಯಕ್ರಮ ನಡೆಸಿಕೊಟ್ಟರು.ಮಡಿಕೇರಿ: ಅಂತರರಾಷ್ಟಿçÃಯ ಯೋಗ ದಿನವನ್ನು ಗೋಣಿಕೊಪ್ಪ ಲಯನ್ಸ್ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.

ದೇವರ ಸ್ತುತಿ, ಗಾಯತ್ರಿ ಮಂತ್ರದೊAದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಯೋಗದ ವಿವಿಧ ಆಸನಗಳನ್ನು ಮಾಡಿಸಲಾಯಿತು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿಕೊಡಲಾಯಿತು.ಗೋಣಿಕೊಪ್ಪ: ರ‍್ವತೋಕ್ಲು ಗ್ರಾಮದ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ೧೧ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಯೋಗಾಭ್ಯಾಸದ ಮಹತ್ವದ ಕುರಿತು ಪೊನ್ನಂಪೇಟೆಯ ಯೋಗಪಟು ಪದ್ಮನಾಭ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಸಂತೋಷ್ ಕುಮಾರ್ ನಿರೂಪಿಸಿದರು. ಯೋಗ ಗೀತೆಯನ್ನು ಅನ್ವಿತರಾವ್ ಹಾಡಿದರು.ಮಡಿಕೇರಿ: ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ವಿವೇಕ ಜಾಗೃತ ಬಳಗ ಹಾಗೂ ಆಯುಷ್ ಇಲಾಖೆ ವತಿಯಿಂದ ಕಾರಾಗೃಹ ನಿವಾಸಿಗಳಿಗೆ ತಾರೀಕು ೧೭ ರಿಂದ ೨೧ ರವರೆಗೆ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು.

ಪತಂಜಲಿ ಯೋಗ ಶಿಕ್ಷಣ ಸಮಿತಿಯ ಒ.ಕೆ. ಲಿಂಗಪ್ಪ ಅವರು ಶಿಬಿರ ನಡೆಸಿಕೊಟ್ಟರು. ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯ್ ಜಿತ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ, ನ್ಯಾಯಾಧೀಶೆ ಶುಭ ಅವರು ಭಾಗವಹಿಸಿದ್ದರು. ಜಿಲ್ಲಾ ಕಾರಾಗೃಹದ ಜೈಲರ್ ಸಂಜಯ್ ಕುಮಾರ ತುಂಬದ, ಸಹಾಯಕ ಜೈಲರ್ ಲತಾ ಹೆಚ್.ಟಿ. ಹಾಗೂ ವಿವೇಕ ಜಾಗೃತ ಬಳಗದ ಪ್ರಭಾವತಿ ಸಿ.ಕೆ. ಅವರು ಹಾಜರಿದ್ದರು. ಜಿಲ್ಲಾ ಕಾರಾಗೃಹದ ವೀಕ್ಷಕÀ ಮಹಾಂತೇಶ್ ನಿರೂಪಿಸಿ, ವಂದಿಸಿದರು.ಶನಿವಾರಸAತೆ: ಸಮೀಪದ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಪ್ರೌಢಶಾಲಾ ವಿಭಾಗದ ವತಿಯಿಂದ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಸುನಿಲ್ ಮಾತನಾಡಿ, ದಿನದ ಮಹತ್ವ ಹಾಗೂ ಯೋಗಾಭ್ಯಾಸದಿಂದ ದೈಹಿಕ - ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಶಿಕ್ಷಕ ಅಬ್ದುಲ್ ರಬ್ ವಿದ್ಯಾರ್ಥಿಗಳಿಗೆ ಯೋಗದ ಹಲವು ಆಸನಗಳ ಬಗ್ಗೆ ತರಬೇತಿ ನೀಡಿದರು. ಸಹಶಿಕ್ಷಕರು, ಪದವಿ ಕಾಲೇಜಿನ ಉಪನ್ಯಾಸಕ ಅಭಿಲಾಷ್ ಇತರರು ಹಾಜರಿದ್ದರು.ಸೋಮವಾರಪೇಟೆ: ಇಲ್ಲಿನ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೧೧ನೇ ವರ್ಷದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಯೋಗ ಮಂತ್ರಗಳನ್ನು ಪಠಿಸುತ್ತಾ ಸೂರ್ಯ ನಮಸ್ಕಾರ ದೊಂದಿಗೆ ವಿವಿಧ ಆಸನಗಳನ್ನು ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗಿಯಾದರು.

ಯೋಗ ಮಾಡುವುದರಿಂದ ವ್ಯಕ್ತಿಯ ಜೀವನ ವನ್ನು ಶಿಸ್ತುಬದ್ದವಾಗಿ ಇಟ್ಟುಕೊಳ್ಳುವುದಲ್ಲದೆ, ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಸ್ವಾಸ್ಥö್ಯವನ್ನು ಕಾಪಾಡಿಕೊಳ್ಳಬಹುದು ಎಂದು ಮುಖ್ಯ ಶಿಕ್ಷಕಿ ಅಣ್ಣಮ್ಮ ಎಂ.ಜೆ. ಅಭಿಪ್ರಾಯಿಸಿದರು.ಚೆಯ್ಯಂಡಾಣೆ: ಸಮಾಜ ಕಲ್ಯಾಣ ಇಲಾಖೆಯ ಪಾಲಿಬೆಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್‌ಪೂರ್ವ ಬಾಲಕಿಯರ ನಿಲಯದಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಮೇಲ್ವಿಚಾರಕಿ ಕೆ.ಎಂ. ಸುಮಯ್ಯ, ಸಿಬ್ಬಂದಿಗಳಾದ ಸುಜಾತ ಪ್ರೀತು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿz್ದÀರು.ಕುಶಾಲನಗರ: ಕುಶಾಲನಗರ ಆಯುಷ್ ಆಸ್ಪತ್ರೆಯಲ್ಲಿ ಯೋಗ ದಿನಾಚರಣೆ ಅಂಗವಾಗಿ ವೈದ್ಯರು, ಸಿಬ್ಬಂದಿಗಳಿಗೆ ಯೋಗ ಕಾರ್ಯಕ್ರಮ ನಡೆಯಿತು. ಯೋಗ ಗುರುಗಳಾದ ಮಧುಸೂದನ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ವೈದ್ಯಾಧಿಕಾರಿ ಡಾ. ಆಶಿತಾ ಮತ್ತು ವೈದ್ಯ ಸಿಬ್ಬಂದಿಗಳು ಇದ್ದರು.ಕುಶಾಲನಗರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಕುಶಾಲನಗರ ವಾತ್ಸಲ್ಯ ಶಿಶುಪಾಲನಾ ಕೇಂದ್ರದಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಪುಟ್ಟ ಮಕ್ಕಳಿಗೆ ಯೋಗಾಭ್ಯಾಸವನ್ನು ನಡೆಸಲಾಯಿತು. ಶಿಕ್ಷಕಿ ರಂಜಿತಾ, ಸಹಾಯಕಿಯರಾದ ಕೃಪಾ, ಅಭಿಲಾಷ್ ಮತ್ತಿತರರು ಇದ್ದರು.