ಮಡಿಕೇರಿ, ಜೂ. ೨೯: ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಯಡತೊರೆ ಶ್ರೀ ಯೋಗಾನಂದೇಶ್ವರ ಮಠದ ಶಂಕರ ಭಾರತಿ ಸ್ವಾಮಿಗಳು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಗೆ ಪೂಜೆ ಸಲ್ಲಿಸಿದರು, ದೇಶದಲ್ಲಿ ಶಾಂತಿ ನೆಲೆಗೊಂಡು ಸುಭಿಕ್ಷೆಯಾಗಲಿ ಎಂದು ಪ್ರಾರ್ಥನೆ ಮಾಡಿದರು.
ಮಠದ ಪರಿವಾರದೊಂದಿಗೆ, ಮಡಿಕೇರಿಯ ಈಶ್ವರ್ ಭಟ್, ರಮೇಶ್ ಹೊಳ್ಳ, ಸಂಪತ್ ಕುಮಾರ್, ಸುಬ್ರಮಣ್ಯ ಹೊಳ್ಳ, ನಾಗರಾಜ್ ಭಟ್ ಪಿ.ಎ. ಶ್ರೀಧರ್ ರೈ, ದೇವಾಲಯದ ಅರ್ಚಕರು ಮತ್ತಿತರರು ಸ್ವಾಮೀಜಿಗಳನ್ನು ಸ್ವಾಗತಿಸಿದರು.