*ಗೋಣಿಕೊಪ್ಪಲು, ಜೂ. ೨೯: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಜ್ಞಾನವಿಕಾಸ ಸಭೆಯನ್ನು ನಡೆಸಲಾಯಿತು.

ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಸಮನ್ವಯ ಅಧಿಕಾರಿ ಉಷಾರಾಣಿ ಮೊಬೈಲ್ ಬಳಕೆಯ ಪರಿಣಾಮ ಮತ್ತು ದುಷ್ಪರಿಣಾಮಗಳ ಬಗ್ಗೆ ಅನಿಸಿಕೆ ಹಂಚಿಕೆಕೊAಡರು. ಸೇವಾ ಪ್ರತಿನಿಧಿ ಸರಿತಾ ಸಂಘಗಳ ನಿರ್ವಹಣೆ, ನಿಯಮಗಳ ಬಗ್ಗೆ ತಿಳಿಸಿದರು. ಒಕ್ಕೂಟದ ಅಧ್ಯಕ್ಷೆ ಲತಾ ಮಕ್ಕಳ ಶಿಕ್ಷಣದ ವಿಷಯದಲ್ಲಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ, ಜೊತೆಗೆ ಹೆಚ್ಚಾಗಿ ಮಕ್ಕಳನ್ನು ಸರಕಾರಿ ಶಾಲೆ, ಅಂಗನವಾಡಿಗಳಿಗೆ ಸೇರಿಸುವಂತೆ ಸಲಹೆ ನೀಡಿದರು. ವಿದ್ಯಾ, ಸೂರ್ಯ, ಜ್ಯೋತಿ ಬಂಧನ, ಗಣಪತಿ ಸಂಘದ ಸದಸ್ಯರು ಹಾಜರಿದ್ದರು.