ವೀರಾಜಪೇಟೆ, ಜೂ. ೨೯: ಆರ್ಜಿ ಗ್ರಾಮ ಪಂಚಾಯಿತಿ ವತಿಯಿಂದ ಆರ್ಜಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ೩೬ ವಿದ್ಯಾರ್ಥಿಗಳಿಗೆ ಉಚಿತ ಕೊಡೆ ವಿತರಿಸಲಾಯಿತು ಮತ್ತು ಸಮವಸ್ತç ಹೊಲಿಗೆ ವೆಚ್ಚವನ್ನು ಭರಿಸಲಾಯಿತು. ಕಾರ್ಯಕ್ರಮದಲ್ಲಿ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ಮತ್ತು ಉಪಾಧ್ಯಕ್ಷೆ ಕವಿತ ಮತ್ತು ಸದಸ್ಯರಾದ ಕಬ್ಬಚ್ಚಿರ ಬೋಪಣ್ಣ, ಉಪೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಕಾರ್ಯದರ್ಶಿ ಮತ್ತು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.