ವೀರಾಜಪೇಟೆ, ಜೂ. ೨೯: ಎರಡು ವರ್ಷಗಳಿಗೊಮ್ಮೆ ಆಚರಣೆಗೊಳಪಡುವ ಹಾತೂರು ಶ್ರೀ ವನಭದ್ರಕಾಳಿ ದೇವರ ದೊಡ್ಡಹಬ್ಬ ಜುಲೈ ೮ ರಂದು ನಡೆಯಲಿದೆ.
ಜುಲೈ ೭ರಂದು ಸಂಜೆ ೭ ಗಂಟೆಗೆ ಕೊಂಗೇಪAಡ ಐನ್ಮನೆಯಲ್ಲಿ ದೇವರ ದರ್ಶನ ಹಾಗೂ ದೇವರ ಮುಖವಾಡ, ಆಯುಧ, ಭಂಡಾರವನ್ನು ಕೊಕ್ಕಂಡ ಐನ್ಮನೆಗೆ ತರಲಾಗುವುದು. ರಾತ್ರಿ ೮ ಗಂಟೆಗೆ ಹಲಸಿನಮರ ಕಟ್ಟೆಯಲ್ಲಿ ಕಲಶ ಪೂಜೆ ನಡೆಸಿ ಉಭಯ ಊರಿನವರು ಸೇರಿ ಮಹಾದೇವರ ದೇವಾಲಯಕ್ಕೆ ತರುವುದು ೯ ಗಂಟೆಗೆ ಮಹಾದೇವರ ದೇವಾಲಯದಲ್ಲಿ ಕಲಸ ಪೂಜೆ ಮಹಾಮಂಗಳಾರತಿ ನಡೆಯಲಿದೆ.
ಜುಲೈ ೮ ರಂದು ಪ್ರಾತ:ಕಾಲ ಕೊಕ್ಕಂಡ ಐನ್ಮನೆಯಲ್ಲಿ ದೇವಿಯ ಮೊಗಪೂಜೆ ಮತ್ತು ಮೊಗತೆರೆ ಹಾಗೂ ದೇವರ ದರ್ಶನದೊಂದಿಗೆ ಮಹಾದೇವರ ಅರಳಿಕಟ್ಟೆಗೆ ಬರುತ್ತದೆ. ಅರಳಿಕಟ್ಟೆಗೆ ಬಂದು ಉಭಯ ಊರಿನವರು ಪೂಜೆ ಸಲ್ಲಿಸಿ ದೇವಾಲಯದಲ್ಲಿ ತೆರೆಯ ದರ್ಶನ ಹಾಗೂ ಊರಿನ ಪರವಾಗಿ ಹರಕೆ ಒಪ್ಪಿಸುತ್ತಾರೆ.
ಅಪರಾಹ್ನ ೨ ಗಂಟೆಗೆ ಕೊಂಗೇಪAಡ ಐನ್ಮನೆಯಲ್ಲಿ ಮೊಗಪೂಜೆ ಮತ್ತು ಮೊಗತೆರೆ ಹಾಗೂ ದೇವರ ದರ್ಶನ. ಅದೇ ರೀತಿ ಕೇಳಪಂಡ ಐನ್ಮನೆಯಲ್ಲಿ ಅಯ್ಯಪ್ಪ ದೇವರ ಹೂವಿನ ಪೂತೆರೆಗೆ ಪೂಜೆ ಸಲ್ಲಿಸಿ ಅರಳಿಕಟ್ಟೆಗೆ ಬಂದು ಉಭಯ ಊರಿನವರು ಪೂಜೆ ಸಲ್ಲಿಸಿ ಅಪರಾಹ್ನ ೩.೩೦ ಗಂಟೆಗೆ ದೇವಾಲಯದಲ್ಲಿ ದೇವರ ಹಾಗೂ ತೆರೆಯ ದರ್ಶನದ ನಂತರ ಭಕ್ತಾದಿಗಳಿಂದ ಹರಕೆ ಒಪ್ಪಿಸಲಾಗುವುದು ಎಂದು ತಕ್ಕಮುಖ್ಯಸ್ಥರು ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.