ಚೆಟ್ಟಳ್ಳಿ, ಜೂ. ೨೯: ಸಣ್ಣಗಿನ ಸ್ವಯಂ ಚಾಲಿತ ಯಂತ್ರವೊAದನ್ನು ಇಟ್ಟು ಜಲ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಗ್ರಾಮೀಣ ಮಟ್ಟದ ಸ್ವಯಂಚಾಲಿತ ಕಿರುವಿದ್ಯುತ್ ಘಟಕ ಯೋಜನೆಯನ್ನು ಕೊಡಗಿನ ಜನತೆ ಹಲವು ವರ್ಷಗಳಿಂದ ಕಾಯುವಂತಾಗಿದೆ.

ವಿದ್ಯುತ್ ಪೂರೈಕೆಯ ಅಭಾವ ನೀಗಿಸಲು ಸೂರ್ಯನಿಂದ ಪಡೆಯಬಹುದಾದ ಸೌರಶಕ್ತಿ, ಗಾಳಿಯಿಂದ ಪವನ ಶಕ್ತಿ ಹಾಗು ಜಲ ಮೂಲಗಳಿಂದ ಪಡೆಯಬಹುದಾದ ಜಲ ವಿದ್ಯುತ್‌ಗೆ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಾ ಬರುತ್ತಿದ್ದರೂ ಇಂತಹ ಯೋಜನೆಗಳು ಗ್ರಾಮೀಣ ಜನತೆಗೆ ಇನ್ನೂ ಕನಸಾಗಿಯೇ ಉಳಿದಿದೆ.

ಮಳೆ ಹೆಚ್ಚಾಗಿ ಬೀಳುವ ಕೊಡಗಿನ ಪರಿಸರದಲ್ಲಿ ಬೆಟ್ಟಗುಡ್ಡಗಳು ಹೆಚ್ಚಾಗಿ ಕಂಡು ಬರುವ ಹಲವು ಗ್ರಾಮಗಳಲ್ಲಿ ತೋಡುಗಳು ತೊರೆಗಳು ಉಕ್ಕಿ ಹರಿಯುತ್ತಿರುವುದು ಸರ್ವೆ ಸಾಮಾನ್ಯ. ಮಳೆಗಾಲ ಬಂತೆAದರೆ ಸಾಕು ಗ್ರಾಮೀಣ ಪ್ರದೇಶದಲ್ಲಿ ಮಳೆಗಾಳಿಯ ರಭಸಕ್ಕೆ ಮರಗಳು ಉರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡು ತಿಂಗಳಾನುಗಟ್ಟಲೆ ಕಾರ್ಗತ್ತಲಲ್ಲಿ ಬದುಕುವಂತಾಗುತ್ತದೆ.

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಪಿಕೊಹೈಡ್ರೋ ಹಾಗು ಪ್ರಕೃತಿ ಹೈಡ್ರೋ ಎಂಬ ಕಿರುಜಲ ವಿದ್ಯುತ್ ಘಟಕ ಸ್ಥಾಪಿಸುವ ಎರಡು ಖಾಸಗಿ ಕಂಪನಿಗಳು ಕಳೆದ ೧೦ ವರ್ಷಗಳ ಹಿಂದೆ ಕೊಡಗಿನ ಗ್ರಾಮೀಣ ಭಾಗದಲ್ಲಿ ಹಲವೆಡೆ ಇಂತಹ ಸ್ವಯಂ ಚಾಲಿತ ಕಿರು ಜಲವಿದ್ಯುತ್ ಘಟಕವನ್ನು ಸ್ಥಾಪಿಸಿತು. ಕೆಲವೆಡೆ ತಾವೇ ತಯಾರಿಸಿದ ಸ್ವಯಂಚಾಲಿತ ಮೋಟರನ್ನು ಅಳವಡಿಸಿಕೊಂಡು ಮಳೆಗಾಲದ ವಿದ್ಯುತ್ ಸಮಸ್ಯೆಗೊಂದು ಪರಿಹಾರ ನೀಡುತ್ತಾ ಬರುತಿತ್ತು. ಕೊಡಗಿನ ಪರಿಸರದಲ್ಲಿ ನಿತ್ಯವೂ ನೀರಿನ ಹರಿವು ಇರುವೆಡೆ ಈ ಸ್ವಯಂಚಾಲಿತ ಕಿರು ವಿದ್ಯುತ್ ಘಟಕ ವರ್ಷದ ೩೬೫ ದಿನವೂ ಚಾಲನೆಯಲ್ಲಿದ್ದು ವಿದ್ಯುತ್ ನೀಡುತಿತ್ತು. ಆದರೆ ನಿರ್ವಹಣೆಯ ಕೊರತೆಯಿಂದ ಹಲವೆಡೆ ಈ ಯೋಜನೆ ನೀರು ಪಾಲಾಯಿತೆಂದು ಪಿಕೊ ಹೈಡ್ರೋ ಪ್ರೋಜೆಕ್ಟ್ನ ಏಜೆಂಟ್ ಹಾಗು ಮೇಲ್ವಿಚಾರಕರಾದ ಗಣಪತಿ ಹೇಳುತ್ತಾರೆ.

ಚೆಟ್ಟಳ್ಳಿ ಸಮೀಪ ಈರಳೆವಳಮುಡಿ ಗ್ರಾಮದ ಜಲದರ್ಶಿನಿ ತೋಟದಲ್ಲಿ ಮನೆಯಲ್ಲಿ ಪ್ರತೀ ವರ್ಷ ಮಳೆಗಾಲ ಬಂದರೆ ಸಾಕು ಮಳೆಗಾಳಿಯಿಂದಾಗಿ ಮರಬಿದ್ದು ಬೆಟ್ಟ ಜರಿದು ತಿಂಗಳಾನುಗಟ್ಟಲೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಪಿಕೊಹೈಡ್ರೋ ಎಂಬ ಖಾಸಗಿ ಕಂಪನಿಯನ್ನು ಸಂಪರ್ಕಿಸಿ ಮಳೆಗಾಲದ ಸಮಯದಲ್ಲಿ ಮನೆಯ ಹಿಂಬದಿಯಲ್ಲಿ ಹರಿಯುತಿದ್ದ ನೀರಿನ ಜರಿಗೆ ಸ್ವಯಂಚಾಲಿತ ಕಿರುಜಲವಿದ್ಯುತ್ ಘಟಕ ಅಳವಡಿಸಿದ್ದು, ಕಿರುವಿದ್ಯುತ್ ಯೋಜನೆಯಡಿ ಸರಕಾರದಿಂದ ಸಬ್ಸಿಡಿ ಹಣ ದೊರೆತಿತ್ತು. ಮಳೆಗಾಲದಲ್ಲಿ ಕಿರು ಜಲ ವಿದ್ಯುತ್ ಘಟಕದಿಂದ ವಿದ್ಯುತ್ ಪಡೆಯುತ್ತಿದ್ದು, ಬಹಳ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ಚೀಯಂಡಿ ತೇಜಸ್ಸ್ಪಾಪಯ್ಯ.

ಕೈಗೆಟುಕದ ಯೋಜನೆ

ಈ ವಿದ್ಯುತ್‌ಯೋಜನೆ ಕೊಡಗಿಗೆ ಬಾರಿ ಫಲಕಾರಿಯಾದರೂ ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚಿನ ಬೆಲೆಯನ್ನು ನೀಡಿ ಈ ಕಿರುವಿದ್ಯುತ್ ಘಟಕವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದ್ದರಿಂದಲೇ ಈ ಯೋಜನೆ ಸಫಲವಾಗಿಲ್ಲ.

ಆದರೂ ಎರಡು ಖಾಸಗಿ ಕಂಪನಿಗಳು ಒಟ್ಟು ಸೇರಿ ೨೫೦ರಿಂದ೩೦೦ ಸ್ವಯಂಚಾಲಿತ ಕಿರು ಜಲವಿದ್ಯುತ್ ಘಟಕಗಳನ್ನು ಕೊಡಗಿನ ಹಲವೆಡೆ ಅಳವಡಿಸಲಾಗಿದೆ. ಕಳೆದ ಐದು ವರ್ಷಗಳಿಂದ ಈ ಕಿರುವಿದ್ಯುತ್ ಘಟಕ ಯೋಜನೆಗೆ ಸಬ್ಸಿಡಿ ಹಣಬರುತಿಲ್ಲವಾದ್ದರಿಂದ ಯಂತ್ರದ ಅಳವಡಿಕೆಯ ಪೂರ್ತಿ ಖರ್ಚುವೆಚ್ಚ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚಾಗುವುದರಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಈ ಯೋಜನೆ ಕನಸಿನ ಮಾತಾಗಿದೆ.

ಕರ್ನಾಟಕ ರಿನ್ಯೂವೇಬಲ್ ಎನರ್ಜಿ ಡೆವಲೋಪ್‌ಮೆಂಟ್ ಲಿಮಿಟೆಡ್ ಎಂಬ ಸರಕಾರದ ಅಂಗ ಸಂಸ್ಥೆ ಸೂರ್ಯ, ಗಾಳಿ ಹಾಗೂ ಜಲ ಮೂಲದಿಂದ ವಿದ್ಯುತ್‌ಯೋಜನೆ ಕೈಗೊಳ್ಳಲು ಹಲವಾರು ಯೋಜನೆಗಳನ್ನು ರೂಪಿಸುತ್ತಾ ಬರುತ್ತಿದೆ. ಹಲವು ವರ್ಷಗಳ ಹಿಂದೆ ದೊಡ್ಡದಾದ ಟರ್‌ಬೈನ್‌ಗಳನ್ನು ಬಳಸಿ ನೀರಿನ ಶಕ್ತಿಯಿಂದ ವಿದ್ಯುತ್‌ಶಕ್ತಿಯನ್ನು ಪಡೆಯುತ್ತಿದ್ದದು ಈಗ ಅತೀ ಸಣ್ಣಗಿನ ನೂತನ ತಂತ್ರಜ್ಞಾನದ ಸ್ವಯಂ ಚಾಲಿತ ಕಿರು ಜಲವಿದ್ಯುತ್ ಘಟಕವನ್ನು ಮಾಡಲಾಗುತ್ತಿದೆ.

ಹಳ್ಳಿಹಳ್ಳಿಗಳಲ್ಲಿ ಈ ಯೋಜನೆಗಳನ್ನು ರೂಪಿಸುವ ಮೂಲಕ ವಿದ್ಯುತ್ ಉಳಿತಾಯಕ್ಕೆ ಶ್ರಮಿಸುತ್ತಿದೆ. ಪ್ರಕೃತಿಹೈಡ್ರೋ ಹಾಗು ಪಿಕೊ ಹೈಡ್ರೋ ಕಂಪನಿಗಳAತಹ ಹಲವು ಖಾಸಗಿ ಕಂಪನಿಗಳಿಗೆ ಕೆಆರ್‌ಇಡಿಎಲ್ ಸ್ವಯಂಚಾಲಿತ ಕಿರು ಜಲವಿದ್ಯುತ್ ಘಟಕದ ಸ್ಥಾಪನೆಗೆ ಅನುಮತಿ ನೀಡಿತು. ಸರಕಾರದ ಹಣ ಬರಲು ತಡವಾಗುವುದರಿಂದ ಅರ್ಜಿದಾರರು ಮೊದಲೇ ಹಣಪಾವತಿಸಿ ನಂತರ ಸರಕಾರದಿಂದ ಬರುವ ಸಬ್ಸಿಡಿ ಹಣವನ್ನು ಪಡೆಯಬೇಕಿತ್ತು. ಈ ಸ್ವಯಂ ಚಾಲಿತ ಕಿರುಜಲವಿದ್ಯುತ್ ಘಟಕವನ್ನು ಕೊಡಗಿನಲ್ಲಿ ಕಳೆದ ೧೫ ವರ್ಷಗಳಿಂದ ಬಳಸುತ್ತಿದ್ದವರು ಪೂರ್ಣ ಪ್ರಮಾಣದ ಲಾಭ ಪಡೆಯುತ್ತಿದ್ದಾರೆ.

ಸರಕಾರವೇ ಮುಂದಾಗಲಿ

ಕೊಡಗಿನ ಬೆಟ್ಟಗುಡ್ಡಗಳ ಪರಿಸರದಲ್ಲಿ ಮಳೆಗಾಲದಲ್ಲಿ ಪ್ರತಿಯೊಂದು ಹಳ್ಳಿಗಳಲ್ಲಿ ನದಿ, ತೊರೆ, ಜರಿಗಳು ಉಕ್ಕಿ ಹರಿಯುತ್ತಿರುತ್ತವೆ. ಇಂತಹ ಹಳ್ಳಿಗಳಲ್ಲಿ ಸರಕಾರದ ಅಂಗ ಸಂಸ್ಥೆಯಾದ ಕರ್ನಾಟಕ ರಿನ್ಯೂವೇಬಲ್ ಎನರ್ಜಿ ಡೆವಲೋಪ್‌ಮೆಂಟ್ ಲಿಮಿಟೆಡ್ ಸರ್ವೆ ನಡೆಸಿ ಕೊಡಗಿನ ಪ್ರತಿಯೊಂದು ಹಳ್ಳಿಗಳಿಗೂ ಸರಕಾರದಿಂದಲೇ ಸ್ವಯಂ ಚಾಲಿತ ಕಿರುಜಲ ವಿದ್ಯುತ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಮುಂದಾದರೆ ಇದು ಗ್ರಾಮೀಣ ಭಾಗದ ಜನತೆಗೆ ವರದಾನವಾಗಲಿದೆ.

-ಪುತ್ತರಿರ ಕರುಣ್‌ಕಾಳಯ್ಯ