ವೀರಾಜಪೇಟೆ, ಜೂ. ೨೯: ವೀರಾಜಪೇಟೆ ಆರ್ಜಿ ಗ್ರಾಮದ ಮಲಬಾರ್ ರಸ್ತೆಯ ಕೊರಗಜ್ಜ ದೇವಾಲಯ ಬಳಿಯ ಹೆದ್ದಾರಿಯ ತಿರುವಿನಲ್ಲಿ ನಿನ್ನೆ ರಾತ್ರಿ ಸರಣಿ ಅಪಘಾತ ಸಂಭವಿಸಿದೆ.

ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಮೊದಲ ಅಪಘಾತವಾಗಿದೆ. ಬೆಳಿಗ್ಗೆ ಮೂರು ಗಂಟೆಗೆ ಅದೇ ತಿರುವಿನಲ್ಲಿ ನಾಲ್ಕು ಕಾರುಗಳು ಅಪಘಾತಕ್ಕೊಳಗಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಅಪಾಯಕಾರಿ ತಿರುವಿನಲ್ಲಿ ಯಾವುದೇ ಎಚ್ಚರಿಕೆಯ ನಾಮಫಲಕ ಅಳವಡಿಸದೇ ಇರುವುದು ಹಾಗೂ ಕೇರಳ ನೋಂದಣಿ ಹೊಂದಿದ ವಾಹನಗಳು ವೇಗವಾಗಿ ಇಲ್ಲಿ ಸಾಗುವುದರಿಂದ ಅಲ್ಲದೆ ವಾಹನಗಳಿಗೆ ಅಳವಡಿಸಲಾಗಿರುವ ಹೈಬೀಮ್ ಲೈಟ್‌ಗಳಿಂದ ಹಿಂಭಾಗದಲ್ಲಿ ಬರುವ ವಾಹನಗಳಿಗೆ ಮುಂದೆ ರಸ್ತೆ ಕಾಣದೆ ಈ ಭಾಗದಲ್ಲಿ ರಾತ್ರಿ ಸಮಯದಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸುತ್ತಿವೆ ಎನ್ನಲಾಗಿದೆ.