ಸೋಮವಾರಪೇಟೆ, ಜೂ. ೨೯: ತಾಲೂಕಿನಾದ್ಯಂತ ಶನಿವಾರ ರಾತ್ರಿ ಮಳೆ ಸುರಿದಿದ್ದು, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನಿಗರಕೊಪ್ಪ ಗ್ರಾಮ ಸಂಪರ್ಕ ರಸ್ತೆಯ ಪಕ್ಕದ ಬರೆ ಕುಸಿದಿದ್ದು ಗ್ರಾಮಸ್ಥರು ಆತಂಕಗೊAಡಿದ್ದಾರೆ. ಕುಸಿದ ಜಾಗದಲ್ಲಿ ತಡೆಗೋಡೆ ನಿರ್ಮಿಸಿ ರಸ್ತೆ ಕುಸಿಯದಂತೆ ಸಂಬAಧಪಟ್ಟ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.