ವೀರಾಜಪೇಟೆ, ಜೂ. ೨೮: ಇಲ್ಲಿನ ಎಫ್.ಎಂ.ಸಿ. ಮುಖ್ಯರಸ್ತೆಗೆ ಹೊಂದಿ ಕೊಂಡAತೆ ಇರುವ ಬ್ಲಾಕ್ ಸಂಖ್ಯೆ ೫ರಲ್ಲಿ ವ್ಯಕ್ತಿಯೊಬ್ಬರು ಅನಧಿಕೃತ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ದೂರು ನೀಡಲಾಗಿದೆ.
ವರ್ತಕ ಪ್ರಖರಾಜ್ ಚೌಧರಿ ಎಂಬವರು ಪುರಸಭೆಗೆ ದೂರು ನೀಡಿ ತಾನು ೨೦೦೬ರಲ್ಲಿ ಮನೆ ನಿರ್ಮಿಸಿದ್ದು, ಇದೀಗ ಪಕ್ಕದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅನಧಿಕೃತ ವಾಗಿ ಕಟ್ಟಡ ನಿರ್ಮಾಣಕ್ಕೆ ಮಣ್ಣು ಅಗೆದು ಅಕ್ಕ-ಪಕ್ಕದವರಿಗೆ ತೊಂದರೆ ಆಗಿದೆಯೆಂದು ಹೇಳಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ ಅವರು, ಕಾಮಗಾರಿಗೆ ಸಂಬAಧಿತ ವ್ಯಕ್ತಿ ಅನುಮತಿ ಪಡೆಯದೆ ಇರುವುದರಿಂದ ಅದನ್ನು ಸ್ಥಗಿತಗೊಳಿಸಲು ಆದೇಶಿಸಿದ್ದಾರೆ.