ಸುಂಟಿಕೊಪ್ಪ, ಜೂ. ೨೮: ಮಾನಸಿಕ, ದೈಹಿಕ ಆರೋಗ್ಯದ ಸಮತೋಲನಕ್ಕೆ ಯೋಗ ಅಭ್ಯಾಸವು ಬಹಳ ಸಹಕಾರಿ ಆಗಲಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಮತ್ತು ಸಮಾಜಸೇವಕರಾದ ಹರಪಳ್ಳಿ ರವೀಂದ್ರ ಅವರು ಹೇಳಿದರು.
ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕವನ್ನು ವಿತರಿಸಿ, ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಒಳಗೊಂಡAತೆ ಎಲ್ಲರಿಗೂ ಯೋಗಭ್ಯಾಸದ ಕುರಿತು ಬೋಧನೆಯನ್ನು ನೀಡಿದರು.
ಶತಮಾನಗಳ ಹಿಂದೆ ಭಾರತದ ಸಂಪ್ರದಾಯದAತೆ ಋಷಿಮುನಿಗಳು ಕಲಿಸಿಕೊಟ್ಟ ಒಂದು ಅದ್ಭುತವಾದ ವ್ಯಾಯಾಮವಾಗಿದೆ ಯೋಗಾಸನ. ಇಂದಿನ ಮಕ್ಕಳು, ಯುವಕರು ಹಾಗೂ ವೃದ್ಧಾಪ್ಯದ ಅಂಚಿನಲ್ಲಿ ಇರುವವರು ಎಲ್ಲರೂ ಸಹ ತಮ್ಮ ಜೀವನದುದ್ದಕ್ಕೂ ಯೋಗವನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್, ಎಸ್.ಡಿ.ಎಂ.ಸಿ ಅಧ್ಯಕ್ಷ ಹೆಚ್.ಯು. ರಫೀಕ್ ಖಾನ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳಾದ ಕೆ.ಕೆ. ಪ್ರಸಾದ್ ಕುಟ್ಟಪ್ಪ, ಕೆ.ಎಂ. ಆಲಿಕುಟ್ಟಿ, ಎ. ಶಬೀರ್, ಹರಪಳ್ಳಿ ರವೀಂದ್ರ ಅಭಿಮಾನಿ ಬಳಗದ ಕೆ.ಕೆ. ಹರೀಶ್, ಖಾಸಿಂ ಭಾಯ್, ಬಸಪ್ಪ, ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದದವರು, ದೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.