ಕೂಡಿಗೆ, ಜೂ. ೨೮: ಹಾರಂಗಿ ಅಣೆಕಟ್ಟೆಯಿಂದ ಈಗಾಗಲೇ ೭ ಟಿ.ಎಂ.ಸಿ. ಅಷ್ಟು ನೀರು ನದಿಗೆ ಬಿಡಲಾಗಿದೆ.
ಈ ಬಾರಿ ಮೇ ತಿಂಗಳಲ್ಲಿ ಹಾರಂಗಿಯ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾಗುವ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರು ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ನಿಯಮದಂತೆ ನೀರು ಸಂಗ್ರಹ ಮಾಡಿ ಹೆಚ್ಚುವರಿ ನೀರನ್ನು ನದಿಗೆ ಹರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ. ತಿಂಗಳಿನಿAದ ಜೂನ್ ತಿಂಗಳ ಅಂತ್ಯದ ವೇಳೆಗೆ ಅಣೆಕಟ್ಟೆಯಿಂದ ನದಿಗೆ ಒಟ್ಟು ೭ ಟಿ.ಎಂ.ಸಿ. ನೀರು ಹರಿಸಲಾಗಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ.