ಮಡಿಕೇರಿ, ಜೂ. ೨೭: ಕಾಡಾನೆ ಸೇರಿದಂತೆ ಇತರ ವನ್ಯಜೀವಿ ಉಪಟಳ ತಡೆಗೆ ವೈಜ್ಞಾನಿಕ ಕಾರ್ಯಯೋಜನೆ ರೂಪಿಸಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಅರಣ್ಯ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು. ಅಲ್ಲಿ ಈ ವರದಿಯನ್ನು ಮುಂದಿಟ್ಟು ಪರಿಹಾರೋಪಾಯದ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಭರವಸೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳ ನಡುವೆ ವನ್ಯಜೀವಿ ಉಪಟಳದ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸಭೆ ಮಧ್ಯದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ ಉಸ್ತುವಾರಿ ಸಚಿವರು ಸಭೆ ನಡೆಸುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಜಿಲ್ಲೆಯಲ್ಲಿರುವ ಕಂದಕ ನಿರ್ವಹಣೆಗೆ ಕ್ರಮವಹಿಸಲು ಸೂಚಿಸಲಾಗಿತ್ತು. ರೂ. ೨೧ ಕೋಟಿ ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಅದರ ಪ್ರಗತಿಯ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಕಂದÀಕ, ರೈಲ್ವೆ ಬ್ಯಾರಿಕೇಡ್ ಸಮರ್ಪಕವಾಗಿರುವ ಕಡೆ ಆನೆ ಹಾವಳಿ ಕಡಿಮೆಯಾಗಿದೆ. ಒಂದು ಕಡೆಯಿಂದ ಆನೆ ಓಡಿಸಿದರೆ ಮತ್ತೊಂದು ಕಡೆಯಿಂದ ಬರುತ್ತಿದೆ. ಇದಕ್ಕೆ ಪರಿಹಾರದ ಅವಶ್ಯಕತೆ ಇದೆ. ತೋಟದಲ್ಲಿರುವ ಆನೆಗಳನ್ನು ಗುರುತಿಸಿ ನಂಬರ್, ಹೆಸರು ನೀಡಲಾಗಿದೆ. ವೈಜ್ಞಾನಿಕವಾಗಿ ಕಂದಕ ಇರುವ ಕಡೆ ಸಮಸ್ಯೆಗಳಿಲ್ಲ. ಪ್ರದೇಶ ವಾರು ಭೌಗೋಳಿಕ ಹಿನ್ನೆಲೆಯಡಿ ಕ್ರಮ ಕೈಗೊಳ್ಳಬೇಕು. ಕಂದಕ, ಬ್ಯಾರಿಕೇಡ್ ನಿರ್ಮಾಣ ಹೆಚ್ಚಾಗಬೇಕು ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕೆದಕಲ್ ಗ್ರಾಮದಲ್ಲಿ ೩೦ ರಿಂದ ೪೦ ಆನೆಗಳಿವೆ. ಆದರೆ, ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕಾರ್ಯ ನಡೆಸದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಅವರು, ಕೂಂಬಿAಗ್‌ನಲ್ಲಿ ಸಮನ್ವಯತೆ ಸಾಧಿಸಬೇಕು. ವಲಯ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದಿರುವುದು ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ವನ್ಯಜೀವಿ ದಾಳಿ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಕಾಡುತ್ತಿದೆ. ಕೊಡಗು, ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆ ಇದೆ. ಕಾಡಾನೆ ಹಾವಳಿ ನಿಯಂತ್ರಣ ವೈಫಲ್ಯದ ಬಗ್ಗೆ ಅಧ್ಯಯನ ಆಗಬೇಕಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ರಯೋಜನವಿಲ್ಲ. ದಾಳಿಗೊಳಗಾದವರಿಗೆ ಪರಿಹಾರ ನೀಡಿದ ಮಾತ್ರಕ್ಕೆ ಸಮಸ್ಯೆಗೆ ಪರಿಹಾರವಾಗುವುದಿಲ್ಲ. ವೈಜ್ಞಾನಿಕವಾಗಿ ಶಾಶ್ವತ ಯೋಜನೆ ರೂಪಿಸಬೇಕು. ಕಾಡಿನಲ್ಲಿ ಆಹಾರ, ನೀರಿನ ಕೊರತೆ ಹಿನ್ನೆಲೆ ಆನೆಗಳು ನಾಡಿಗೆ ಬರುತ್ತಿವೆೆ. ಇದರಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.
ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಮಾತನಾಡಿ, ಈಗಾಗಲೇ ಆನೆ ಕಾರಿಡಾರ್‌ಗಳನ್ನು ಗುರುತಿಸಲಾಗಿದೆ. ಕಂದಕ, ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಎಐ ಆಧರಿತ ಕ್ಯಾಮರ ಅಳವಡಿಸಿ ಚಲವಲನ ಪತ್ತೆ ನಡೆಯುತ್ತಿದೆ. ಅರಣ್ಯದಲ್ಲಿ ಕೆರೆಗಳ ಅಭಿವೃದ್ಧಿಗೂ ಕ್ರಮವಹಿಸಲಾಗಿದೆ ಎಂದರು.
ವೀರಾಜಪೇಟೆ ಉಪ ವಲಯ ಅರಣ್ಯಾಧಿಕಾರಿ ಜಗನ್ನಾಥ್ ಮಾತನಾಡಿ, ೨೦೨೪ರಲ್ಲಿ ಆನೆ ಗಣತಿಯಲ್ಲಿ ೧೮೫ ಆನೆಗಳು ಕಂಡು ಬಂದಿದ್ದವು. ೧೦೯ ಆನೆ ವೀರಾಜಪೇಟೆ ಭಾಗದಲ್ಲಿ ಗುರುತಿಸಲಾಗಿದೆ. ಈ ಪೈಕಿ ೧೦೫ ಆನೆ ತೋಟಗಳಲ್ಲಿವೆ. ಇದರ ಮ್ಯಾಪಿಂಗ್ ಮಾಡಲಾಗುತ್ತಿದೆ. ೪ ಜನರನ್ನು ಒಳಗೊಂಡ ೩೧ ತಂಡಗಳನ್ನು ರಚಿಸಲಾಗಿದೆ. ಸಾರ್ವಜನಿಕರ ಮೊಬೈಲ್‌ಗೆ ಸಂದೇಶ ಕಳುಹಿಸಿ ಆನೆ ಸಂಚಾರದ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ವಿವರಿಸಿದರು.
ನೀಲಗಿರಿ, ಅಕೇಷಿಯ ತೆರವಿಗೆ ಸೂಚನೆ
ಅರಣ್ಯದಲ್ಲಿ ಉಪಯೋಗಕ್ಕೆ ಬಾರದ ನೀಲಗಿರಿ, ಅಕೇಷಿಯ ಮರಗಳನ್ನು ತೆರವು ಮಾಡಿ ಉಪಯುಕ್ತ ಹಣ್ಣಿನ ಮರ ಬೆಳಸಬೇಕೆಂದು ಎಂಎಲ್‌ಸಿ ಭೋಜೇಗೌಡ ಒತ್ತಾಯಿಸಿದರು. ಅರಣ್ಯ ಪ್ರದೇಶದಲ್ಲಿ ನೀಲಗಿರಿ, ಅಕೇಷಿಯ ಮರಗಳು ಬೆಳೆಯುವುದರಿಂದ ನಾಡಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ. ಅದರ ಬದಲು ಹಣ್ಣಿನ ಗಿಡ ಬೆಳೆಯಬೇಕು. ತೋಟಗಳಲ್ಲಿ ಹಲಸಿನ ಮರವಿರುವುದರಿಂದ ನಾಡಿಗೆ ಬರುತ್ತಿದೆ ಎಂದರು.
ಮರ ತೆರವು ವಿಳಂಬ - ಮಂತರ್ ಅಸಮಾಧಾನ
ಮರಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ಕೋರಿದರೂ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದ ಅನೇಕ ಸಮಸ್ಯೆಗಳಾಗುತ್ತಿವೆ ಎಂದು ಡಾ. ಮಂತರ್ ಗೌಡ ಆರೋಪಿಸಿದರು.
ಮಳೆಗಾಲದಲ್ಲಿ ಮರ ಬಿದ್ದು ಮನೆ ಹಾನಿ, ಸಾವು-ನೋವು ಸಂಭವಿಸಿರುವುದು ವರದಿಯಾಗಿದೆ. ಇದಕ್ಕೆ ಅರಣ್ಯ ಇಲಾಖೆ ನೇರ ಕಾರಣವಾಗಿದೆ. ಅನುಮತಿ ಕೋರಿದರೂ ವಿಳಂಬದಿAದಾಗಿ ಮರ ತೆರವು ಮಾಡಲಾಗದೆ ಮರ ಬಿದ್ದ ಉದಾಹರಣೆಗಳು ಜಿಲ್ಲೆಯಲ್ಲಿ ನಡೆದಿವೆ ಎಂದರು.
ಅರಣ್ಯ ಪ್ರದೇಶದಲ್ಲಿ ಬೇಡದ ಮರ-ಗಿಡಗಳನ್ನು ನೆಡಲಾಗುತ್ತಿದೆ. ವನ್ಯಜೀವಿಗೆ ಉಪಯುಕ್ತ ಗಿಡ-ಮರ ಬೆಳೆಸುವಂತಾಗಬೇಕು. ಕೊಡಗಿಗೆ ಅವಶ್ಯವಿರುವ ರೈಲ್ವೆ ಬ್ಯಾರಿಕೇಡ್‌ಗೆ ಅನುದಾನ ನೀಡಲು ಸರಕಾರ ಸಿದ್ಧವಿದೆ. ಇಲಾಖೆ ಕ್ರಿಯಾಯೋಜನೆ ನೀಡುತ್ತಿಲ್ಲ ಎಂದು ದೂರಿದರು.
ಕೆ-ಶಿಪ್ ಅಡಿಯಲ್ಲಿ ಮಡಿಕೇರಿ- ದೋಣಿಗಲ್ಲು ರಸ್ತೆ ನಿರ್ಮಾಣ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಆದರೆ, ಇದೀಗ ರಸ್ತೆ ಬದಿಯಲ್ಲಿ ಮರಗಳನ್ನು ನೆಟ್ಟು ತೊಂದರೆ ನೀಡಲಾಗುತ್ತಿದೆ. ಅಧಿಕಾರಿಗಳು ಕಚೇರಿಯಲಿದ್ದರೆ ಪ್ರಯೋಜನವಿಲ್ಲ. ಸ್ಥಳಕ್ಕೆ ತೆರಳಿ ಪರಿಶೀಲನೆ ಕೈಗೊಂಡು ಕ್ರಮಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ರಸ್ತೆಬದಿಯಲ್ಲಿ ಸಾಮಾಜಿಕ ಅರಣ್ಯ ಮಾಡಬಾರದು. ಕಂದಕ, ರೈಲ್ವೆ ಬ್ಯಾರಿಕೇಡ್ ಯೋಜನೆ ವನ್ಯಜೀವಿ ಹಾವಳಿ ತಡೆಗೆ ಪೂರಕವಾಗಿದೆ ಎಂದು ಗಮನ ಸೆಳೆದರು.
ಹಾಡಿಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಅಡ್ಡಿ
ಹಾಡಿಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಬಗ್ಗೆ ಶಾಸಕದ್ವಯರು ಅಸಮಾಧಾನ ವ್ಯಕ್ತಪಡಿಸಿದರು.
ಪೊನ್ನಣ್ಣ ಮಾತನಾಡಿ, ೨೮ ಬುಡಕಟ್ಟು ಹಾಡಿಗಳಿಗೆ ವಿದ್ಯುತ್, ರಸ್ತೆ, ನೀರು ಪೂರೈಕೆಗೆ ಅರಣ್ಯ ಇಲಾಖೆ ಅಡ್ಡಿಪಡಿಸಿದೆ. ೬ ಹಾಡಿಗಳಿಗೆ ಸಾಮಗ್ರಿ ತಂದ ಸಂದರ್ಭ ತಡೆಯೊಡ್ಡಲಾಗಿದೆ. ಸರಕಾರದ ನಿಯಮ ಉಲ್ಲಂಘಿಸಿ ಈ ರೀತಿ ನಡೆದುಕೊಳ್ಳಲಾಗುತ್ತಿದೆ. ಅನುಮತಿ ಇದ್ದರೂ ಕಾಮಗಾರಿಗೆ ಅಡ್ಡಿ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
೧ ಹೆಕ್ಟೇರ್ ಪ್ರದೇಶದಲ್ಲಿ ವಾಸಿಸುವ ಗಿರಿಜನ ಹಾಡಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸಿಎಂ ಸೂಚಿಸಿ ಆದೇಶಿಸಿದ್ದಾರೆ. ಆದರೂ ಅಡ್ಡಿಪಡಿಸುತ್ತಿರುವ ಬಗ್ಗೆ ಭೋಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಅಗತ್ಯ ಭತ್ತದ ಬಿತ್ತನೆ ಬೀಜ, ರಸಗೊಬ್ಬರ, ಕಾಂಪ್ಲೆಕ್ಸ್, ಯೂರಿಯ ಲಭ್ಯತೆ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಾಹಿತಿ ನೀಡಿದರು. ಕ್ರಿಟಿಕಲ್ ಕೇರ್ ಸೆಂಟರ್ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಯಿಂದ ವಿಳಂಬವಾಗುತ್ತಿದೆ ಎಂದು ಜಿಲ್ಲಾಸ್ಪತ್ರೆ ಡೀನ್ ಡಾ. ಲೋಕೇಶ್ ತಿಳಿಸಿದರು.
ವಿದ್ಯುತ್ ಪರಿಕರಗಳನ್ನು ದಾಸ್ತಾನಿಟ್ಟಿರಬೇಕು. ಮಳೆಗಾಲದಲ್ಲಿ ಸಮಸ್ಯೆಗಳು ಎದುರಾದ್ದಲ್ಲಿ ಪರಿಹರಿಸಿ ತಕ್ಷಣ ವಿದ್ಯುತ್ ಒದಗಿಸಲು ಕ್ರಮವಹಿಸಬೇಕು ಎಂದು ಸಚಿವರು ಸೂಚಿಸಿದರು. ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ೮೪ನೇ ರ‍್ಯಾಂಕ್ ಪಡೆದ ನಿಧಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಡಿಂಪಲ್ ತಿಮ್ಮಯ್ಯ ಅವರುಗಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸಹಕಾರ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್ ನಿರ್ದೇಶಕ ಎ. ಮಂಜು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಸೇರಿದಂತೆ ಅಧಿಕಾರಿಗಳು, ಕೆಡಿಪಿ ಸದಸ್ಯರು ಹಾಜರಿದ್ದರು. ನಿವೇಶನ ರಹಿತರಿಗೆ ಜಾಗ ಗುರುತಿಸಿ
ಜಿಲ್ಲೆಯಲ್ಲಿ ೨೦ ಸಾವಿರಕ್ಕೂ ಹೆಚ್ಚು ಮಂದಿಗೆ ನಿವೇಶನದ ಅವಶ್ಯಕತೆಯಿದ್ದು, ಈ ಹಿನ್ನೆಲೆಯಲ್ಲಿ ಜಾಗಗಳನ್ನು ಗುರುತಿಸುವ ಕೆಲಸವಾಗಬೇಕೆಂದು ಮಂತರ್ ಗೌಡ ಸೂಚನೆ ನೀಡಿದರು. ಈ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಗ್ರಾಮ ಮಟ್ಟದಲ್ಲಿ ಜಾಗದ ಕೊರತೆ ಇರುವ ಕಾರಣ ಕಂದಾಯ ಇಲಾಖೆ ಜಾಗವನ್ನು ಗುರುತಿಸಿ ನಿವೇಶನ ರಹಿತರಿಗಾಗಿ ಮೀಸಲಿಡಬೇಕೆಂದು ನಿರ್ದೇಶನ ನೀಡಿದರು. ಅರಣ್ಯ ಸಚಿವರಿಗೆ ಕರೆ
ಅರಣ್ಯ ಇಲಾಖೆಯಿಂದಾಗುತ್ತಿರುವ ಸಮಸ್ಯೆಗಳ ಕುರಿತು ಸಭೆ ಮಧ್ಯದಲ್ಲಿಯೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಜಿಲ್ಲೆಯಲ್ಲಾಗುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಸಿಸಿಎಫ್ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ತಿಳಿಸಿದರು. ಸಭೆ ನಡೆಸುವುದಾಗಿ ಅರಣ್ಯ ಸಚಿವರು ತಿಳಿಸಿದ್ದು, ಸಭೆಗೆ ಜಿಲ್ಲೆಯ ಸಮಸ್ಯೆಯ ಬಗ್ಗೆ ಅಂಕಿಅAಶ ಸಹಿತ ವರದಿ ಮುಂದಿಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಾಡಗೀತೆಗೆ ಅವಮಾನ - ಅಮಾನತಿಗೆ ಪಟ್ಟು
ಕಾರ್ಯಕ್ರಮ ಆರಂಭಕ್ಕೂ ಮೊದಲು ‘ರೆಕಾರ್ಡ್’ ಮಾಡಿ ಹಾಕಿದ ನಾಡಗೀತೆಯಲ್ಲಿ ಪ್ರಮುಖ ಚರಣಗಳನ್ನು ತೆಗೆದು ಹಾಕಿದ ಬಗ್ಗೆ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಆಕ್ಷೇಪ ವ್ಯಕ್ತಪಡಿಸಿ, ಇದನ್ನು ಪರಿಶೀಲಿಸದೆ ಹಾಕಿದವರನ್ನು ಅಮಾನತ್ತಿಗೆ ಪಟ್ಟು ಹಿಡಿದರು.
ನಾಡಗೀತೆ ಸರಿಯಾಗಿ ಹಾಕಿಲ್ಲ. ನಿಯಮದಂತೆ ಗೀತೆಯನ್ನು ಹಾಕಬೇಕಾಗಿತ್ತು. ಶಾಲಾ ಮಕ್ಕಳು ನಾಡಗೀತೆ ಹಾಡುತ್ತಿದ್ದರು. ಪರಿಶೀಲನೆ ಮಾಡದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕೆಡಿಪಿ ಸಭೆಯಲ್ಲಿ ಶಿಷ್ಟಾಚಾರ ಪಾಲನೆಯಾಗಬೇಕು. ಆಪ್ತ ಸಹಾಯಕರನ್ನು ಸ್ವಾಗತಿಸುವ ಪರಿಪಾಠ ಸರಿಯಲ್ಲ. ಹೀಗಿದ್ದರೆ ಎಲ್ಲಾ ಅಧಿಕಾರಿಗಳ ಹೆಸರು ಹೇಳಿ ಸ್ವಾಗತಿಸಿ ಎಂದು ಲೇವಡಿ ಮಾಡಿದರು. ‘ಶಕ್ತಿ’ ವರದಿ ಪ್ರಸ್ತಾಪ
ಅಪ್ರಾಪ್ತೆಯರು ಗರ್ಭಿಣಿಯರಾಗುತ್ತಿರುವ ಬಗ್ಗೆ ಶಕ್ತಿ ಪತ್ರಿಕೆಯಲ್ಲಿ ಬಂದ ವರದಿ ಆಧಾರದಲ್ಲಿ ಕೆಡಿಪಿ ಸದಸ್ಯೆ ಕಾವೇರಿ ಸಭೆಯ ಗಮನ ಸೆಳೆದು ಕ್ರಮಕ್ಕೆ ಒತ್ತಾಯಿಸಿದರು.
ಮಂತರ್ ಮಾತನಾಡಿ, ಹಾಡಿಗಳು ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಐಟಿಡಿಪಿಯೊಂದಿಗೆ ಜಾಗೃತಿ ಮೂಡಿಸಿ ಪ್ರಕರಣಗಳು ನಡೆಯದಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
೪೫ ಲೈನ್‌ಮನೆಗಳಲ್ಲಿ ಈ ರೀತಿ ಪ್ರಕರಣಗಳು ಕಂಡುಬAದಿವೆ. ಸಹಾಯವಾಣಿ ಕುರಿತು ಮಾಹಿತಿ ನೀಡಲಾಗುತ್ತಿದೆ. ಅಭಿಯಾನ ಕೈಗೊಂಡು ಬಾಲ್ಯವಿವಾಹ ತಡೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.