ಹೆಚ್.ಜೆ. ರಾಕೇಶ್

ಮಡಿಕೇರಿ, ಜೂ. ೨೮ : ಕೊಡಗಿನಲ್ಲಿ ಜನ್ಮತಳೆದು ದಕ್ಷಿಣ ಭಾರತಕ್ಕೆ ನೀರುಣಿಸುವ ರೈತರ ಜೀವನಾಡಿ, ಜನರ ಜೀವನದಿ ಎಂದೇ ಕರೆಸಿಕೊಳ್ಳುವ ಕಾವೇರಿ ನದಿ ಇತ್ತೀಚಿನ ವರ್ಷಗಳಲ್ಲಿ ಮೂಲದಲ್ಲಿಯೇ ಕಲುಷಿತಗೊಂಡು ಕುಡಿಯಲೂ ಯೋಗ್ಯವಿಲ್ಲದ ಹಂತಕ್ಕೆ ತಲುಪಿರುವುದು ಕಳವಳಕಾರಿ ಸಂಗತಿಯಾಗಿದೆ.

ಆಧುನಿಕತೆಯ ಪ್ರಭಾವ, ಜನಸಂಖ್ಯೆ ಹೆಚ್ಚಳ, ಪ್ರವಾಸಿಗರು ಹಾಗೂ ಸ್ಥಳೀಯರ ಬೇಜವಾಬ್ದಾರಿ. ಹೀಗೆ ಹತ್ತು ಹಲವು ಕಾರಣಗಳಿಂದ ಕಾವೇರಿಯ ಒಡಲಿಗೆ ತ್ಯಾಜ್ಯ ಸೇರಿ ಮಲಿನಗೊಂಡು ಕಲುಷಿತಗೊಳ್ಳುತ್ತಿದೆ. ತಲಕಾವೇರಿಯಲ್ಲಿ ಹುಟ್ಟಿ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲದ ತ್ರಿವೇಣಿ ಸಂಗಮ ಸೇರಿ ಜಿಲ್ಲೆ ಸೇರಿದಂತೆ ದಕ್ಷಿಣ ಭಾರತದ ಹಲವೆಡೆಗೆ ನೀರುಣಿಸುವ ಕಾವೇರಿ ನದಿಗೆ ಸೇರುತ್ತಿರುವ ಕಲುಷಿತ ತ್ಯಾಜ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರೂ. ೪೯.೫೬ ಕೋಟಿ ವೆಚ್ಚದಲ್ಲಿ ಕೈಗೊಂಡ ಯೋಜನೆಗೆ ೧೩ ವರ್ಷಗಳ ವನವಾಸದ ಬಳಿಕ ಮರುಜೀವ ದೊರೆತಂತೆ ಕಾಣುತ್ತಿದೆ.

ಏನಿದು ಯೋಜನೆ?

ಮಡಿಕೇರಿ ನಗರದಲ್ಲಿರುವ ಮನೆಗಳಿಂದ ಹಾಗೂ ವಾಣಿಜ್ಯ ಸಂಕೀರ್ಣಗಳಿAದ ಉತ್ಪತ್ತಿಯಾಗುವ ಮಲಿನನೀರು ನಗರದ ಮುಖ್ಯ ನಾಲೆಯಲ್ಲಿ ಹರಿದು ಕೂಟುಹೊಳೆ ಕೆಳಭಾಗಕ್ಕೆ ಸೇರಿ ಅಬ್ಬಿ ಜಲಪಾತ ಮೂಲಕ ಹರಿದು ಹಾರಂಗಿ ಜಲಾಶಯದಿಂದ ಕಾವೇರಿ ನದಿ ಸೇರುತ್ತದೆ ಎಂದು ಯೋಜನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆ ಕಾವೇರಿ ಮಲಿನವಾಗುವುದನ್ನು ತಡೆಗಟ್ಟಲು ಹಾಗೂ ನಗರದ ನೈರ್ಮಲ್ಯ ಕಾಪಾಡಲು ನಗರದಲ್ಲಿ ಉತ್ಪತ್ತಿಯಾಗುವ ಮಲಿನ ನೀರನ್ನು ಶುದ್ಧೀಕರಿಸಲು ರೂ. ೪೯.೫೬ ಕೋಟಿಗಳ ಒಳಚರಂಡಿ ಯೋಜನೆಯ ಅಂದಾಜು ಪಟ್ಟಿಗೆ ಕರ್ನಾಟಕ ಸರ್ಕಾರ ತಾ. ೨೫.೦೮.೨೦೧೨ರಲ್ಲಿ ಅನುಮೋದನೆ ನೀಡಿತ್ತು.

ನಗರದಲ್ಲಿ ಉತ್ಪತ್ತಿಯಾಗುವ ಮಲಿನ ನೀರನ್ನು ಒಳಚರಂಡಿ ಕೊಳವೆ ಮಾರ್ಗದ ಮುಖಾಂತರ ಹರಿಸಿ ಮಲಿನನೀರು ಶುದ್ದೀಕರಣ ಘಟಕದಲ್ಲಿ ಶುದ್ದೀಕರಿಸಲು ಯೋಜನೆಯಲ್ಲಿ ವಿನ್ಯಾಸಿಸಲಾಗಿದೆ. ರಸ್ತೆ ಮಟ್ಟದಿಂದ ಕೆಳಭಾಗದಲ್ಲಿರುವ ಮನೆಗಳಲ್ಲಿ ಉತ್ಪತ್ತಿಯಾಗುವ ಮಲಿನ ನೀರನ್ನು ಎಫ್.ಎಫ್.ಎಸ್.ಎಸ್.ಎಂ ಮಾದರಿಯ ಶುದ್ದೀಕರಣ ಘಟಕದಲ್ಲಿ ಹಾಗೂ ಮಲಿನ ನೀರು ಶುದ್ದೀಕರಣ ಘಟಕದ ವಲಯಕ್ಕೆ ಬಾರದ ಪ್ರದೇಶದಲ್ಲಿ ಉತ್ಪತ್ತಿಯಾಗುವ ಮಲಿನ ನೀರನ್ನು ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿ ಸದರಿ ಘಟಕದಲ್ಲಿ ಶುದ್ಧೀಕರಿಸಲು ನೀರು ಸರಬರಾಜು

(ಮೊದಲ ಪುಟದಿಂದ) ಮತ್ತು ಒಳಚರಂಡಿ ಮಂಡಳಿ ಮೂಲಕ ಉದ್ದೇಶಿಸಲಾಗಿದೆ.

ಪ್ರಾರಂಭದಿAದಲೂ ವಿಘ್ನ

ಈ ಮಹತ್ವಾಕಾಂಕ್ಷಿ ಯೋಜನೆಗೆ ಪ್ರಾರಂಭದಿAದಲೂ ವಿಘ್ನಗಳ ಸರಣಿ ಆರಂಭವಾದವು. ಜಾಗ, ರಸ್ತೆ ಸಂಬAಧ ತಕರಾರು, ಸಾರ್ವಜನಿಕರಿಂದ ವಿರೋಧ ಹೀಗೆ ಹಲವು ಅಡೆತಡೆಗಳ ನಡುವೆ ಇದೀಗ ಒಂದು ಹಂತಕ್ಕೆ ಯೋಜನೆ ಕಾರ್ಯರೂಪುಗೊಳ್ಳಲು ಸಿದ್ಧಗೊಂಡAತೆ ಕಾಣುತ್ತಿದೆ.

ಸರ್ಕಾರದ ಆದೇಶದನ್ವಯ ಯೋಜನೆಗೆ ಅವಶ್ಯಕವಿರುವ ಜಾಗಗಳನ್ನು ಸ್ಥಳೀಯ ಸಂಸ್ಥೆಯು ಹಸ್ತಾಂತರಿಸಲು ಆದೇಶವಾಗಿತ್ತು. ಯೋಜನೆಗೆ ಅವಶ್ಯವಿರುವ ಜಮೀನುಗಳನ್ನು ಹಸ್ತಾಂತರಿಸಲು ನಗರಸಭೆ, ಮಾರ್ಚ್ ೨೦೧೨ರಲ್ಲಿ ಜಿಲ್ಲಾಧಿಕಾರಿಗಳನ್ನು ಕೋರಿತ್ತು. ಆದರೆ ಕೋರಲಾಗಿರುವ ಜಾಗಗಳನ್ನು ಹಸ್ತಾಂತರಿಸಲು ವಿಳಂಬವಾದ ಕಾರಣದಿಂದಾಗಿ ಯೋಜನೆಯ ಅನುಷ್ಠಾನಕ್ಕೆ ಮತ್ತಷ್ಟು ಕಾಲ ಬೇಕಾಗಿ ಯೋಜನೆ ಹಳ್ಳಹಿಡಿದಿತ್ತು.

೨೦೧೫ರಲ್ಲಿ ಕಾಮಗಾರಿ ಆರಂಭ

ನಗರದಲ್ಲಿ ಸೀವರ್ ಪೈಪ್ ಲೈನ್ ಅಳವಡಿಸಿ, ತೇವಬಾವಿ, ಏರು ಕೊಳವೆ ಮಾರ್ಗ ಹಾಗೂ ಸೆಪ್ಟಿಕ್ ಟ್ಯಾಂಕ್‌ಗಳ ನಿರ್ಮಾಣ ಮಾಡುವ ಕಾಮಗಾರಿಯ ಪ್ಯಾಕೇಜ್-೧ರ ರೂ. ೪೦.೯೯ ಕೋಟಿಗಳ ಗುತ್ತಿಗೆಯನ್ನು ಅಹ್ಮದಾಬಾದ್ ಮೂಲದ ಸಂಸ್ಥೆಗೆ ನವೆಂಬರ್-೨೦೧೫ರಲ್ಲಿ ವಹಿಸಲಾಯಿತು. ಕಾಮಗಾರಿಯನ್ನು ಪೂರ್ಣಗೊಳಿಸಲು ೩೬ ತಿಂಗಳ ಅವಧಿಯನ್ನು ನೀಡಲಾಗಿತ್ತು. ಗುತ್ತಿಗೆಯಡಿ ನಗರದಲ್ಲಿ ಒಟ್ಟು ೧೦೯ ಕಿ.ಮೀ ಸೀವರ್ ಕೊಳವೆ ಮಾರ್ಗವನ್ನು ಅಳವಡಿಸಲು, ವೆಟ್‌ವೆಲ್, ಸೆಪ್ಟಿಕ್ ಟ್ಯಾಂಕ್‌ಗಳನ್ನು ನಿರ್ಮಿಸಲು ಹಾಗೂ ೭೩೭೩ ಗೃಹ ಸಂಪರ್ಕವನ್ನು ಒದಗಿಸಲು ಅನುವು ಮಾಡಲಾಗಿದ್ದು, ಡಿಸೆಂಬರ್-೨೦೧೮ರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿತ್ತು.

ಕಾಮಗಾರಿಗಳನ್ನು ಕೈಗೊಳ್ಳಲು ನಗರದ ಭೌಗೋಳಿಕ ಸ್ಥಿತಿಗನುಸಾರವಾಗಿ ಒಳಚರಂಡಿ ವ್ಯವಸ್ಥೆಯನ್ನು ವಿನ್ಯಾಸಿಸಿ ಮುಖ್ಯ ಅಭಿಯಂತರರರಿAದ ಅನುಮೋದನೆ ಪಡೆಯಲಾಗಿತ್ತು. ಅದರಂತೆ ನಗರದ ಶೇ.೭೭ ರಷ್ಟು ಪ್ರದೇಶಗಳು ಎಸ್.ಟಿ.ಪಿ ವಲಯಗಳಿಗೆ ಸೇರಿದ್ದು ಉಳಿದ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಮಲಿನ ನೀರನ್ನು ಶುದ್ಧೀಕರಿಸಲು ೯ ಸೆಪ್ಟಿಕ್ ಟ್ಯಾಂಕ್ ವಲಯಗಳನ್ನಾಗಿ ವಿಂಗಡಿಸಲಾಗಿರುತ್ತದೆ. ಆದರೆ ೯ ಸೆಪ್ಟಿಕ್ ಟ್ಯಾಂಕ್‌ಗಳನ್ನು ನಿರ್ಮಿಸಲು ಅವಶ್ಯವಿರುವ ಜಾಗಗಳನ್ನು ಹಸ್ತಾಂತರಿಸದ ಕಾರಣದಿಂದಾಗಿ ಹಾಗೂ ಕಾಮಗಾರಿಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ರಸ್ತೆಗಳನ್ನು ಕತ್ತರಿಸಲು ಸಾರ್ವಜನಿಕರು ತಕರಾರು ಮಾಡಿದ್ದರಿಂದ ಗುತ್ತಿಗೆಯಡಿ ಅನುವು ಮಾಡಲಾಗಿದ್ದ ಎಲ್ಲಾ ಕಾಮಗಾರಿಗಳನ್ನು ನಿಗದಿಪಡಿಸಲಾದ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಸ್ಥಗಿತಗೊಂಡಿದ್ದ ಕಾಮಗಾರಿ

೨೦೧೮ರಲ್ಲಿ ನಗರದಲ್ಲಿ ಅತಿವೃಷ್ಠಿಯಾಗಿ ಹಲವೆಡೆ ಭೂಕುಸಿತ ಉಂಟಾಗಿ ಪ್ರಕೃತಿ ವಿಕೋಪದ ಕಾರಣದಿಂದಾಗಿ ದುರಸ್ತಿಪಡಿಸಲಾದ ರಸ್ತೆಗಳು ಕೆಲವೆಡೆ ಹಾನಿಗೊಳಗಾಗಿರುವುದರಿಂದ ಉಳಿದ ಒಳಚರಂಡಿ ಕೊಳವೆ ಸಾಲುಗಳನ್ನು ಅಳವಡಿಸಲು ಕಾಂಕ್ರೀಟ್, ಡಾಂಬರು ರಸ್ತೆಗಳನ್ನು ಕತ್ತರಿಸಲು ಸಾರ್ವಜನಿಕರು ಅಡಚಣೆ ಮಾಡಿರುವುದರಿಂದ ಕಾಮಗಾರಿಯನ್ನು ೨೦೧೮ರಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಅನಂತರ ಯೋಜನೆಗೆ ಮರುಜೀವ ದೊರೆತು ಈವರೆಗೆ ಒಟ್ಟು ೬೯.೧ಕಿ.ಮೀ ಉದ್ದದ ಸೀವರ್ ಕೊಳವೆ ಸಾಲು, ೨೪೬೦ ಸಂಖ್ಯೆ ಮೆಷಿನ್ ಹೋಲ್ ಮತ್ತು ೩೪೦೦ ಸಂಖ್ಯೆ ಗೃಹ ಸಂಪರ್ಕ ಒದಗಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿರುತ್ತದೆ. ಮಲಿನ ನೀರು ಶುದ್ದೀಕರಣ ಘಟಕದ ವಲಯಗಳಲ್ಲಿ ಬರುವ ಬಾಕಿ ಇರುವ ಸುಮಾರು ೧೬ ಕಿ.ಮೀ ಉದ್ದದ ಒಳಚರಂಡಿ ಕೊಳವೆಸಾಲುಗಳ ಪೈಕಿ ೧೦ಕಿ.ಮೀ ಉದ್ದದಷ್ಟು ಡಾಂಬರು ರಸ್ತೆ ಹಾಗೂ ೫ ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆಗಳನ್ನು ಕತ್ತರಿಸಿ ನಿರ್ಮಿಸಬೇಕಾಗಿದೆ. ಪ್ರದೇಶಗಳು ಎಸ್.ಟಿ.ಪಿ ವಲಯಗಳಿಗೆ ಸೇರಿದ್ದು ಉಳಿದ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಮಲಿನ ನೀರನ್ನು ಶುದ್ಧೀಕರಿಸಲು ೯ ಸೆಪ್ಟಿಕ್ ಟ್ಯಾಂಕ್ ವಲಯಗಳನ್ನಾಗಿ ವಿಂಗಡಿಸಲಾಗಿರುತ್ತದೆ. ಆದರೆ ೯ ಸೆಪ್ಟಿಕ್ ಟ್ಯಾಂಕ್‌ಗಳನ್ನು ನಿರ್ಮಿಸಲು ಅವಶ್ಯವಿರುವ ಜಾಗಗಳನ್ನು ಹಸ್ತಾಂತರಿಸದ ಕಾರಣದಿಂದಾಗಿ ಹಾಗೂ ಕಾಮಗಾರಿಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ರಸ್ತೆಗಳನ್ನು ಕತ್ತರಿಸಲು ಸಾರ್ವಜನಿಕರು ತಕರಾರು ಮಾಡಿದ್ದರಿಂದ ಗುತ್ತಿಗೆಯಡಿ ಅನುವು ಮಾಡಲಾಗಿದ್ದ ಎಲ್ಲಾ ಕಾಮಗಾರಿಗಳನ್ನು ನಿಗದಿಪಡಿಸಲಾದ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಅನಂತರ ಯೋಜನೆಗೆ ಮರುಜೀವ ದೊರೆತು ಈವರೆಗೆ ಒಟ್ಟು ೬೯.೧ಕಿ.ಮೀ ಉದ್ದದ ಸೀವರ್ ಕೊಳವೆ ಸಾಲು, ೨೪೬೦ ಸಂಖ್ಯೆ ಮೆಷಿನ್ ಹೋಲ್ ಮತ್ತು ೩೪೦೦ ಸಂಖ್ಯೆ ಗೃಹ ಸಂಪರ್ಕ ಒದಗಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿರುತ್ತದೆ. ಮಲಿನ ನೀರು ಶುದ್ದೀಕರಣ ಘಟಕದ ವಲಯಗಳಲ್ಲಿ ಬರುವ ಬಾಕಿ ಇರುವ ಸುಮಾರು ೧೬ ಕಿ.ಮೀ ಉದ್ದದ ಒಳಚರಂಡಿ ಕೊಳವೆಸಾಲುಗಳ ಪೈಕಿ ೧೦ಕಿ.ಮೀ ಉದ್ದದಷ್ಟು ಡಾಂಬರು ರಸ್ತೆ ಹಾಗೂ ೫ ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆಗಳನ್ನು ಕತ್ತರಿಸಿ ನಿರ್ಮಿಸಬೇಕಾಗಿದೆ. ೭೦ ಕಿ.ಮೀ. ಪೂರ್ಣ - ಘಟಕ ನಿರ್ಮಾಣ ಬಳಿಕ ಗೃಹ ಸಂಪರ್ಕ

ಎಲ್ಲಾ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಿದ ನಂತರ ಗೃಹ ಸಂಪರ್ಕಗಳಿಗೆ ಚಾಲನೆ ನೀಡಲಾಗುವುದು. ಇದರಿಂದ ನಗರದಲ್ಲಿ ಉತ್ಪತ್ತಿಯಾಗುವ ಮಲಿನ ನೀರು ಕಾವೇರಿ ನದಿಗೆ ಸೇರಿ ಕಾವೇರಿ ನದಿ ಕಲುಷಿತವಾಗುವುದನ್ನು ತಡೆಗಟ್ಟಬಹುದಾಗಿದೆ ಎಂದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜಿಲ್ಲಾ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ತಿಳಿಸಿದ್ದಾರೆ. ಕಾಮಗಾರಿಗೆ ಒಟ್ಟು ೮೫ ಕಿ.ಮೀ. ಒಳಚರಂಡಿ ಪೈಕಿ ೭೦ ಕಿ.ಮೀ.ನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಕೆಲವು ರಸ್ತೆಯನ್ನು ಅಗೆಯಲು ವಿರೋಧ ವ್ಯಕ್ತವಾದ ಹಿನ್ನೆಲೆ ಪೂರ್ಣ ಪ್ರಮಾಣದಲ್ಲಿ ಮುಕ್ತಾಯವಾಗಿಲ್ಲ.

ಘಟಕ ನಿರ್ಮಾಣಕ್ಕೆ ಅಡಿಪಾಯ

ಮಲಿನ ನೀರು ಶುದ್ದೀಕರಣ ಘಟಕವನ್ನು ನಿರ್ಮಿಸಲು ಹೊರವಲಯದ ಕೆ.ಬಾಡಗ ಗ್ರಾಮದ ಸ.ನಂ.೮೩/೧ ಹಾಗೂ ೮೦/೬ರಲ್ಲಿ ಒಟ್ಟು ೧.೭೦ ಎಕರೆ ವಿಸ್ತೀರ್ಣದ ಜಾಗವನ್ನು ಮೀಸಲಿಟ್ಟು ಘಟಕ ನಿರ್ಮಾಣವೂ ಹಲವು ವರ್ಷಗಳ ಬಳಿಕ ಪ್ರಾರಂಭಗೊAಡಿದ್ದು, ಜನವರಿಯಿಂದÀ ಅಡಿಪಾಯ ಹಾಕುವ ಕಾಮಗಾರಿ ಪ್ರಾರಂಭವಾಗಿದೆ.

ತಾ. ೧.೩.೨೦೧೭ರಲ್ಲಿ ಮಡಿಕೇರಿ ನಗರಸಭೆ ಜಾಗ ಖರೀದಿಸಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಸ್ತಾಂತರಿಸಿದೆ. ೩.೦/೪.೫೦ ಎಂ.ಎಲ್.ಡಿ ಸಾಮರ್ಥ್ಯದ ಮಲಿನ ನೀರು ಶುದ್ದೀಕರಣ ಘಟಕ, ಡಿ.ಜಿ. ರೂಮ್, ಅಡ್ಮಿನ್ ರೂಮ್ ನಿರ್ಮಾಣ ಹಾಗೂ ೫ ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ರೂ.೭.೧೭ ಕೋಟಿಗಳ ಪ್ಯಾಕೇಜ್-೨ರ ಗುತ್ತಿಗೆಯನ್ನು ತಾ. ೨.೬.೨೦೧೯ರಂದು ಬೆಂಗಳೂರು ಮೂಲದ ಸಂಸ್ಥೆಗೆ ವಹಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ೧೨ ತಿಂಗಳ ಅವಧಿ ನಿಗದಿಪಡಿಸಲಾಗಿತ್ತು.

ಜಾಗದ ತೊಡಕು : ಮಲಿನ ನೀರು ಶುದ್ದೀಕರಣ ಘಟಕವನ್ನು ನಿರ್ಮಿಸಲು ಹಸ್ತಾಂತರಿಸಿರುವ ಜಾಗಕ್ಕೆ ತೆರಳಲು ಗ್ರಾಮ ನಕ್ಷೆಯಲ್ಲಿ ಗುರುತಿಸಲಾಗಿರುವ ಕೂಡು ರಸ್ತೆಯು ಅತಿಕ್ರಮಣಗೊಂಡಿರುವುದರಿAದ ಮಲಿನ ನೀರು ಶುದ್ದೀಕರಣ ಘಟಕದ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಭಿಸಲು ತಡೆ ಉಂಟಾಗಿತ್ತು.

೨೦೨೧ರಲ್ಲಿ ಜಮೀನಿಗೆ ತೆರಳಲು ಪರ್ಯಾಯ ರಸ್ತೆಯನ್ನು ನಿರ್ಮಿಸಲು ಸರ್ವೆ ಕೈಗೊಂಡು ಮರ ಗಿಡಗಳನ್ನು ತೆರವು ಮಾಡಿ ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಲಾಯಿತು. ಆದರೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಪರ್ಯಾಯ ರಸ್ತೆಗೆ ಸಂಬAಧಿಸಿದAತೆ ಜಮೀನುಗಳ ಮಾಲೀಕರ ತಕರಾರು ಉಂಟಾಗಿ ಕಾಮಗಾರಿಯನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ.

ಅತಿಕ್ರಮಣಗೊಂಡಿರುವ ರಸ್ತೆಯ ಬದಲಾಗಿ ಪರ್ಯಾಯ ಸಂಪರ್ಕ ರಸ್ತೆಯನ್ನು ನಿರ್ಮಿಸಲು ಅವಶ್ಯವಿರುವ ಜಮೀನನ್ನು ನೀಡಲು ಜಮೀನಿನ ಮಾಲೀಕರು ಒಪ್ಪಿದ ಬಳಿಕ ಯೋಜನೆಗೆ ಮರುಜೀವ ಬಂದAತಾಗಿದೆ.

ಶುದ್ಧೀಕರಣ ಹೇಗೆ?

ಸಂಪರ್ಕ ಇರುವ ಕಡೆಗಳಲ್ಲಿ ಶುದ್ಧೀಕರಣಕ್ಕಾಗಿ ‘ಬಾಕ್ಸ್’ವೊಂದನ್ನು ಸ್ಥಾಪಿಸಲಾಗುವುದು. ಇದರಿಂದ ಸೆಪ್ಟಿಕ್ ಟ್ಯಾಂಕ್ ಸಂಪರ್ಕಿಸಲಾಗುವುದು. ಕಟ್ಟಡಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ಹರಿಯುವ ಸಂದರ್ಭ ಬಾಕ್ಸ್ನಲ್ಲಿ ಒಂದು ಹಂತದ ಶುದ್ಧೀಕರಣವಾಗಿ ನೇರ ಸೆಪ್ಟಿಕ್ ಟ್ಯಾಂಕ್‌ಗೆ ಹರಿದು ಘಟಕ ಸೇರಿ ಅಲ್ಲಿ ಮತ್ತೊಂದು ಸುತ್ತಿಗೆ ಶುದ್ಧೀಕರಣ ನಡೆದು ನೀರು ನದಿ ಸೇರುತ್ತದೆ ಎಂದು ಪ್ರಸನ್ನ ಕುಮಾರ್ ಮಾಹಿತಿ ನೀಡಿದ್ದಾರೆ. ಇದರಿಂದ ಕಾವೇರಿ ಕಲುಷಿತ ತಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ದೂರು

ಯುಜಿಡಿ ಕಾಮಗಾರಿ ವೇಳೆ ರಸ್ತೆಯನ್ನು ಹಾಳುಗೆಡವಿ ನಂತರ ಸರಿಪಡಿಸುವುದಿಲ್ಲ ಎಂಬ ವ್ಯಾಪಕ ದೂರು ಸಾರ್ವಜನಿಕ ವಲಯದಲ್ಲಿದೆ. ಈ ಬಗ್ಗೆ ಅಧಿಕಾರಿ ಪ್ರಸನ್ನ ಅವರನ್ನು ಪ್ರಶ್ನಿಸಿದ ಸಂದರ್ಭ, ಯಾವುದೇ ತೊಂದರೆಯಾಗದAತೆ ಕೆಲಸ ಮಾಡಲಾಗುತ್ತದೆ. ಈಗಾಗಲೇ ೭೦ ಕಿ.ಮೀ.ನಲ್ಲಿ ಕಾಮಗಾರಿ ನಡೆದಿದ್ದು, ಕೆಲವೆಡೆ ಮಾತ್ರ ಸಮಸ್ಯೆ ಬಂದಿದ್ದು, ಅದನ್ನು ಸರಿಪಡಿಸಲಾಗುತ್ತಿದೆ ಎಂದರು. ನಗರಸಭೆಯಿಂದ ಜಾಗ ಹಸ್ತಾಂತರ

ಘಟಕದ ಸುತ್ತ ‘ಗ್ರೀನ್ ಬೆಲ್ಟ್’ ನಿರ್ಮಾಣಕ್ಕಾಗಿ ೩ ಎಕರೆ ಜಾಗವನ್ನು ಖರೀದಿಸಿ ನಗರಸಭೆ ಮಂಡಳಿಗೆ ಹಸ್ತಾಂತರಿಸಿದೆ.

ಮಲಿನ ನೀರು ಶುದ್ದೀಕರಣ ಘಟಕದ ಸುತ್ತ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದಿಷ್ಟ ಷರತ್ತಿನಂತೆ ಸ.ನಂ. ೮೩/೧ ರ ೪.೩೨ ಎಕರೆ ಜಮೀನಿನಲ್ಲಿ ಹಸ್ತಾಂತರಿಸಲು ಬಾಕಿ ಉಳಿದ ೩ ಎಕರೆ ಜಮೀನನ್ನು ಹಾಗೂ ೮೦/೭ರಲ್ಲಿ ೦.೯೪ ಎಕರೆ ಜಮೀನನ್ನು ತಾ. ೦೯.೦೮.೨೦೨೪ರಂದು ಹಸ್ತಾಂತರಿಸಿದೆ.

ಅದರಂತೆ ಮಲಿನ ನೀರು ಶುದ್ದೀಕರಣ ಘಟಕದ ಅಡಿಪಾಯದ ಕಾಮಗಾರಿಯನ್ನು ಜನವರಿಯಿಂದ ಪ್ರಾರಂಭಿಸಿದ್ದು, ಟೆಂಡರ್ ಅವಧಿಯಾದ ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳ್ಳುವ ವಿಶ್ವಾಸ ಅಧಿಕಾರಿಗಳಿಂದ ವ್ಯಕ್ತವಾಗಿದೆ.