ಮಡಿಕೇರಿ, ಜೂ. ೨೭: ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ೨೧ನೇ ವರ್ಷದ ಹತ್ತನೇ ತರಗತಿ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಕೊಡವ ಸಮಾಜ ಮತ್ತು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಂಡುವAಡ ಪಿ. ಮುತ್ತಪ್ಪ ವಹಿಸಿದ್ದರು. ಪ್ರಾಂಶುಪಾಲರಾದ ಸವಿತ ಎಂ.ಜಿ. ಶಾಲಾ ನಾಯಕರ ಕರ್ತವ್ಯವನ್ನು ನೆನಪಿಸಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಶಾಲಾ ನಾಯಕನಾಗಿ ಬಿ.ಸಿ ತರುಣ್, ಶಾಲಾ ನಾಯಕಿಯಾಗಿ ಧ್ರುತಿ ಎಸ್. ಆಯ್ಕೆಗೊಂಡರು.
ಶಾಲೆಗೆ ವಿವಿಧ ರೀತಿಯಲ್ಲಿ ತಾಂತ್ರಿಕ ವಿಭಾಗಕ್ಕೆ ನೀಡಿದ ಸಹಕಾರಕ್ಕಾಗಿ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ರಿಷಬ್ ಪಿ.ವೈ. ಅವರನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಸಂಘಗಳನ್ನು ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಎ.ಪಿ. ಶಾಲಿಪ್ ಆಗಮಿಸಿದ್ದರು. ಆಯ್ಕೆಯಾದ ಶಾಲಾ ನಾಯಕರಿಗೆ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ, ನಾಯಕತ್ವದ ಗುಣವನ್ನು ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹಿತವಚನವಿತ್ತರು.
ಮಂಡುವAಡ ಪಿ. ಮುತ್ತಪ್ಪ ಅವರು ಮಾತನಾಡಿ, ಮಕ್ಕಳು ಯಾವ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂಬುದನ್ನು ಹೇಳುತ್ತಾ ನಾಯ ಕತ್ವವನ್ನು ಬೆಳೆಸಿ ಉಳಿಸಿ ಕೊಳ್ಳುವುದು ನಾಯಕರ ಕರ್ತವ್ಯ ವೆಂದು ನೆನಪಿಸಿದರು. ಕಾರ್ಯ ಕ್ರಮದಲ್ಲಿ ಕೊಡವ ಸಮಾಜದ ಉಪಾಧ್ಯಕ್ಷರು ಹಾಗೂ ಶಾಲಾ ಆಡಳಿತ ಮಂಡಳಿಯ ಕಾರ್ಯಾ ಧ್ಯಕ್ಷರಾದ ಕೇಕಡ ದೇವಯ್ಯ, ಶಾಲಾ ಆಡಳಿತಾಧಿಕಾರಿ ಎನ್.ಎ. ಪೊನ್ನಮ್ಮ, ಶಾಲಾ ಆಡಳಿತ ಮಂಡಳಿಯ ಇತರ ಸದಸ್ಯರು, ಶಾಲಾ ಪ್ರಾಂಶುಪಾಲೆ ಸವಿತ ಎಂ.ಜಿ. ಮತ್ತು ಬೋಧಕ ಬೋಧ ಕೇತರ ವರ್ಗ, ವಿದ್ಯಾರ್ಥಿ ಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಧ್ರುತಿ ಎಸ್. ಸ್ವಾಗತಿಸಿ, ಚಿಂತನ ಸಿ.ಎಸ್. ಮತ್ತು ಕೃತಿಕ ಬಿ.ಹೆಚ್. ಕಾರ್ಯಕ್ರಮವನ್ನು ನಿರೂಪಿಸಿ, ನೀಕ್ಷಾ ಪಿ.ಜಿ. ವಂದಿಸಿದರು.