ಕೊಡ್ಲಿಪೇಟೆ, ಜೂ. ೨೮: ಸಮಾಜಸೇವೆ, ಶಿಸ್ತು ಹಾಗೂ ಸ್ವ ಶಕ್ತಿ ಕಾರ್ಯಕ್ರಮಗಳಲ್ಲಿ ಗುರಿ ಸಾಧನೆ ಮಾಡಿದ ವಿಭಾಗದಲ್ಲಿ ಇಲ್ಲಿನ ಕೊಡ್ಲಿಪೇಟೆ ಹೇಮಾವತಿ ರೋಟರಿ ಸಂಸ್ಥೆಗೆ ಗೋಲ್ಡನ್ ಅವಾರ್ಡ್ ಲಭಿಸಿದೆ.
ಮಂಗಳೂರಿನ ಸ್ಕೌಟ್ ಅಂಡ್ ಗೈಡ್ಸ್ ಸಭಾಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಮಾವತಿ ರೋಟರಿ ಸಂಸ್ಥೆಯ ಅಧ್ಯಕ್ಷ ಮಾದವ್ ಲಾಲ್, ಕಾರ್ಯದರ್ಶಿ ಕೆ.ಕೆ. ಸಾಗರ್ ಅವರುಗಳು ರೋಟರಿ ಪ್ರಮುಖರಿಂದ ಚಿನ್ನದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ, ಪೂರ್ವ ನಿಯೋಜಿತ ಗವರ್ನರ್ ಕೇಶವ, ಜಿಲ್ಲಾ ಉಪ ರಾಜ್ಯಪಾಲ ಡಾ. ಹರಿ ಎ. ಶೆಟ್ಟಿ, ಕಾರ್ಯದರ್ಶಿ ರಿತೇಶ್ ಬಾಳಿಗ, ಪ್ರಮುಖರಾದ ಡಾ. ಅರವಿಂದ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭ ಕೊಡ್ಲಿಪೇಟೆ ಹೇಮಾವತಿ ರೋಟರಿ ಮಾಜೀ ಅಧ್ಯಕ್ಷ ಹೆಚ್.ಎಂ. ದಿವಾಕರ್, ನಿರ್ದೇಶಕರುಗಳಾದ ದುಷ್ಯಂತ್ ಊರುಗುತ್ತಿ, ಕಾರ್ತಿಕ್ ಬೆಲ್ಲದ್ ಇದ್ದರು.