ಸೋಮವಾರಪೇಟೆ, ಜೂ. ೨೮ : ವಾರ್ಷಿಕ ವಾಗಿ ಅತಿ ಹೆಚ್ಚು ಮಳೆಬೀಳುವ ತಾಲೂಕಿನ ಪುಷ್ಪಗಿರಿ ಬೆಟ್ಟತಪ್ಪಲಿನ ಶಾಂತಳ್ಳಿ ಹೋಬಳಿ ಯಾದ್ಯಂತ ಸುರಿಯು ತ್ತಿರುವ ಮಳೆಯಿಂದಾಗಿ ಕಾಫಿಗೆ ಕೊಳೆರೋಗ ಕಾಣಿಸಿ ಕೊಂಡಿದ್ದು, ಬೆಳೆ ಗಾರರು ನಷ್ಟದ ಆತಂಕ ಎದುರಿಸುತ್ತಿದ್ದಾರೆ.

ಮೇ ಅಂತ್ಯದಲ್ಲಿ ಭಾರೀ ಮಳೆಯಾಗಿ ನಂತರ ನಾಲ್ಕೆöÊದು ದಿನಗಳ ಕಾಲ ಬಿಸಿಲು ಬಂದಿತ್ತು. ನಂತರ ಜೂನ್ ಮೊದಲನೇ ವಾರದಿಂದಲೇ ಮಳೆ ಆರಂಭಗೊAಡಿದ್ದು, ಇದೀಗ ಧಾರಾಕಾರವಾಗಿ ಸುರಿಯುತ್ತಿರುವ ಹಿನ್ನೆಲೆ ಕಾಫಿ ಗಿಡಗಳಿಗೆ ಸ್ಪೆçà ಮಾಡಲು ಬಹುತೇಕ ಮಂದಿಗೆ ಸಾಧ್ಯವಾಗಿರಲಿಲ್ಲ. ಇದರೊಂದಿಗೆ ತೋಟದಲ್ಲಿ ಚಿಗುರು, ಗಿಡಕಪಾತು ಮಾಡಲೂ ಆಗಿರಲಿಲ್ಲ. ಪ್ರಾರಂಭದಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಾತಾವರಣ ಅತೀ ಶೀತದಿಂದ ಕೂಡಿದ್ದು, ಗಾಳಿಯ ರಭಸಕ್ಕೆ ತೋಟದಲ್ಲಿನ ಮರದ ಎಲೆಗಳು ಕಾಫಿ ಗಿಡಗಳ ಮೇಲೆ ಬಿದ್ದ ಪರಿಣಾಮ ಕೊಳೆರೋಗ ಅತೀ ಶೀಘ್ರವಾಗಿ ವ್ಯಾಪಿಸಿದೆ.

ಕಾಫಿ ಗಿಡದ ಕೊಂಬೆಗಳೊAದಿಗೆ ಫಸಲು ಕಾಫಿ ಕಾಯಿ ಇದೀಗ ಕೊಳೆರೋಗಕ್ಕೆ ತುತ್ತಾಗುತ್ತಿದೆ. ಪುಷ್ಪಗಿರಿ ಬೆಟ್ಟಶ್ರೇಣಿಯ ಗ್ರಾಮಗಳಾದ ಬೆಟ್ಟದಳ್ಳಿ, ಪುಷ್ಪಗಿರಿ, ಹಂಚಿನಳ್ಳಿ, ಕುಮಾರಳ್ಳಿ, ಹೆಗ್ಗಡಮನೆ, ಶಾಂತಳ್ಳಿ, ಕೂತಿ, ಕುಡಿಗಾಣ, ಬೀದಳ್ಳಿ, ಕೊತ್ನಳ್ಳಿ, ತಡ್ಡಿಕೊಪ್ಪ, ಹರಗ, ಬೆಟ್ಟದಕೊಪ್ಪ, ನಾಡ್ನಳ್ಳಿ, ಕುಂದಳ್ಳಿ, ಬೀಕಳ್ಳಿ, ಬೆಂಕಳ್ಳಿ ಗ್ರಾಮಗಳಲ್ಲಿ ಅವಧಿಗೂ ಪೂರ್ವ, ವಾಡಿಕೆಗಿಂತಲೂ ಅತೀ ಹೆಚ್ಚು ಮಳೆಯಾದ ಹಿನ್ನೆಲೆ ಕಾಫಿ ತೋಟದಲ್ಲಿ ಕೊಳೆರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ.

ಮಳೆ-ಗಾಳಿ ಹೆಚ್ಚಿರುವ ಹಿನ್ನೆಲೆ ತೋಟದೊಳಗೆ ಮರಗಳ ರೆಂಬೆಕೊAಬೆ ಎಲೆಗಳು ಉದುರಿ ಕಾಫಿ ಗಿಡಗಳ ಮೇಲೆಯೇ ಬಿದ್ದಿದ್ದು, ಇವುಗಳನ್ನು ತೆರವುಗೊಳಿಸಲು ಅಸಾಧ್ಯವಾದ ಹಿನ್ನೆಲೆ ಕೊಳೆರೋಗ ಕಾಣಿಸಿಕೊಂಡಿವೆ.

ತಾಲೂಕಿನ ಸೂರ್ಲಬ್ಬಿ ಗ್ರಾಮ ವ್ಯಾಪ್ತಿಯಲ್ಲಿ

(ಮೊದಲ ಪುಟದಿಂದ) ಪ್ರಸಕ್ತ ವರ್ಷ ಇಲ್ಲಿಯವರೆಗೆ ೧೧೦ ಇಂಚಿಗೂ ಅಧಿಕ ಮಳೆ ಯಾಗಿದೆ. ವಾತಾ ವರಣದಲ್ಲಿ ಅತಿಯಾದ ಶೀತ ಉಂಟಾಗಿ ಕೊಳೆರೋಗ ಉಲ್ಬಣಿಸಿದೆ ಎಂದು ಕೃಷಿಕರು ಅಭಿಪ್ರಾಯಿಸಿದ್ದಾರೆ.

ಬೆಟ್ಟಶ್ರೇಣಿಯ ಪ್ರದೇಶವಾಗಿರುವ ಶಾಂತಳ್ಳಿ ವ್ಯಾಪ್ತಿಯಲ್ಲಿ ಕಾಫಿ ಹಾಗೂ ಏಲಕ್ಕಿ ಬೆಳೆಗಳನ್ನು ಬೆಳೆಯುತ್ತಿದ್ದು, ಎಡೆಬಿಡದೆ ಸುರಿದ ಮಳೆಯಿಂದಾಗಿ ಕಾಫಿಯೊಂದಿಗೆ ಏಲಕ್ಕಿ ಬೆಳೆಗೂ ಕೊಳೆರೋಗ ಬಾಧಿಸಿದೆ.

ಪ್ರಸಕ್ತ ವರ್ಷದ ಹೂ ಮಳೆ ವಿಳಂಬವಾದ್ದರಿAದ ಅನೇಕ ಕೃಷಿಕರು ಬೋರ್‌ವೆಲ್, ಕೆರೆ, ಹೊಳೆಗಳಿಂದ ಕಾಫಿ ತೋಟಕ್ಕೆ ನೀರು ಹಾಯಿಸಿ, ಕಾಫಿ ಗಿಡಗಳಲ್ಲಿ ಹೂ ಬಿಡುವಂತೆ ಮಾಡಿದ್ದರು. ಅದಾದ ನಂತರ ಕಾಫಿ ಕಾಯಿ ಬಿಡುವ ಸಂದರ್ಭವೂ ನೀರು ಹಾಯಿಸಿದ್ದರಿಂದ ಉತ್ತಮವಾಗಿ ಫಸಲು ಮೂಡಿತ್ತು.

ಮೇ ಅಂತ್ಯದಲ್ಲಿಯೇ ಭಾರೀ ಮಳೆಯಾಗಿದ್ದು, ಜೂನ್‌ನಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುವುದು, ಸ್ಪೆçà ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳು ಬಾಕಿಯಾಗಿರುವುದರಿಂದ ಕೊಳೆರೋಗ ಹೆಚ್ಚು ಹರಡಲು ಕಾರಣವಾಗಿದೆ.

ಒಂದೊಮ್ಮೆ ಮಳೆ ಬಿಡುವು ನೀಡಿದರೆ ಉಳಿಕೆ ಕೆಲಸಗಳನ್ನು ಮಾಡಿಕೊಂಡು ಕೊಳೆರೋಗವನ್ನು ಹತೋಟಿಗೆ ತರಬಹುದು. ಮಳೆ ಹೀಗೇ ಮುಂದುವರೆದರೆ ಕಾಯಿಕಟ್ಟಿರುವ ಕಾಫಿಯೂ ನೆಲಕ್ಕಚ್ಚಿ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ತೋಳೂರುಶೆಟ್ಟಳ್ಳಿಯ ಕೃಷಿಕ ಕೆ.ಕೆ. ಸುಧಾಕರ್ ಅಭಿಪ್ರಾಯಿಸಿದ್ದಾರೆ.

-ವಿಜಯ್ ಹಾನಗಲ್