ಸುಂಟಿಕೊಪ್ಪ, ಜೂ. ೨೭: ರಾಷ್ಟಿçÃಯ ಹೆದ್ದಾರಿಯಲ್ಲಿ ಅಜಾಗರೂಕತೆಯಿಂದ ಭಾರೀ ವಾಹನ ಚಲಾಯಿಸಿದ ಚಾಲಕನನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರಿಗೆ ತೈಲ ಸರಬರಾಜು ಮಾಡಿ ಮಂಗಳೂರಿಗೆ ವಾಪಸ್ ಹೋಗುತ್ತಿದ್ದ ಲಾರಿ ಯೊಂದು ಕುಶಾಲನಗರದಿಂದ ಸುಂಟಿಕೊಪ್ಪದ ಕಡೆಗೆ ಚಾಲಕನ ನಿಯಂತ್ರಣವಿಲ್ಲದೆ ಕೊಡಗರಹಳ್ಳಿ ಸಮೀಪ ರಸ್ತೆಯಲ್ಲಿ ಕಾರಿಗೆ ಜಖಂಗೊಳಿಸಿ ರಸ್ತೆಯಲ್ಲಿ ಸಾಗುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸುಂಟಿಕೊಪ್ಪದಲ್ಲಿ (ಕೆಎ೧೯-ಎಎ೭೩೪೨) ಲಾರಿಯನ್ನು ತಡೆಯುವ ಮೂಲಕ ಮುಂದಾಗುವ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಲಾರಿಯಲ್ಲ್ಲಿದ್ದ ಚಾಲಕ ಕಂಠಪೂರ್ತಿ ಮದÀ್ಯ ಸೇವಿಸಿದ್ದು ಲಾರಿಯಿಂದ ಕೆÀಳಗಿಳಿಸಲು ಹರಸಾಹಸ ಪಡುವಂತಾಯಿತು. ಲಾರಿಯಲ್ಲಿದ್ದ ಮತ್ತೊಬ್ಬ ಸಹಾಯಕ ಪೊಲೀಸರನ್ನು ಕಂಡು ಲಾರಿಯಿಂದ ಜಿಗಿದು ಪರಾರಿಯಾಗಿರುತ್ತಾನೆ. ಲಾರಿ ಚಾಲಕ ಕೊಣನೂರಿನ ಅಭಿಲಾಶ್ ಹಾಗೂ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.