ಮಡಿಕೇರಿ, ಜೂ. ೨೫ : ಕೊಡಗು ಸಬ್ ಜೂನಿಯರ್ ಬಾಲಕರ ಹಾಕಿ ತಂಡಕ್ಕೆ ತಾ. ೨೭ರಂದು ಪೊನ್ನಂಪೇಟೆಯ ಟರ್ಫ್ ಗ್ರೌಂಡ್‌ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಹಾಕಿ ಕೂರ್ಗ್ ವತಿಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

೨೦೦೯ ಜನವರಿ ೧ ಹಾಗೂ ನಂತರದಲ್ಲಿ ಜನಿಸಿದ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಕ್ರೀಡಾಪಟುಗಳು ಜುಲೈ ೨ ರಿಂದ ೬ ರವರೆಗೆ ಬಳ್ಳಾರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಹೆಚ್ಚಿನ ಮಾಹಿತಿಗೆ ಮೊ: ೯೯೮೦೫೨೩೪೪೩ ಅನ್ನು ಸಂಪರ್ಕಿಸಬಹುದು.