ಮಡಿಕೇರಿ, ಜೂ. ೨೪: ಅಂಚೆ ಇಲಾಖೆಯಲ್ಲಿ ಇನ್ಫೋರ್‌ಮೇಷನ್ ಟೆಕ್ನಾಲಜಿ ೨.೦ (ಐ.ಟಿ ೨.೦) ಹೊಸ ತಂತ್ರಾAಶವನ್ನು ಕೇಂದ್ರ ಅಂಚೆ ಇಲಾಖೆ ಜಾರಿಗೆ ತಂದಿದ್ದು, ಈ ತಂತ್ರಾAಶದಡಿಯಲ್ಲಿ ಹಲವಾರು ಡಿಜಿಟಲ್ ಅಂಚೆ ಸೇವೆಗಳನ್ನು ಮಡಿಕೇರಿಯಲ್ಲಿಯೂ ಪ್ರಾರಂಭಿಸಲಾಗಿದೆ. ಹೊಸ ತಂತ್ರಾAಶದಡಿಯ ಸೇವೆಗಳಿಗೆ ಮಡಿಕೇರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ತಾ.೨೩ ರಂದು ಚಾಲನೆ ನೀಡಲಾಯಿತು. ಕೊಡಗು ಅಂಚೆ ವಿಭಾಗದ ಅಧೀಕ್ಷಕ ಎಸ್.ಪಿ ರವಿ, ಸಹಾಯಕ ಅಂಚೆ ಅಧೀಕ್ಷಕ ಕೆ.ಎಂ ಗಜೇಂದ್ರ, ಮಡಿಕೇರಿ ಉಪ ಅಂಚೆ ವಿಭಾಗದ ನಿರೀಕ್ಷಕ ಬಿ.ಡಿ ಮಂಜುನಾಥ್, ಮಡಿಕೇರಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಎಸ್.ವಿ ಮಂಜುನಾಥ್ ಹಾಗೂ ಸಿಬ್ಬಂದಿ ಈ ಸಂದರ್ಭ ಹಾಜರಿದ್ದರು.

ಮೈಸೂರಿನ ಸಿ.ಇ.ಪಿ.ಟಿ ಸಂಸ್ಥೆಯಿAದ ತಂತ್ರಾAಶ ಅಭಿವೃದ್ಧಿ

ಐ.ಟಿ ೨.೦ ತಂತ್ರಾAಶವನ್ನು ಅಂಚೆ ಇಲಾಖೆ ಬಳಸಲು ಮೈಸೂರಿನಲ್ಲಿರುವ ಸಿ.ಇ.ಪಿ.ಟಿ (ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಪೋಸ್ಟಲ್ ಟೆಕ್ನಾಲಜಿ) ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅತ್ಯಾಧುನಿಕ ತಂತ್ರಾAಶವು ಅಂಚೆ ಇಲಾಖೆಯ ಸೇವೆಗಳನ್ನು ಡಿಜಿಟಲೀಕರಣ ಗೊಳಿಸಿದೆ.

ಪೋಸ್ಟ್ಮ್ಯಾನ್‌ಗಳು ಬಳಸುತ್ತಿದ್ದ ಆ್ಯಪ್ ಕೂಡ ಹೊಸ ತಂತ್ರಾAಶದಡಿ ಬದಲಾಗಿದೆ. ಈ ಹಿಂದೆ ಪತ್ರಗಳನ್ನು ಮನೆಮನೆಗೆ

(ಮೊದಲ ಪುಟದಿಂದ) ತಲುಪಿಸುತ್ತಿದ್ದ ಅಂಚೆ ಸಿಬ್ಬಂದಿ, ಕಚೇರಿಗೆ ಬಂದ ಬಳಿಕ ಕಂಪ್ಯೂಟರ್‌ನಲ್ಲಿ ಪತ್ರ ತಲುಪಿಸಿರುವ ಕುರಿತು ನಮೂದಿಸುತ್ತಿದ್ದರು. ಆದರೆ ಇದೀಗ ಎಂ.ಎA.ಎ (ಇಂಟರ್‌ನಲ್ ಮೊಬೈಲ್ ಆ್ಯಪ್)ಅನ್ನು ಬಳಸುವ ಅಂಚೆ ಸಿಬ್ಬಂದಿ, ಮನೆಗೆ ಪತ್ರ ತಲುಪಿಸಿದ ಕೂಡಲೇ ಅಲ್ಲಿಯೇ ‘ಡೆಲಿವರ್ಡ್’ ಆಯ್ಕೆ ಮೂಲಕ ತಮ್ಮ ಆ್ಯಪ್‌ನಲ್ಲಿ ಪತ್ರ ತಲುಪಿಸಿರುವ ಮಾಹಿತಿಯನ್ನು ನಮೂದಿಸಬಹುದಾಗಿದೆ. ಹೊಸ ತಂತ್ರಾAಶವು ‘ಓಪನ್ ನೆಟ್‌ವರ್ಕ್’ಗೆ ಸೇರಿದ್ದರಿಂದ ಸ್ಥಳೀಯವಾಗಿ ಲಭ್ಯವಿರುವ ಬಿ.ಎಸ್.ಎನ್.ಎಲ್ ಸೇರಿದಂತೆ ಇತರ ಯಾವುದೇ ಟೆಲಿಕಾಮ್ ಸಂಸ್ಥೆಗಳ ನೆಟ್‌ವರ್ಕ್ ಅನ್ನೂ ಬಳಸಬಹುದಾಗಿರುವುದರಿಂದ ಅಂಚೆ ಸೇವೆಗಳನ್ನು ಒದಗಿಸಲು ಸುಲಭ ಮಾರ್ಗ ದೊರೆತಿದೆ.

ಯು.ಪಿ.ಐ ಸೇವೆಗಳೂ ಲಭ್ಯ

ಅಂಚೆ ಇಲಾಖೆಗಳ ಸೇವೆಗಳಾದ ಸ್ಪೀಡ್ ಪೋಸ್ಟ್, ಕೊರಿಯರ್ ಇತ್ಯಾದಿಗಳ ಶುಲ್ಕವನ್ನು ಹಲವು ಬ್ಯಾಂಕ್‌ಗಳು ಸೇರಿದಂತೆ ಗೂಗಲ್-ಪೇ, ಫೋನ್-ಪೇ ಇತ್ಯಾದಿ ಸಂಸ್ಥೆಗಳು ಒದಗಿಸುವ ಯು.ಪಿ.ಐ (ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್) ಮುಖಾಂತರವೇ ಮಾಡಬಹುದಾಗಿದೆ. ಈ ಯು.ಪಿ.ಐ ಸೇವೆಗಳು ಈ ಹಿಂದೆ ಕೆಲ ಪ್ರಧಾನ ಕಚೇರಿಗಳಲ್ಲಿ ಇತ್ತಾದರೂ ಇದೀಗ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲ ಉಪ ಕಚೇರಿಗಳಲ್ಲೂ ಅಳವಡಿಸಲಾಗಿದ್ದು, ಸಾರ್ವಜನಿಕರು ಈ ಮೂಲಕ ಸೇವೆಗಳನ್ನು ಪಡೆಯಬಹುದಾಗಿದೆ.

ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ

ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸೇವೆಯಲ್ಲಿ ಪದೇಪದೇ ಎದುರಾಗುತ್ತಿದ್ದ ಅಡೆತಡೆಗಳಿಂದ ಅಂಚೆ ಸೇವೆಗಳನ್ನು ನೀಡಲು ಕಷ್ಟಸಾಧ್ಯವಾಗುತ್ತಿತ್ತು. ರಿಜಿಸ್ಟರ್ ಪೋಸ್ಟ್, ಪೋಸ್ಟಲ್ ಆರ್ಡರ್, ಸ್ಟಾö್ಯಂಪ್ ಮಾರಾಟ ಸೇರಿದಂತೆ ಇತರ ಸೇವೆಗಳು ಹಳೆಯ ‘ಸ್ಯಾಪ್’ ತಂತ್ರಾAಶದ ಮೂಲಕ ಒದಗಿಸಲು ನೆಟ್‌ವರ್ಕ್ ಸಮಸ್ಯೆ ಇದ್ದರೆ ಕಷ್ಟಸಾಧ್ಯವಾಗುತ್ತಿತ್ತು. ಆದರೆ ಇದೀಗ

ನಿಖರ ವಿಳಾಸ ಗುರುತಿಗೆ ಡಿಜಿಪಿನ್

ಹೊಸ ತಂತ್ರಾAಶದಡಿ ೧೦ ಅಂಕಿಯ ಅಕ್ಷರ-ಸಂಖ್ಯೆಯುಳ್ಳ ಡಿಜಿಪಿನ್ ಇನ್ನು ಮುಂದೆ ಅಂಚೆ ಸೇವೆಗಳಾದ ಪತ್ರ ರವಾನೆ, ಸ್ಪೀಡ್‌ಪೋಸ್ಟ್ ಕೊರಿಯರ್ ಇತ್ಯಾದಿಗಳನ್ನು ನಿಖರವಾಗಿ ತಲುಪಿಸಲು ಬಳಸಲಾಗುವುದು. ಈ ಡಿಜಿಪಿನ್ ಭಾರತದಾದ್ಯಂತ ಪ್ರತಿ ೪*೪ ಚದರ ಮೀಟರ್‌ಗೆ ವಿಶಿಷ್ಟವಾಗಿದ್ದು, ಇಷ್ಟೆ ನಿಖರತೆಯಲ್ಲಿ ಅಂಚೆ ಸೇವೆಗಳನ್ನು ಪೂರೈಸಲು ಸಹಕಾರಿಯಾಗಲಿದೆ. ಅಂದರೆ ಪ್ರತಿ ೧೬ ಚದರ ಮೀಟರ್‌ಗೆ ಒಂದು ಡಿಜಿಪಿನ್ ಸೃಷ್ಟಿಯಾಗಲಿದೆ. ಅಂಚೆ ಸೇವೆಗಳು ತಲುಪಬೇಕಾದ ಸ್ಥಳದ ಡಿಜಿಪಿನ್‌ನೊಂದಿಗೆ ಪೂರ್ಣ ವಿಳಾಸ ಹಾಗೂ ಪಿನ್‌ಕೋಡ್ ಅನ್ನು ಸೇರಿಸುವ ಅವಕಾಶವೂ ಇದೆ. ಪ್ರತಿ ಡಿಜಿಪಿನ್‌ಗೆ ಅದರದೇ ಆದ ಕ್ಯೂ.ಆರ್ ಕೋಡ್ ಇದ್ದು ಇದನ್ನು ಕೂಡ ಅಗತ್ಯವಿದ್ದಲ್ಲಿ ಬಳಸಬಹುದಾಗಿದೆ. ವಿಳಾಸ, ಪಿನ್‌ಕೋಡ್ ಇಲ್ಲದಿದ್ದರೂ ಸೇವೆ ತಲುಪಬೇಕಾಗಿರುವ ವ್ಯಕ್ತಿಯ ಹೆಸರಿನೊಂದಿಗೆ ಕೇವಲ ಡಿಜಿಪಿನ್ ಮಾತ್ರ ಅಳವಡಿಸಿದರಷ್ಟೆ ಸಾಕು, ಈ ಮೂಲಕವೂ ಪತ್ರ ಅಂತಹ ವ್ಯಕ್ತಿಗಳಿಗೆ ತಲುಪಲಿದೆ. ಸ್ಪೀಡ್ ಪೋಸ್ಟ್, ಕೊರಿಯರ್‌ಗಳಿಗೆ ಡಿಜಿಪಿನ್‌ನೊಂದಿಗೆ ಪಿನ್‌ಕೋಡ್ ಅಳವಡಿಕೆಯೂ ಮಾಡುವ ಅಗತ್ಯವಿದೆ. ಐ.ಐ.ಟಿ. ಹೈದರಾಬಾದ್ ಹಾಗೂ ಇಸ್ರೋ ಸಹಕಾರದಿಂದ ಡಿಜಿಪಿನ್ ಅಸ್ತಿತ್ವಕ್ಕೆ ತರಲಾಗಿದೆ.

ನಿಮ್ಮ ಡಿಜಿಪಿನ್ ತಿಳಿದುಕೊಳ್ಳಿ

ಭಾರತೀಯ ಅಂಚೆ ಇಲಾಖೆಗೆ ಸೇರಿರುವ ಈ ಅಧಿಕೃತ ವೆಬ್‌ಸೈಟ್ - hಣಣಠಿs://ಜಚಿಛಿ.iಟಿಜiಚಿಠಿosಣ.gov.iಟಿ/mಥಿಜigiಠಿiಟಿ/home ಗೆ ತೆರಳಿ ನಿಮ್ಮ ಮೊಬೈಲ್ ಫೋನಿನ ‘ಲೊಕೇಷನ್’ ಸೇವೆ ಆನ್ ಮಾಡಿ ‘ಐ ಕನ್ಸೆಂಟ್’ ಆಯ್ಕೆ ಒತ್ತಿದರೆ ನೀವಿರುವ ಸ್ಥಳದ ಮ್ಯಾಪ್ ಪ್ರದರ್ಶನವಾಗುತ್ತದೆ. ಅದರಲ್ಲಿ ನಿಮ್ಮ ನಿಖರವಾದ ಸ್ಥಳವೂ ಗೋಚರಿಸಲಿದ್ದು, ಈ ಸ್ಥಳಕ್ಕೆ ಡಿಜಿಪಿನ್ ಸೃಷ್ಟಿಯಾಗಲಿದೆ.