ಹೆಬ್ಬಾಲೆ, ಜೂ. ೨೧: ಇಲ್ಲಿನ ಹೆಬ್ಬಾಲೆ, ನಡುಬೀದಿ ಹಾಗೂ ಹಳಗೋಟೆ ಗ್ರಾಮದ ವೀರಮಡಿವಾಳರ ಸಂಘದ ಹಾಗೂ ದೇವಾಲಯ ಸಮಿತಿ ವತಿಯಿಂದ ಏರ್ಪಡಿಸಿದ್ದ ಗ್ರಾಮದ ಶ್ರೀ ಲಕ್ಷಿö್ಮÃ ದೇವಿ, ಶ್ರೀ ಗಣಪತಿ, ಶ್ರೀ ಭೈರವೇಶ್ವರ ದೇವಾಲಯದ ೮ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ದೇವಾಲಯದ ಅರ್ಚಕ ಚಂದ್ರ ಶೆಟ್ಟಿ ನೇತೃತ್ವದಲ್ಲಿ ಗಣಪತಿ ಹೋಮದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ನಡೆದವು. ಮುಂಜಾನೆಯಿAದಲೇ ಕುಂಭಾಭಿಷೇಕ ಸೇರಿದಂತೆ ಕಲಶ ಪೂಜೆ, ಹೂವಿನ ಪೂಜೆ, ಕುಂಕುಮಾರ್ಚನೆ ನಡೆಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆ ಕಾವೇರಿ ನದಿಗೆ ತೆರಳಿ ಗಂಗೆ ಪೂಜೆಯೊಂದಿಗೆ ಮಹಿಳೆಯರು ಪೂರ್ಣಕುಂಭ ಕಲಶ ಹೊತ್ತು ಮಂಗಳವಾದ್ಯದೊAದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ನಂತರ ದೇವಾಲಯಕ್ಕೆ ಬಂದು ಕಲಶ ಪ್ರತಿಷ್ಠಾನ ಮಾಡಲಾಯಿತು. ಬಳಿಕ ಶ್ರೀ ಮಹಾಲಕ್ಷಿö್ಮ, ಶ್ರೀ ಭೈರವೇಶ್ವರ, ಗಣಪತಿ ದೇವರಿಗೆ ಕಲಾಹೋಮ ಹಾಗೂ ಶುಭ ಕರ್ನಾಟಕ ಲಗ್ನದಲ್ಲಿ ಗೋಪುರ ಕಲಶ ಪ್ರತಿಷ್ಠಾಪನೆ ಮಾಡಲಾಯಿತು.

ಹೆಬ್ಬಾಲೆ ಗ್ರಾಮಸ್ಥರು ಸೇರಿದಂತೆ ಹಳಗೋಟೆ, ಮರೂರು, ಆರನೇ ಹೊಸಕೋಟೆ ಸುತ್ತಮುತ್ತಲಿನ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾದರು.

ಮಹಾಪೂಜೆಯ ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ದೇವಾಲಯಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಮಂಜು, ಉಪಾಧ್ಯಕ್ಷ ಮಂಜು ಶೆಟ್ಟಿ, ಖಜಾಂಚಿ ಹೆಚ್.ವಿ. ಸೋಮಣ್ಣ, ಸದಸ್ಯರಾದ ಯೋಗೇಶ್, ಮಹೇಶ್, ವೀರಪ್ಪ, ಬಸವಣ್ಣ, ಶಿವಕುಮಾರ್, ಮಹದೇವ, ಪ್ರಕಾಶ, ಪುಟ್ಟಣ್ಣ, ಚಂದ್ರ, ವೀರಾಜಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.