ಸಿದ್ದಾಪುರ, ಜೂ. ೨೧: ಮೂರ್ನಾಡು ಮುಸ್ಲಿಂ ಜಮಾಅತ್‌ನ ವಾರ್ಷಿಕ ಮಹಾಸಭೆಯು ಹಿರಿಯರಾದ ಡಾ. ಕುಂಞÂ ಅಬ್ದುಲ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ಥಳೀಯ ಖತೀಬರಾದ ರಶೀದ್ ಇರ್ಶಾದಿ ಪ್ರಾರ್ಥನೆಯೊಂದಿಗೆ ಆರಂಭಗೊAಡ ಸಭೆಯಲ್ಲಿ ಮಹಾಸಭೆಯ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಲಾಯಿತು.

ನAತರ ನೂತನ ಮೂರ್ನಾಡು ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೆ.ಎ. ಅಬ್ದುಲ್ ಮಜೀದ್, ಉಪಾಧ್ಯಕ್ಷರಾಗಿ ಎಂ.ಎ. ರಿಯಾಜ್ ಪಾಶಾ, ಪ್ರಧಾನ ಕಾರ್ಯದರ್ಶಿ ಕೆ.ಎ. ಖಾಸಿಂ, ಕಾರ್ಯದರ್ಶಿ ಪಿ.ಎಸ್. ನಾಸಿರ್, ಜಂಟಿ ಕಾರ್ಯದರ್ಶಿಗಳಾಗಿ ಕೆ.ಎ. ಅಹ್ಮದ್, ಎಂ.ಎಸ್. ಸಫೀಕ್, ಖಜಾಂಚಿಯಾಗಿ ಎ.ಎಂ. ಸಾದಿರ್, ಸದಸ್ಯರುಗಳಾಗಿ ಎಂ.ಎ. ಮಮ್ಮದಾಲಿ, ಪಿ.ಎಂ. ಅಲವಿ, ಕೆ.ಎಚ್. ಯಾಕೂಬ್, ಯು.ಎಂ. ಮುಸ್ತಫಾ, ಕೆ.ಎ. ಖಾದರ್, ಸಿ.ಎಂ. ಸೈಯದ್ ಅಲವಿ, ಕೆ.ಎಚ್. ಜುಬೈರ್ ಅವರನ್ನು ಆಯ್ಕೆ ಮಾಡಲಾಯಿತು.