ಚೆಯ್ಯಂಡಾಣೆ, ಜೂ. ೨೧: ಚಾಲಕನ ನಿಯಂತ್ರಣ ತಪ್ಪಿದ ಮಹೇಂದ್ರ ಬೊಲೆರೋ ವಾಹನವೊಂದು ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ವೀರಾಜಪೇಟೆ ನಾಪೋಕ್ಲು ಮುಖ್ಯ ರಸ್ತೆಯ ನರಿಯಂದಡ ಗ್ರಾಮದಲ್ಲಿ ನಡೆದಿದೆ.

ಚೆಯ್ಯಂಡಾಣೆ ಕಡೆಯಿಂದ ಕಡಂಗಕ್ಕೆ ತೆರಳುತ್ತಿದ್ದ ಬೊಲೆರೋ ವಾಹನ ನರಿಯಂದಡ ಗ್ರಾಮದ ಕರಡ ಸೇತುವೆ ಸಮೀಪದ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊವ್ವೇರಿಯಂಡ ಲವಕುಮಾರ್ ಎಂಬವರ ಗದ್ದೆಗೆ ಉರುಳಿ ಬಿದ್ದಿದೆ. ಅಪಘಾತವಾದ ಅನತಿ ದೂರದಲ್ಲೇ ಕೆರೆ ಕೂಡ ಇದ್ದು ಭಾರೀ ಅನಾಹುತ ತಪ್ಪಿದಂತಾಗಿದೆ. ಅಪಘಾತದಿಂದ ಬೊಲೆರೋ ವಾಹನ ಜಖಂಗೊAಡಿದ್ದು ವಾಹನದಲ್ಲಿ ಚಾಲಕನೊಬ್ಬನೇ ಇದ್ದು ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.