(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಜೂ. ೨೦: ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ರಾಜಾಸೀಟ್ ಉದ್ಯಾನವನದಲ್ಲಿ ಗ್ರೇಟರ್ ರಾಜಾಸೀಟ್‌ಗೆ ಹೊಂದಿಕೊAಡAತೆ ಗ್ಲಾಸ್ ಬ್ರಿಡ್ಜ್ (ಗ್ಲಾಸ್ ಸ್ಕೆöÊವಾಕ್) ಹಾಗೂ ಫುಡ್‌ಕೋರ್ಟ್ ನಿರ್ಮಾಣಕ್ಕೆ ಇದೀಗ ಅನುಮೋದನೆ ದೊರೆತಿದೆ.
ಪ್ರೆöÊವೇಟ್ ಪಬ್ಲಿಕ್ ಪಾರ್ಟ್ನರ್ ಶಿಪ್ (ಪಿಪಿಪಿ) ಆಧಾರದಲ್ಲಿ ಈ ಯೋಜನೆಯನ್ನು ಆರಂಭಿಸುವ ಕುರಿತ ಪ್ರಸ್ತಾವನೆ ಕಳೆದ ೨೦೨೪ರಲ್ಲಿ ಆರಂಭಗೊAಡಿತ್ತು. ಈ ಸಂದರ್ಭ ಈ ವಿಚಾರ ಬೆಳಕಿಗೆ ಬಂದೊಡನೆ ರಾಜಾಸೀಟ್ ಉದ್ಯಾನವನ ಪ್ರದೇಶದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡುವುದು ಸೂಕ್ತವಲ್ಲ. ಇದು ಭವಿಷ್ಯದಲ್ಲಿ ಹಲವು ಸಮಸ್ಯೆಗಳಿಗೆ ಎಡೆಯಾಗಲಿದೆ ಎಂಬದಾಗಿ ಪರಿಸರವಾದಿಗಳು ಸೇರಿ ಹಲವರು ವಿರೋಧವನ್ನು ವ್ಯಕ್ತಪಡಿಸಿದ್ದರು.
೧೮.೬.೨೦೨೪ರಲ್ಲಿ ತೋಟಗಾರಿಕಾ ಇಲಾಖೆಯ ಸರಕಾರದ ಕಾರ್ಯದರ್ಶಿಗಳು, ಇಲಾಖೆಯ ನಿರ್ದೇಶಕರು, ಕೊಡಗು ಜಿಲ್ಲಾಧಿಕಾರಿಗಳು ಸೇರಿದಂತೆ ಇನ್ನಿತರ ಪ್ರಮುಖ ಅಧಿಕಾರಿಗಳ ಪಾಲ್ಗೊಳ್ಳುವಿಕೆಯೊಂದಿಗೆ ನಡೆದಿದ್ದ ವೀಡಿಯೋ ಸಂವಾದದ ಸಭೆಯಲ್ಲಿ ಗ್ರೇಟರ್ ರಾಜಾಸೀಟ್‌ಗೆ ಹೊಂದಿಕೊAಡAತೆ ಪಿಪಿಪಿ ಅಡಿ ಗ್ಲಾಸ್ ಸ್ಕೆöÊವಾಕ್ ನಿರ್ಮಾಣ ಹಾಗೂ ಟಾಯ್‌ಟ್ರೆöÊನ್ ಪ್ರದೇಶದಲ್ಲಿ ಫುಡ್‌ಕೋರ್ಟ್ ಸ್ಥಾಪನೆಯ ವಿಚಾರ ಪ್ರಸ್ತಾಪಕ್ಕೆ ಬಂದಿತ್ತು.
ಆ ಸಂದರ್ಭದಲ್ಲಿ ಮಣ್ಣಿನ ದೃಢತೆ ಸ್ಕೆöÊವಾಕ್ ದೃಢತೆ, ಸುರಕ್ಷತೆ ಬಗ್ಗೆ ಅನುಭವಿ ಪರಿಣಿತರ ಸಲಹೆ ಪಡೆಯುವ ಕುರಿತು ಜಿಲ್ಲಾಧಿಕಾರಿಗಳು ಗಮನ ಸೆಳೆದಿದ್ದರು. ಜಿಲ್ಲೆಯಲ್ಲಿ ಪರಿಸರವಾದಿಗಳು ಹಲವು ಹೊಸ ಯೋಜನೆಗಳ ಬಗ್ಗೆ ಪ್ರತಿರೋಧ ವ್ಯಕ್ತಪಡಿಸಿರುವ ಉದಾಹರಣೆಗಳಿರುವ ಬಗ್ಗೆಯೂ ಜಿಲ್ಲಾಧಿಕಾರಿಗಳು ಗಮನಕ್ಕೆ ತಂದಿದ್ದರು. ಉದ್ದೇಶಿತ ಯೋಜನೆಯ ಪ್ರಸ್ತಾಪದ ಬಗ್ಗೆ ಆ ಸಂದರ್ಭದಲ್ಲಿ ‘ಶಕ್ತಿ’ ವರದಿ ಮಾಡಿತ್ತು.
ಇದೀಗ ತಾ. ೧೬.೬.೨೦೨೫ ರಂದು ತೋಟಗಾರಿಕೆ ಇಲಾಖೆಯ ನಿರ್ದೇಶಕರು ಈ ಎರಡು ಯೋಜನೆಗಳಿಗೆ ಅನುಮೋದನೆ ದೊರೆತಿರುವುದನ್ನು ಸ್ಪಷ್ಟಪಡಿಸಿದ್ದು, ಈ ಬಗ್ಗೆ ಕೊಡಗು ಜಿಲ್ಲೆಯ ತೋಟಗಾರಿಕಾ ಇಲಾಖಾ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಯೋಜನೆಯ ನಿರ್ಮಾಣದ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಇದರಲ್ಲಿ ೧೭.೫.೨೦೨೫ರಲ್ಲಿ ನಡೆದ ಪಿಪಿಪಿ ಯೋಜನೆಗಳ ೩೩ನೇ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ನಡಾವಳಿ ಸರಕಾರದ ಕಾರ್ಯದರ್ಶಿಗಳು, ತೋಟಗಾರಿಕಾ ಮತ್ತು ರೇಷ್ಮೆ ಇಲಾಖೆಯವರ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾಧಿಕಾರಿಗಳ ಜತೆ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆ ಹಾಗೂ ೧೨.೬.೨೦೨೫ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರ ಅನುಮೋದನೆಯನ್ವಯ ಈ ಸೂಚನೆ ನೀಡಿರುವುದನ್ನು ತೋಟಗಾರಿಕಾ ಇಲಾಖಾ ನಿರ್ದೇಶಕರು ಉಲ್ಲೇಖ ಮಾಡಿದ್ದಾರೆ.
ಮುಖ್ಯವಾಗಿ ಪಿಪಿಪಿ ಆಧಾರದಲ್ಲಿ ಗ್ಲಾಸ್ ಸ್ಕೆöÊವಾಕ್ ಮತ್ತು ಫುಡ್‌ಕೋರ್ಟ್ ನಿರ್ಮಾಣಕ್ಕೆ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವರು ಕರ್ನಾಟಕ ಸರಕಾರ ಇವರ ಅನುಮೋದನೆ ದೊರೆತಿರುವ ಹಿನ್ನೆಲೆ ಈ ಯೋಜನೆಗೆ ಕೈಗೊಳ್ಳಬೇಕಾದ ಅಗತ್ಯ ಟೆಂಡರ್ ಪ್ರಕ್ರಿಯೆಗೆ ಪೂರಕವಾಗುವ ವೇಳಾಪಟ್ಟಿಯನ್ನು ತಯಾರಿಸಿ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.