ಮಡಿಕೇರಿ, ಜೂ. ೨೦: ಕರ್ನಾಟಕ ಆಂತರಿಕ ಭದ್ರತ ಪಡೆ ಹಾಗೂ ಭಯೋತ್ಪಾದನ ನಿಗ್ರಹ ದಳ (ಐ.ಎಸ್.ಡಿ.-ಸಿ.ಸಿ.ಟಿ.) ಪೊಲೀಸ್ ಅಧೀಕ್ಷಕರಾಗಿ ಜಿಲ್ಲೆಯ ಮೂಲದ ಮಂಡುವAಡ ಕಾಮಯ್ಯ ಗಣೇಶ್ ಅಧಿಕಾರ ಸ್ವೀಕರಿಸಿದ್ದಾರೆ.

ಜಿಲ್ಲೆಯ ಬಿಳಿಗೇರಿ ಮೂಲದವರಾದ ಗಣೇಶ್ ಅವರು ವೀರಪ್ಪನ್ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದರು. ರಾಜ್ಯ ಗುಪ್ತಚರ ಇಲಾಖೆಯಲ್ಲಿ ವಿ.ಐ.ಪಿ. ಭದ್ರತೆ/ಬಾಂಬ್ ನಿಷ್ಕಿçಯ ದಳ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಕೇಂದ್ರ ಗುಪ್ತಚರ ಇಲಾಖೆಯೂ ಕರ್ತವ್ಯ ನಿರ್ವಹಿಸಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಕ್ಸಲ್ ನಿಗ್ರಹ ಪಡೆ ಮತ್ತು ರಾಜ್ಯ ಗುಪ್ತಚರ ವಿಭಾಗದಲ್ಲಿ ಮುಖ್ಯಮಂತ್ರಿಗಳ ಭದ್ರತೆ ವಿಭಾಗದಲ್ಲಿ ಎಸ್.ಪಿ. ಆಗಿ ಕೆಲಸ ಮಾಡಿದ್ದಾರೆ. ೨೦೦೫ರಲ್ಲಿ ಮುಖ್ಯಮಂತ್ರಿಗಳ ಪದಕ ಮತ್ತು ೨೦೧೭ರಲ್ಲಿ ಪೊಲೀಸ್ ಮೇರು ಸೇವಾ ಪದಕ ಪಡೆದಿದ್ದಾರೆ.