ಕೂಡಿಗೆ, ಜೂ. ೧೯: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಖ್ಯ ಕ್ರೆಸ್ಟ್ ಗೇಟ್ಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳನ್ನು ನೀರು ಹರಿಯುವ ಸ್ಧಳದಲ್ಲಿ ಅಳವಡಿಕೆ ಮಾಡಿರುವುದರಿಂದ, ಕ್ರೆಸ್ಟ್ ಗೇಟ್ಗಳ ಮೂಲಕ ಹೊರ ಬೀಳುವ ನೀರಿನ ದೃಶ್ಯ ರಮಣೀಯವಾಗಿ ಕಂಡುಬರುತ್ತದೆ.
ನೀರಾವರಿ ಇಲಾಖೆ ವತಿಯಿಂದ ಈಗಾಗಲೇ ಅಣೆಕಟ್ಟೆಯ ಮೇಲ್ಭಾಗ ಮುಂಭಾಗದ ಬೃಂದಾವನ ಮತ್ತು ಮುಖ್ಯ ದ್ವಾರ ಸೇರಿದಂತೆ ಅಣೆಕಟ್ಟೆ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಮಾಡಿದ್ದು, ಸಂಜೆಯ ಸಂಗೀತ ಕಾರಂಜಿ ವೀಕ್ಷಣೆಗೆ ಪ್ರವಾಸಿಗರಿಗೆ ಹೆಚ್ಚು ಮೆರುಗು ನೀಡುತ್ತಿದೆ. ಈ ದೃಶ್ಯ ವೀಕ್ಷಣೆಗೆ ಸಂಜೆಯ ವೇಳೆಯಲ್ಲಿ ನೂರಾರು ಪ್ರವಾಸಿಗರು, ಅಕ್ಕ ಪಕ್ಕದ ಗ್ರಾಮಗಳ ಗ್ರಾಮಸ್ಥರು ಬರುತ್ತಿದ್ದಾರೆ. -ಕೆ.ಕೆ.ಎನ್. ಶೆಟ್ಟಿ