*ಗೋಣಿಕೊಪ್ಪ, ಜೂ. ೧೯ : ಪೊನ್ನಂಪೇಟೆ ರಸ್ತೆಯ, ಅರುವತೊಕ್ಲು ಸರ್ವದೈವತಾ ಶಾಲೆಯ ಸಮೀಪ ನಿನ್ನೆ ರಾತ್ರಿ ವಾಹನ ಡಿಕ್ಕಿಯಾಗಿ ಬಿ.ವಿ ಶಶಿಧರ್ ಗಂಭೀರ ಗಾಯಗಳಾಗಿ ಚಿಕಿತ್ಸೆಗೆ ಒಳಗಾಗಿದ್ದಾರೆ.
ಬುಧವಾರ ರಾತ್ರಿ ನಡೆದ ಈ ಘಟನೆಯಲ್ಲಿ ಡಿಕ್ಕಿಪಡಿಸಿದ ವಾಹನ ಸ್ಥಳದಿಂದ ಪರಾರಿಯಾಗಿದೆ. ಇಂದು ವಾಹನವನ್ನು ಪೊಲೀಸರು ಪತ್ತೆ ಹಚ್ಚಿ ವಾಹನ ಚಾಲಕ ಅರುವತ್ತೊಕ್ಲು ಗ್ರಾಮದ ಕೆ. ವಸಂತ ಎಂದು ಪತ್ತೆ ಹಚ್ಚಿದ್ದಾರೆ. ಶಶಿಧರ್ ಅವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.