ಕೂಡಿಗೆ, ಜೂ, ೧೫: ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಒಳಹರಿವು ಹೆಚ್ಚಳ ವಾಗುತ್ತಿರುವ ಕಾರಣ ಅಣೆಕಟ್ಟೆ ಯಿಂದ ನದಿಗೆ ೫ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.

ಅಣೆಕಟ್ಟೆಗೆ ಒಳ ಹರಿವು ೪೬೮೦ ಕ್ಯೂಸೇಕ್ಸ್ ನೀರು ಹರಿದು ಬಂದಿದ್ದು, ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಖ್ಯ ಕ್ರೇಸ್ಟ್ ಗೇಟ್‌ಗಳ ಮೂಲಕ ೩ಸಾವಿರ ಮತ್ತು ವಿದ್ಯುತ್ ಘಟಕದ ಮೂಲಕ ೨ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.