ಮಡಿಕೇರಿ, ಜೂ. ೧೦ : ಕೂಡುಮಂಗಳೂರು ಗ್ರಾಮದ ಮಾರುಕಟ್ಟೆ ಬಳಿ ಕಳೆದ ೫-೬ ವರ್ಷಗಳಿಂದ ಗುಜುರಿ ಆಯ್ದುಕೊಂಡು ಮಾರುಕಟ್ಟೆ ಶೆಡ್‌ನಲ್ಲೇ ತಂಗುತ್ತಿದ್ದ ರಾಜಣ್ಣ ಎಂಬವರು ಮೃತರಾಗಿದ್ದು ಅವರ ವಾರಸುದಾರರಿದ್ದಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ. ರಾಜಣ್ಣ ಅವರು ತಾ.೮ ರಂದು ಮೃತರಾಗಿದ್ದು, ಕೂಡುಮಂಗಳೂರು ಪಂಚಾಯಿತಿ ಅಧ್ಯಕ್ಷ, ಕುಶಾಲನಗರ ಗ್ರಾಮಾಂತರ ಠಾಣೆಗೆ ಘಟನೆ ಬಗ್ಗೆ ದೂರು ನೀಡಿದ್ದರು. ಮೃತರು ಅಂದಾಜು ೬೫ ರಿಂದ ೭೦ ವರ್ಷದವರಾಗಿದ್ದು ೫ ಅಡಿ ೫ ಇಂಚು ಎತ್ತರ ಹಾಗೂ ನೀಲಿ ಬಣ್ಣದ ಶರ್ಟ್ ಧರಿಸಿದ್ದರು. ವಾರಸುದಾರರು ಕುಶಾಲನಗರ ಗ್ರಾಮಾಂತರ ಠಾಣೆ, ಮೊ.ಸಂಖ್ಯೆ: ೯೪೮೦೮೦೪೯೬೩ ಅನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ.